Crop Compensation: ನಿಮ್ಮ ಖಾತೆಗೆ ಬರಪರಿಹಾರ ಹಣ ಬಂತಾ…? ಈ ರೀತಿ ಚೆಕ್ ಮಾಡಿಕೊಳ್ಳಿ

ಬರ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ ಇಲ್ಲವೇ ಎಂದು ಈ ರೀತಿಯಾಗಿ ಪರೀಕ್ಷಿಸಿಕೊಳ್ಳಿ.

Crop Compensation Amount Status Check: ಈ ಬಾರಿ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿರುವುದು ಎಲ್ಲರಿಗು ತಿಳಿದೇ ಇದೆ. ಮಳೆಯ ಅಭಾವದಿಂದ ಸಾಕಷ್ಟು ರೈತರು ತಮ್ಮ ಬೆಳೆಯನ್ನು ಕಳೆದುಕೊಂಡಿದ್ದಾರೆ. ಬೆಳೆ ಹಾನಿಯಾದ ಕಾರಣ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದೀಗ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ ಇಲ್ಲವೇ ಎಂದು ಈ ರೀತಿಯಾಗಿ ಪರೀಕ್ಷಿಸಿಕೊಳ್ಳಿ.

Crop Compensation Amount Updates
Image Credit: Newindianexpress

ನಿಮ್ಮ ಖಾತೆಗೆ ಬರಪರಿಹಾರ ಹಣ ಬಂತಾ…?
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಬಿಕ್ಕಟ್ಟಿನಿಂದ ರಾಜ್ಯ ಸರ್ಕಾರ ಬರ ಪರಿಹಾರ ಕುರಿತು ಕೊನೆಗೂ ಕೇಂದ್ರ ಸುಪ್ರೀಂಕೋರ್ಟ್ ನಲ್ಲಿ ಆದೇಶವನ್ನು ಹೊರಡಿಸಿದ್ದು ಈ ಒಂದು ವಾರಗಳ ಒಳಗಾಗಿ ಎಲ್ಲ ರೈತರುಗಳ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣ ಜಮಾ ಮಾಡಬೇಕೆಂದು ಆದೇಶ ಮಾಡಿದೆ.

ರಾಜ್ಯ ಸರ್ಕಾರದ ಅಂಕಿ ಅಂಶಗಳ ಆಧಾರದ ಮೇಲೆ ರಾಜ್ಯದ ಎಲ್ಲಾ ರೈತರಿಗೆ 18000 ಕೋಟಿ ರೂಪಾಯಿಗಳಷ್ಟು ಬರ ಪರಿಹಾರ ಹಣ ಬರಬೇಕಾಗಿತ್ತು ಆದರೆ ಕೇಂದ್ರ ಸರ್ಕಾರ ಕೇವಲ 3454 ಕೋಟಿ ರೂಪಾಯಿಗಳಷ್ಟು ಹಣ ನೀಡಿದೆ. ಸಪ್ಟೆಂಬರ್ 13ನೇ ದಿನಾಂಕದಂದು 2023 ರಂದು ರಾಜ್ಯದಲ್ಲಿ ಬರಗಾಲ ಉಂಟಾಗಿದ್ದರಿಂದ ತಾಲೂಕು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿತ್ತು. ಅದರಂತೆ 18174 ಕೋಟಿ ಹಣ ರೈತರಿಗೆ ಕೊಟ್ಟಿಲ್ಲ. ಸದ್ಯ FID ಹೊಂದಿರುವ ಎಲ್ಲಾ ರೈತರ ಖಾತೆಗಳಿಗೆ ನೇರವಾಗಿ DBT ಮುಖಾಂತರ ಹಣ ವರ್ಗಾವಣೆ ಮಾಡಲಾಗಿದೆ.

Crop Compensation Amount
Image Credit: Newsmeter

ರೈತರ ಬರ ಪರಿಹಾರ ಪಟ್ಟಿಯನ್ನು ಈ ರೀತಿ ಚೆಕ್ ಮಾಡಿಕೊಳ್ಳಿ
ಮೊದಲು ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ 2023-24 ವರ್ಷವನ್ನು ಆಯ್ಕೆ ಮಾಡಿ, ಋತುವಿನ ಆಯ್ಕೆಯಲ್ಲಿ ಮುಂಗಾರು ಮತ್ತು ವಿಪತ್ತು ಬರ ಎಂದು ಆಯ್ಕೆ ಮಾಡಿ, ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ಜಾಗ ಇರುವ ಗ್ರಾಮವನ್ನು ಆಯ್ಕೆ ಮಾಡಿ ವರದಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವಾದರೆ ನಿಮ್ಮ ಗ್ರಾಮದ ಲೆಕ್ಕಾಧಿಕಾರಿಯನ್ನು ಭೇಟಿಮಾಡಿ.

Crop Compensation Amount Status Check
Image Credit: Bansalnews

Join Nadunudi News WhatsApp Group

Join Nadunudi News WhatsApp Group