New Wine Shops: ರಾಜ್ಯದ ಈ ಭಾಗಗಳಲ್ಲಿ ಹೊಸದಾಗಿ ಆರಂಭ ಆಗಲಿದೆ ವೈನ್ ಶಾಪ್, ರಾಜ್ಯ ಸರ್ಕಾರದ ಚಿಂತನೆ.
ರಾಜ್ಯ ಸರಕಾರ ಹೊಸ ಮಧ್ಯದ ಅಂಗಡಿ ತೆರೆಯುವ ಆಲೋಚನೆಯಲ್ಲಿದ್ದವರಿಗೆ ಮಹತ್ವದ ಮಾಹಿತಿ.
New Wine Shops Open In Karnataka: ಸದ್ಯ ಎಲ್ಲೆಡೆ ಹೆಚ್ಚಿನ ಬೇಡಿಕೆ ಪಡೆದುಕೊಂಡಿರುವುದೆಂದರೆ ಅದು ಮದ್ಯ ಎನ್ನಬಹುದು. ಮದ್ಯ ಆರೋಗ್ಯಕೆ ಎಷ್ಟು ಹಾನಿಕಾರಕ ಎನ್ನುವುದು ತಿಳಿದಿದ್ದರೂ ಕೂಡ ಮದ್ಯ ಸೇವನೆ ಮಾಡುವವರು ಅದನ್ನು ತ್ಯಜಿಸುವುದಿಲ್ಲ. ಇನ್ನು ಮದ್ಯ ಸೇವೆಯಿಂದಲೇ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದರು ಕೂಡ ಎಳ್ಳು ಕೂಡ ಮದ್ಯ ಮಾರಾಟ ನಿಷೇದವಾಗಿಲ್ಲ ಎನ್ನಬಹುದು.
ಇನ್ನು ಯಾವುದೇ ವಸ್ತುವಿನ ಬೆಲೆ ಏರಿಕೆಯಾದರು ಕೂಡ ಆ ವಸ್ತುವಿನ ಖರೀಧಿಯ್ನು ಜನರು ಕಡಿಮೆ ಮಾಡುತ್ತಾರೆ. ಅದು ನಿತ್ಯ ಬಳಕೆಯ ಆಹಾರ ಪದಾರ್ಥವಾಗಿದ್ದರು ಕೂಡ ದುಬಾರಿಯಾದರೆ ಅದರ ಖರೀದಿಯನು ಕಡಿಮೆ ಮಾಡುತ್ತಾರೆ. ಆದರೆ ಮದ್ಯದ ಬೆಲೆ ಎಷ್ಟೇ ದುಬಾರಿಯಾದರೂ ಕೂಡ ಮದ್ಯ ಮಾರಾಟ ಹಾಗೂ ಖರೀದಿ ಕಡಿಮೆಯಾಗುವುದಿಲ್ಲ.
ಹೊಸ ಮಧ್ಯದ ಅಂಗಡಿ ತೆರೆಯುವವರಿಗೆ ರಾಜ್ಯ ಸರ್ಕಾರದ ಮಹತ್ವದ ಮಾಹಿತಿ
ಇನ್ನು ಕಳೆದ ಸಾಕಷ್ಟು ವರ್ಷಗಳಿಂದ ರಾಜ್ಯದಲ್ಲಿ ಹೊಸದಾಗಿ ಮದ್ಯದ ಅಂಗಡಿಯನ್ನು ತೆರೆಯಲು ಸರ್ಕಾರ ಅನುಮತಿ ನೀಡಿಲ್ಲ ಎನ್ನಬಹುದು. ಸಾಕಷ್ಟು ಜನರು ಮದ್ಯದ ಅಂಗಡಿಯನ್ನು ತೆರೆಯುವ ಯೋಜನೆಯಲ್ಲಿದ್ದರು ಸರಕಾರ ಅನುಮತಿ ನೀಡದ ಕಾರಣ ಯೋಜನೆ ಕೈಬಿಟ್ಟಿದ್ದಾರೆ. ಇದೀಗ ರಾಜ್ಯ ಸರಕಾರ ಹೊಸ ಮಧ್ಯದ ಅಂಗಡಿ ತೆರೆಯುವ ಆಲೋಚನೆಯಲ್ಲಿದ್ದವರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ.
ಸದ್ಯ ರಾಜ್ಯದ ಉಪಮುಖ್ಯಮಂತ್ರಿ D .K Shivakumar ಅವರು ರಾಜ್ಯದಲ್ಲಿ ಮದ್ಯದಂಗಡಿ ತೆರೆಯುವುದರ ಬಗ್ಗೆ ಮಾತನಾಡಿದ್ದಾರೆ. ಮದ್ಯದಂಗಡಿ ತೆರೆಯುವುದರ ಬಗ್ಗೆ ಮಹತ್ವದ ಘೋಷಣೆ ಹೊರಡಿಸುವ ಮೂಲಕ ಮದ್ಯ ಪ್ರಿಯರಿಗೆ ಡಿಕೆ ಶಿವಕುಮಾರ್ ಸಿಹಿ ಸುದ್ದಿ ನೀಡಿದ್ದಾರೆ.
ಸೂಕ್ತ ಸ್ಥಳಗಳಲ್ಲಿ ಮದ್ಯದಂಗಡಿ ತೆರೆಯಲು ಸರ್ಕಾರದ ಚಿಂತನೆ
“ಎಲ್ಲರೊಂದಿಗೆ ಚರ್ಚೆ ನಡೆಸಿ ಸೂಕ್ತ ಸ್ಥಳದಲ್ಲಿ ಮದ್ಯದಂಗಡಿ ತೆರೆಯುತ್ತೇವೆ. ಈವರೆಗೆ 30 ವರ್ಷಗಳಿಂದ ಹೊಸ ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡಿರಲಿಲ್ಲ. ಕೆಲವು ಅಂಗಡಿಯವರು 4 ರಿಂದ 5 ಕೋಟಿ ರೂ. ಗೆ ಪರವಾನಗಿ ಮಾರಾಟ ಮಾಡುತ್ತಿದ್ದಾರೆ. ಉದ್ಯೋಗ ಸೃಷ್ಟಿ ಉದ್ದೇಶದಿಂದ ಹೊಸ ಮದ್ಯದಂಗಡಿ ತೆರೆಯಲು ಉದ್ದೇಶಿಸಲಾಗಿದೆ. ಈ ಬಗ್ಗೆ ಎಲ್ಲರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಮದ್ಯಸೇವನೆ ನಿಲ್ಲಿಸುವುದು ಸಾಧ್ಯವಿಲ್ಲ” ಎಂದು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.