Ads By Google

Set Top Box: ಮನೆಯಲ್ಲಿ ಹೆಚ್ಚು ಟಿವಿ ಬಳಸುವವರಿಗಿ ಬಂತು ಹೊಸ D2H ಆಂಡ್ರಾಯ್ಡ್ ಬಾಕ್ಸ್, ಕಡಿಮೆ ಬೆಲೆ ಮತ್ತು ಹೆಚ್ಚು ಲಾಭ.

D2H Android Set Top Box

Image Source: Telecom talk

Ads By Google

D2H Android Set Top Box: ದೇಶದ ಪ್ರಮುಖ ನೆಟ್ವರ್ಕ್ ಆಗಿರುವ D2h (Direct-To-Home Television) ಆಗಿರುವ ಇತ್ತೀಚಿಗೆ ಹೊಸ ಹೊಸ ಅಪ್ಡೇಟ್ ಗಳನ್ನು ಗ್ರಾಹಕರಿಗೆ ನೀಡುತ್ತಿದೆ. ದೇಶದ ಮೂಲೆ ಮೂಲೆಯ್ಲಲೂ d2h ತನ್ನ ನೆಟ್ ವರ್ಕ್ ಅನ್ನು ಹೊಂದಿದ್ದು ಗ್ರಾಹಕರಿಗೆ ವಿವಿಧ ಸೇವೆಗಳನ್ನು ಪರಿಚಯಿಸುವ ಮೂಲಕ ಇನ್ನಷ್ಟು ಜನಪ್ರಿಯವಾಗಿದೆ.

d2h ಗ್ರಾಹಕರಿಗೆ ಹೊಸ ಸೇವೆಯನ್ನು ನೀಡಲು ಸಿದ್ಧತೆ ನಡೆಸುತ್ತಿದೆ. d2h ನ ಈ ಹೊಸ ಸೌಲಭ್ಯದಿಂದ ಗ್ರಾಹಕರು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

Image Credit: Dreamdth

ಗ್ರಾಹಕರಿಗೆ ಇನ್ನುಮುಂದೆ ಆಂಡ್ರಾಯ್ಡ್ ಸೆಟ್ ಅಪ್ ಬಾಕ್ಸ್ ಸೇವೆ ಲಭ್ಯ
ಇದೀಗ ಗ್ರಾಹಕರಿಗಾಗಿ d2h ಸಂಸ್ಥೆಯು ಆಂಡ್ರಾಯ್ಡ್ ಸೆಟ್ ಅಪ್ ಬಾಕ್ಸ್ ಅನ್ನು ಪರಿಚಯಿಸಲಿದೆ. ಪ್ರಸ್ತುತ ಜನರು ಓಟಿಟಿ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಈ ಕಾರಣದಿಂದಾಗಿ ಗ್ರಾಹಕರಿಗೆ ಓಟಿಟಿ ಸೇವೆ ಒದಗಿಸಲು d2h ಸಹ ಆಂಡ್ರಾಯ್ಡ್ ಸೆಟ್ ಟಾಪ್ ಬಾಕ್ಸ್ ಅನ್ನು ನೀಡುತ್ತಿದೆ. d2h ಆಂಡ್ರಾಯ್ಡ್ ಸೆಟ್ ಟಾಪ್ ಬಾಕ್ಸ್ ನ ಬೆಲೆಯ ಬಗ್ಗೆ ಹೇಳುವುದಾದರೂ ಗ್ರಾಹಕರು ಇದನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಡಿ2h ಆಂಡ್ರಾಯ್ಡ್ ಸೆಟ್ ಅಪ್ ಬಾಕ್ಸ್
ಡಿ2h ಆಂಡ್ರಾಯ್ಡ್ ಸೆಟ್ ಟಾಪ್ ಬಾಕ್ಸ್ ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡಲಿದೆ. ಸೆಟ್ ಟಾಪ್ ಬಾಕ್ಸ್ ಬಳಕೆದಾರರು ಓಟಿಟಿ ಹಾಗೂ ಟೆಲಿವಿಷನ್ ಚಾನೆಲ್ ಗಳ ಕಂಟೆಂಟ್ ಅನ್ನು ವೀಕ್ಷಿಸಲು ಡಿ2h ಆಂಡ್ರಾಯ್ಡ್ ಸೆಟ್ ಟಾಪ್ ಬಾಕ್ಸ್ ಸಹಕಾರಿಯಾಗಲಿದೆ. ಗ್ರಾಹಕರು ಸುಲಭವಾಗಿ ಆಂಡ್ರಾಯ್ಡ್ ಸೆಟ್ ಟಾಪ್ ಬಾಕ್ಸ್ ಗೆ ವೈಫೈ ಸಂಪರ್ಕವನ್ನು ಮಾಡಬಹುದು.

Image Credit: Dreamdth

ಡಿ2h ಆಂಡ್ರಾಯ್ಡ್ ಸೆಟ್ ಟಾಪ್ ಬಾಕ್ಸ್ ವಿಶೇಷತೆ
ಈ ಆಂಡ್ರಾಯ್ಡ್ ಸೆಟ್ ಟಾಪ್ ಬಾಕ್ಸ್ ನ ಮೂಲಕ 2k HD ಕ್ವಾಲಿಟಿಯ ಕಂಟೆಂಟ್ ವೀಕ್ಷಿಸಲು ಸಾಧ್ಯವಾಗಲಿದೆ. ಆಂಡ್ರಾಯ್ಡ್ ಸೆಟ್ ಟಾಪ್ ಬಾಕ್ಸ್ ನಲ್ಲಿ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಸೌಲಭ್ಯ ಕೂಡ ಲಭ್ಯವಾಗಲಿದೆ. ಡಿ2h ಆಂಡ್ರಾಯ್ಡ್ ಸೆಟ್ ಅಪ್ ಬಾಕ್ಸ್ ನಲ್ಲಿ ಪ್ಲೇ ಸ್ಟೋರ್ ಲಭ್ಯವಿದ್ದು ಗೇಮ್ ಅನ್ನು ಸಹ ಆಡಬಹುದಾಗಿದೆ. ಇದರಲ್ಲಿ ಅಂತರ್ನಿರ್ಮಿತ ಗೂಗಲ್ ಅಷ್ಟಿಸ್ಟನ್ ಅನ್ನು ಹೊಂದಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in