Darshan House Seized: ನಟ ದರ್ಶನ್ ಗೆ ಇನ್ನೊಂದು ಸಂಕಷ್ಟ, ಸ್ಪೋಟಕ ಹೇಳಿಕೆ ನೀಡಿದ DK ಶಿವಕುಮಾರ್.

ದರ್ಶನ್ ಜೈಲು ಪಾಲಾದ ಬೆನ್ನಲ್ಲೇ ಇದೀಗ ದರ್ಶನ್ ಮನೆ ತೆರವು

D.K Shivakumar About Darshan House Seized: ಸದ್ಯ ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿಕೊಂಡಿದ್ದಾರೆ. ದರ್ಶನ್ ಹಗೂ ದರ್ಶನ್ ಗೆಳತಿ ಪವಿತ್ರ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ಬಗ್ಗೆ ಎಲ್ಲ ವಿವರವನ್ನು ಪಡೆಯುತ್ತಿದ್ದಾರೆ. ವಿಚಾರಣೆಯ ವೇಳೆ ಸಾಕಷ್ಟು ವಿಚಾರಗಳು ಲಭಿಸಿದೆ.

ಇನ್ನು ದರ್ಶನ್ ಜೈಲು ಸೇರುತ್ತಿದ್ದಂತೆ ದರ್ಶನ್ ಗೆ ಸಂಬಂಧಿಸಿದ ಅನೇಕ ವಿಚಾರಗಳು ವೈರಲ್ ಆಗುತ್ತಿದೆ. ದರ್ಶನ್ ಈ ಹಿಂದೆ ಮಾಡಿದ್ದ ಸಾಕಷ್ಟು ಮೋಸದ ಬಗ್ಗೆ ಒಂದಾದಾಗಿಯೇ ಮಾಹಿತಿ ವೈರಲ್ ಆಗುತ್ತಿದೆ. ಇವೆಲ್ಲದರ ನಡುವೆ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು, ಅತ್ತ ದರ್ಶನ್ ಜೈಲು ಪಾಲಾದ ಬೆನ್ನಲ್ಲೇ ಇದೀಗ ದರ್ಶನ್ ಮನೆ ತೆರವು ಬಗ್ಗೆ ಮಾತುಗಳು ಕೇಳಿಬರುತ್ತಿದೆ.

D.K Shivakumar About Darshan House Seized
Image Credit: India TV News

ನಟ ದರ್ಶನ್ ಗೆ ಇನ್ನೊಂದು ಸಂಕಷ್ಟ
ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣ ತೀವ್ರಗತಿಯಲ್ಲಿ ಸಾಗುತ್ತಿರುವ ಬೆನ್ನಲ್ಲೇ ಇದೀಗ ದರ್ಶನ್ ಅವರ ತೂಗುದೀಪ ನಿಲಯದ ತೆರವಿನ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ದರ್ಶನ್ ಮನೆ ತೆರವುಗೊಳಿಸುವುದರ ಬಗ್ಗೆ ಡಿಕೆ ಶಿವುಕುಮಾರ್ ಪ್ರತಿಕ್ರಿಯಿಸಿದ್ದಾರೆ. ಯಾರೇ ಸ್ಟೇ ತಂದರೂ ಕಾನೂನು ಕ್ರಮ ಕೈಗೊಂಡು ತೆರವುಗೊಳಿಸುತ್ತೇವೆ. ನೀನು ಸ್ಟೇ ತಂದಿದ್ದರು ತೆರವು ಮಾಡುತ್ತೇವೆ, ನಾನು ಸ್ಟೇ ತಂದಿದ್ದರು ತೆರವು ಮಾಡುತ್ತೇವೆ ಎಂದು DCM ಡಿಕೆ ಶಿವುಕುಮಾರ್ ಮಾಹಿತಿ ನೀಡಿದ್ದಾರೆ.

ಸ್ಪೋಟಕ ಹೇಳಿಕೆ ನೀಡಿದ DK ಶಿವಕುಮಾರ್
ರಾಜಕಾಲುವೆಯಲ್ಲಿ ನಟ ದರ್ಶನ್ ಅವರ ಮನೆ ಇದ್ದರೂ ಅದನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ನ್ಯಾಯಾಲಯದಲ್ಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮೌನವಾಗಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು.

Join Nadunudi News WhatsApp Group

ದೊಡ್ಡವರಿಗೆ ಒಂದು ನಿಯಮ ಮತ್ತು ಸಾಮಾನ್ಯ ಜನರಿಗೆ ಮತ್ತೊಂದು ನಿಯಮ ಎಂದು ಜನಸಾಮಾನ್ಯರು ಆರೋಪಿಸಿದರು. ಇದೀಗ ಇದಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದು, ಕಾನೂನು ಪ್ರಕಾರ ದರ್ಶನ್ ಮನೆ ಖಾಲಿ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸರ್ಕಾರ ಮೌಖಿಕ ಸೂಚನೆ ನೀಡಿದೆ. ಸರ್ಕಾರದ ಆದೇಶದ ಅನ್ವಯ ಶೀಘ್ರದಲ್ಲೇ ದರ್ಶನ್ ಮನೆ ತೆರವುಗೊಳಿಸಲಾಗುತ್ತದೆ ಎನ್ನುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಸದ್ಯ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ ಎನ್ನಬಹುದು.

Darshan House Seized
Image Credit: Moneycontrol

Join Nadunudi News WhatsApp Group