Farmers Compensation: ಇನ್ನುಮುಂದೆ ಈ ID ಇಲ್ಲದಿದ್ದರೆ ಪರಿಹಾರ ಇಲ್ಲ, ರಾಜ್ಯದ ಎಲ್ಲಾ ರೈತರಿಗೆ ಜಾರಿಗೆ ಬಂತು ಇನ್ನೊಂದು ಹೊಸ ನಿಯಮ.
ರೈತರ ಬಳಿ ಈ ದಾಖಲೆ ಇಲ್ಲದಿದ್ದರೆ ಸರ್ಕಾರದಿಂದ ಯಾವುದೇ ಪರಿಹಾರ ಮೊತ್ತವನ್ನು ಪಡೆಯಲು ಸಾಧ್ಯವಾಗುವುದಿಲ್ಲ
Crop Compensation For Farmers: ಸದ್ಯ ರಾಜ್ಯದಲ್ಲಿ ಅನೇಕ ಯೋಜನೆಗಳು ಅನುಷ್ಠಾನಗೊಳ್ಳುತ್ತಿದೆ ಎನ್ನಬಹುದು. ಕಾಂಗ್ರೆಸ್ ಜಾರಿಗೊಳಿಸುತ್ತಿರುವ ಯೋಜನೆಗಳು ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ. ಸದ್ಯ ರಾಜ್ಯ ಸರ್ಕಾರ ರೈತರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ ಎನ್ನಬಹುದು. ಈ ಬಾರಿ ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ ರೈತರು ಬಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತಾಗಿದೆ.
ರಾಜ್ಯದ ಎಲ್ಲಾ ರೈತರಿಗೆ ಜಾರಿಗೆ ಬಂತು ಇನ್ನೊಂದು ಹೊಸ ನಿಯಮ
ರೈತರು ಬೆಳೆದ ಬೆಳೆ ಮಳೆಯ ಕೊರೆಯಿಂದಾಗಿ ರೈತರ ಕೈಗೆ ತಲುಪಿಲ್ಲ. ರೈತರಿಗೆ ಲಾಭ ದೊರೆಯದೆ ನಷ್ಟದಲ್ಲಿ ರೈತರು ಕಣ್ಣೀರಿಡುವಂತಾಗಿದೆ. ಸದ್ಯ ಸರ್ಕಾರ ರೈತರಿಗೆ ಬರ ಪರಿಹಾರ ನೀಡಲು ಮುಂದಾಗಿದೆ. ಆದರೆ ನೀವು ಸರ್ಕಾರ ಬರ ಪರಿಹಾರವನ್ನು ಪಡೆಯಬೇಕಿದ್ದರು ಸರ್ಕಾರ ಈ ನಿಯಮವನ್ನು ಪಾಲಿಸುವುದು ಅಗತ್ಯ.
ರೈತರ ಬೆಳೆ ಹಾನಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಯೋಜನೆ ಹೂಡಿದೆ. ಆದರೆ ನೀವು ಸರ್ಕಾರದ ಬರ ಪರಿಹಾರವನ್ನು ಪಡೆಯಲು ಈ ದಾಖಲೆಯನ್ನು ಹೊಂದುವುದು ಕಡ್ಡಾಯವಾಗಿದೆ. ನಿಮ್ಮ ಬಳಿ ಈ ದಾಖಲೆ ಇಲ್ಲದಿದ್ದರೆ ಸರ್ಕಾರದಿಂದ ಯಾವುದೇ ಪರಿಹಾರ ಮೊತ್ತವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಇನ್ನುಮುಂದೆ ಈ ID ಇಲ್ಲದಿದ್ದರೆ ರೈತರಿಗೆ ಬೆಳೆ ಪರಿಹಾರ ಸಿಗಲ್ಲ
ಬೆಳೆ ವಿಮೆ ನೋಂದಣಿ, ಕನಿಷ್ಠ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ, ಬೆಳೆ ಸಾಲ ಪಡೆಯಲು, ಬೆಳೆ ಹಾನಿಗೆ ಪರಿಹಾರ ಮತ್ತಿತರ ಸೌಲಭ್ಯಗಳಿಗೆ ರೈತ ಗುರುತಿನ ಸಂಖ್ಯೆ (FID) ಕಡ್ಡಾಯವಾಗಿದೆ. ಎಫ್ ಐಡಿ ಮಾಡದ ರೈತರು ಕೂಡಲೇ ತಮ್ಮ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆಯೊಂದಿಗೆ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ತೆರಳಿ ನೋಂದಣಿ ಮಾಡಿಸಿ ಎಫ್ ಐಡಿ ಸಂಖ್ಯೆ ಪಡೆಯಬೇಕು.
ಸರ್ಕಾರದ ಪರಿಹಾರ ಸೌಲಭ್ಯವು ನೋಂದಾಯಿತ ಭೂ ಪ್ರದೇಶಗಳಿಗೆ ಮಾತ್ರ ಲಭ್ಯವಿರುವುದರಿಂದ ರೈತರು ಕೂಡಲೇ ತಮ್ಮಲ್ಲಿರುವ ಎಲ್ಲಾ ಜಮೀನಿನ ಸರ್ವೆ ನಂಬರ್ ಪ್ರದೇಶಗಳನ್ನು FRUITS ಸಾಫ್ಟ್ ವೇರ್ ನಲ್ಲಿ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬರ ಪರಿಹಾರ ಪಡೆಯಲು FID ಸಂಖ್ಯೆ ಕಡ್ಡಾಯ ಎನ್ನುವ ಬಗ್ಗೆ ನಿಮಗೆ ಅರಿವಿರಲಿ.