Crop Compensation: ಬೆಲೆ ಪರಿಹಾರದ ಹಣ ಬಾರದೆ ಇರುವವರಿಗೆ ಸರ್ಕಾರದ ಸೂಚನೆ, ತಕ್ಷಣ ಈ ಕೆಲಸ ಮಾಡಿ.

ಬೆಲೆ ಪರಿಹಾರದ ಹಣ ಬಾರದೆ ಇರುವವರು ತಕ್ಷಣ ಈ ಕೆಲಸ ಮಾಡಿ

Crop Compensation New Update: ರಾಜ್ಯ ಸರ್ಕಾರ ಬೆಳೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಬೆಳೆ ನಷ್ಟದಿಂದ ಸಮಸ್ಯೆಗೆ ಒಳಗಾಗಿರುವ ರೈತರಿಗೆ ಬೆಳೆ ಪರಿಹಾರ ಮೊತ್ತ ನೆರವಾಗುತ್ತಿದೆ. ರೈತರು ಸರ್ಕಾರದ ಪರಿಹಾರ ಮೊತ್ತವನ್ನು ಪಡೆಯುತ್ತಿದ್ದಾರೆ.

ಈಗಾಗಲೇ ಮೊದಲ ಹಂತದಲ್ಲಿ ಅರ್ಹ ರೈತರಿಗೆ ಗರಿಷ್ಠ ರೂ. 2000 ವರೆಗೆ ಅರ್ಹವಾಗಿ ಪಾವತಿಸಿದ ಬೆಳೆ ನಷ್ಟ ಪರಿಹಾರದ ಮೊತ್ತವನ್ನು ಪರಿಗಣಿಸಿ, ಉಳಿದ ಬೆಳೆ ನಷ್ಟ ಪರಿಹಾರ ಮೊತ್ತವನ್ನು ಅರ್ಹರಿಗೆ ಪಾವತಿಸಲು ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿದೆ. ಆದರೆ ಕೆಲ ಅರ್ಹ ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಇದಕ್ಕೆ ಕಾರಣ ಏನಿರಬಹುದು..? ಎಂದು ಜನರು ಯೋಚಿಸುತ್ತಿದ್ದಾರೆ. ಸದ್ಯ ಬೆಳೆ ಪರಿಹಾರ ಮೊತ್ತ ಬಾರದೆ ಇರುವ ರೈತರಿಗೆ ರಾಜ್ಯ ಸರ್ಕಾರ ಮಹತ್ವದ ಸೂಚನೆಯನ್ನು ಹೊರಡಿಸಿದೆ.

Crop Compensation New Update
Image Credit: Live Mint

ಬೆಲೆ ಪರಿಹಾರದ ಹಣ ಬಾರದೆ ಇರುವವರಿಗೆ ಸರ್ಕಾರದ ಸೂಚನೆ, ತಕ್ಷಣ ಈ ಕೆಲಸ ಮಾಡಿ
ಇನ್ನು ಸರ್ಕಾರದಿಂದ ಬೆಳೆ ಪರಿಹಾರ ಮೊತ್ತ ಬಿಡುಗಡೆ ಆಗಿದ್ದರು ಕೂಡ ಕೆಲ ರೈತರ ಖಾತೆಗೆ ಬೆಳೆ ಪರಿಹಾರ ಮೊತ್ತ ಜಮಾ ಆಗಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ನಿಮ್ಮ ಹೆಸರು ಆಧಾರ್ ಮತ್ತು ಫ್ರೂಟ್ಸ್ ಐಡಿಯೊಂದಿಗೆ ಹೊಂದಿಕೆಯಾಗದಿದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇದ್ದರೆ ನಿಮ್ಮ ಬ್ಯಾಂಕ್‌ ನ IFSC ಕೋಡ್ ತಪ್ಪಾಗಿದ್ದರೆ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿರುವ ಕಾರಣ ಹಾಗೂ ಇತರೆ ಕಾರಣಗಳಿಂದ ಪರಿಹಾರವನ್ನು ಜಮಾ ಮಾಡಲಾಗುವುದಿಲ್ಲ.

ರೈತರು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. FRUITS ಸಾಫ್ಟ್‌ ವೇರ್‌ ನಲ್ಲಿ ಹೆಸರನ್ನು ನವೀಕರಿಸಬೇಕು. ರೈತರು ಬ್ಯಾಂಕ್‌ ಗೆ ಹೋಗಿ ಎನ್‌ಪಿಸಿಐ ಮಾಡಬೇಕು. ಖಾತೆಯನ್ನು ನಿರ್ಬಂಧಿಸಿದರೆ ಅಥವಾ ಮುಚ್ಚಿದ್ದರೆ, ಅದನ್ನು ಮರು-ತೆರೆಯಬೇಕು. ರೈತರು ಬ್ಯಾಂಕ್ ಖಾತೆಗೆ ಹೋಗಿ IFSC, N.P.C.I ಅನ್ನು ನವೀಕರಿಸಬೇಕು. ಇಷ್ಟೆಲ್ಲ ಪ್ರಕ್ರಿಯೆ ಪೂರ್ಣಗೊಂಡಿದ್ದರೆ ಮಾತ್ರ ನಿಮ್ಮ ಖಾತೆಗೆ ಬೆಳೆ ಪರಿಹಾರ ಮೊತ್ತ ಜಮಾ ಆಗುತ್ತದೆ. ರೈತರು https://parihara.karnataka.gov.in/service92/ ಈ ವೆಬ್‌ ಸೈಟ್‌ ನಲ್ಲಿ ಬರ ಪರಿಹಾರ ಮೊತ್ತ ಜಮಾ ಆಗಿದೆಯಾ ಇಲವೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು.

Join Nadunudi News WhatsApp Group

Crop Compensation Latest News
Image Credit: Karnataka Times

Join Nadunudi News WhatsApp Group