Credit Card Fraud: ದೋನಿ ಮತ್ತು ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ದೊಡ್ಡ ಮೋಸ, ಮಾಸ್ಟರ್ ಪ್ಲಾನ್ ಮಾಡಿದ ಕಳ್ಳರು.

Fraud in the name of Dhoni and Shilpa Shetty And Other Celebrities: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಯ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ.

ಇದೀಗ ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ (Shilpa Shetty), ಎಂ,ಎಸ್ ಧೋನಿ (M.S Dhoni), ಅಭಿಷೇಕ್ ಬಚ್ಚನ್ (Abhishek Bacchan), ಇಮ್ರಾನ್ ಹಶ್ಮಿ (Ibran Hashmi), ಮಾಧುರಿ ದೀಕ್ಷಿತ್ (Madhuri Deekshit) ಸೇರಿದಂತೆ ಇತರ ಬಾಲಿವುಡ್ ಸ್ಟಾರ್ ಗಳ ಹಾಗೂ ಕ್ರಿಕೆಟ್ ಸ್ಟಾರ್ ಗಳ ಅಕೌಂಟ್ ಗಳನ್ನೂ ಸೈಬರ್ ಖದೀಮರು ಕನ್ನ ಹಾಕುತ್ತಿದ್ದಾರೆ.

Cyber ​​thieves committed credit card fraud in Dhoni's name
Image Credit: ndtv

ಸೈಬರ್ ಖದೀಮರು ಸೆಲೆಬ್ರಿಟಿಗಳ ಪ್ಯಾನ್ ಕಾರ್ಡ್ ವಿವರಗಳನ್ನು GST ಗುರುತಿನ ಸಂಖ್ಯೆ ಏನಂದ್ರೆ GSTIN ನಿಂದ ಪಡೆದುಕೊಂಡಿದ್ದಾರೆ. ಅಲ್ಲದೆ ಆಧಾರ್, ಪ್ಯಾನ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಎಲ್ಲ ಆನ್ಲೈನ್ ನಲ್ಲೆ ಕಲೆಕ್ಟ್ ಮಾಡಿದ್ದಾರೆ.

Cyber ​​thieves who did credit card fraud in the name of Abhishek Bachchan
Image Credit: instagram

ಪುಣೆಯ ಮೂಲದ ಮೂಲದ ಪಿನ್ ಟೆಕ್ ಸ್ಟಾರ್ ಅಪ್ ವನ್ ಕಾರ್ಡ್ ನಿಂದ ಶಿಲ್ಪಾ ಶೆಟ್ಟಿ, ಎಂ,ಎಸ್ ಧೋನಿ, ಅಭಿಷೇಕ್ ಬಚ್ಚನ್, ಇಮ್ರಾನ್ ಹಶ್ಮಿ, ಮಾಧುರಿ ದೀಕ್ಷಿತ್ ಸೇರಿದಂತೆ ಇತರ ಬಾಲಿವುಡ್ ಸ್ಟಾರ್ ಗಳ ಹಾಗೂ ಕ್ರಿಕೆಟ್ ಸ್ಟಾರ್ ಗಳ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ ಗಳನ್ನೂ ಪಡೆದುಕೊಂಡು ಈ ಕೃತ್ಯವನ್ನು ಸೈಬರ್ ಖದೀಮರು ಮಾಡಿದ್ದಾರೆ.

Cyber ​​thieves committed credit card fraud in the name of Shilpa Shetty
Image Credit: instagram

ಆರೋಪಿಗಳು ಕೃತ್ಯ ಎಸಗಿದವರ ಮೇಲೆ ಕಂಪನಿಗೆ ಮಾಹಿತಿ ಸಿಕ್ಕಿದೆ. ಇದಕ್ಕೂ ಮೊದಲು ಖದೀಮರು 21 .33 ಲಕ್ಷ ರೂ. ಗಳ ಮೌಲ್ಯದ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಇದನ್ನು ತಿಳಿದ ಕಂಪನಿಯೂ ಪೊಲೀಸರಿಗೆ ತಿಳಿಸಿದೆ. ಪೊಲೀಸರು ತನಿಖೆ ಆರಂಭಿಸಿದ್ದು ಹೆಚ್ಚಿನ ಮಾಹಿತಿ ನೀಡಲು ಆಗಲ್ಲ ಎಂದು ಹೇಳಿದ್ದಾರೆ.

Join Nadunudi News WhatsApp Group

Cyber ​​thieves who committed credit card fraud in the name of Emraan Hashmi
Image Credit: indiatimes

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರನ್ನು ಸುನಿಲ್ ಕುಮಾರ್, ವಿಶ್ವ, ಭಾಸ್ಕರ್ ಶರ್ಮಾ, ಪುನೀತ್, ಮೊಹಮ್ಮದ ಆಸಿಫ್ ಮತ್ತು ಪಂಕಜ್ ಮಿಶ್ರ ಎಂದು ಗುರುತಿಸಲಾಗಿದೆ.

ಅಲ್ಲದೆ GSTIN ನ ಮೊದಲ ಎರಡು ನಂಬರ್ ರಾಜ್ಯದ ಕೋಡ್ ಮಾತು ಮುಂದಿನ ಹತ್ತು ನಂಬರ್ PAN ಸಂಖ್ಯೆ ಎಂದು ಆರೋಪಿಗಳು ಸರಿಯಾಗಿ ತಿಳಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Join Nadunudi News WhatsApp Group