Cyber Crime: ಆಧಾರ್ ಕಾರ್ಡ್ ಬಳಸಿ ನಿಮ್ಮ ಖಾತೆ ಖಾಲಿ ಮಾಡಲಾಗುತ್ತಿದೆ, ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಸರ್ಕಾರ.
ಆಧಾರ್ ಕಾರ್ಡ್ ಮತ್ತು ಫಿಂಗರ್ ಪ್ರಿಂಟ್ ಬಳಸಿಕೊಂಡು ವಂಚಕರು ಜನರ ಬ್ಯಾಂಕ್ ಖಾತೆಗಳನ್ನ ಹ್ಯಾಕ್ ಮಾಡುತ್ತಿದ್ದಾರೆ.
Bank Account Scam: ಇತ್ತೀಚಿಗೆ ಜನರಿಗೆ ಹೆಚ್ಚಾಗಿ ವಂಚನೆಗಳು ನಡೆಯುತ್ತಿದೆ. ಮೊದಲೆಲ್ಲ ಒಟಿಪಿ cvv ಬ್ಯಾಂಕ್ ನ ಇತರ ಮಾಹಿತಿಯಿಂದ ವಂಚಕರು ವಂಚನೆಯನ್ನು ಮಾಡುತ್ತಾರೆ ಮತ್ತು ನಿಮ್ಮ ಖಾತೆಯನ್ನು ಕಾಲಿ ಮಾಡುತ್ತಾರೆ.
ಆದರೆ ಈಗ ಈ ಎಲ್ಲ ಮಾಹಿತಿ ಇಲ್ಲದೆ ಸಹ ವಂಚಕರು ನಿಮ್ಮ ಬ್ಯಾಂಕ್ ಖಾತೆ ಕಾಲಿ ಮಾಡುತ್ತಾರೆ. ಆದ್ದರಿಂದ ನೀವು ವಂಚನೆಯಿಂದ ಎಚ್ಚರವಾಗಿರಬೇಕು. ವಂಚಕರು ನಿಮ್ಮ ಬ್ಯಾಂಕ್ ಕಾತೆಯನ್ನು ಕಾಲಿ ಮಾಡಬಹುದು. ನೀವು ಆದಷ್ಟು ಎಚ್ಚರ ಇರುವುದು ಒಳ್ಳೆಯದ್ದು.
ವಂಚಕರು ಶುರು ಮಾಡಿದ ಹೊಸ ವಂಚನೆ ಬಗ್ಗೆ ಮಾಹಿತಿ
ಇತ್ತೀಚಿಗೆ ಒಟಿಪಿ, CVV ಸಂಖ್ಯೆ ಮತ್ತು ಬ್ಯಾಂಕ್ ವಿವರಗಳಿಲ್ಲದೆ ನಿಮ್ಮ ಖಾತೆಯನ್ನು ಸಹ ತೆರವುಗೊಳಿಸಬಹುದು. ವಂಚಕರು ಈಗ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ. ಈ ಹಿಂದೆಯೂ ಇಂತಹ ಪ್ರಕರಣಗಳು ಹಲವು ಬಂದಿದೆ.
ಸೈಬರ್ ಅಪರಾಧಿಗಳು ಸಿಲಿಕಾನ್ ಫಂಗರ್ ಪ್ರಿಂಟ್ ಗಳು ಮತ್ತು ಬಯೋಮೆಟ್ರಿಕ್ ಯಂತ್ರಗಳನ್ನು ತಯಾರಿಸುತ್ತಿದ್ದಾರೆ ಮತ್ತು ಎಟಿಎಂ ಗಳನ್ನೂ ಅವರ ನಕಲಿ ಫಿಂಗರ್ ಪ್ರಿಂಟ್ ಗಳೊಂದಿಗೆ ನಿರ್ವಹಿಸಲಾಗುತ್ತಿದೆ. ಹೀಗಾಗಿ ಜನರ ಖಾತೆಯಿಂದ ಲಕ್ಷಾಂತರ ರೂಪಾಯಿ ನಾಪತ್ತೆಯಾಗುತ್ತದೆ. ಈ ವರ್ಷ ಸಾಕಷ್ಟು ವಂಚನೆಗಳು ದಾಖಲಾಗಿವೆ.
ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ
ನೀವು ಇಂತಹ ವಂಚನೆಯಿಂದ ಬಚಾವ್ ಆಗಲು ನಿಮ್ಮ ಆಧಾರ್ ಲಾಕ್ ಮಾಡಿ ಮತ್ತು ಅಗತ್ಯವಿದ್ದಾಗ ಮಾತ್ರ ಅದನ್ನು ಅನ್ ಲಾಕ್ ಮಾಡುವ ಮೂಲಕ ಅದನ್ನು ಬಳಸಿ.
ಡೇಟಾ ಸೋರಿಕೆಯಾಗಿದ್ದರು, ಅದನ್ನು ಲಾಕ್ ಮಾಡುವ ಮೂಲಕ ಯಾರು ನಿಮ್ಮ ಆಧಾರ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದೇ ಸಮಯದಲ್ಲಿ ಮಾಸ್ಕ್ ಬೇಸ್ ಬಳಸುವುದರ ಮೂಲಕ ವಂಚನೆಯನ್ನು ತಪ್ಪಿಸಬಹುದು.