D2M Technology: ಇನ್ನುಮುಂದೆ ಇಂಟರ್ನೆಟ್ ಇಲ್ಲದೆ ಟಿವಿ ಮತ್ತು OTT ಬಳಸಬಹುದು, ಬಂದಿದೆ D2M ತಂತ್ರಜ್ಞಾನ.

D2M ತಂತ್ರಜ್ಞಾನದ ಮೂಲಕ ಇಂಟರ್ನೆಟ್ ಇಲ್ಲದೆ ಟಿವಿ ಮತ್ತು OTT ಬಳಸಬಹುದು.

D2M Technology In India: ಇಂದಿನ ಯುಗ Internet ಯುಗವಾಗಿದೆ. ಇಂಟರ್ನೆಟ್ ಇಲ್ಲದೆ ಒಂದು ದಿನಾನೂ ಬದುಕಲು ಕಷ್ಟ ಎಂದು ಹೇಳುವವರು ಇದ್ದಾರೆ. ಪ್ರತಿಯೊಂದು ಕೆಲಸವೂ ಇಂಟರ್ನೆಟ್ ನಿಂದ ಆಗುವುದರಿಂದ ಇಂಟರ್ನೆಟ್ ಬಹಳ ಮುಖ್ಯವಾಗಿರುವುದು ನಿಜ. ಆದರೆ ಈಗ  ಇಂಟರ್ನೆಟ್ ಇಲ್ಲದೆ ಇದ್ದರು  TV, OTT ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬೆಳೆದಂತೆ ಹೊಸ ವೈಶಿಷ್ಟ್ಯಗಳು ಬರುತ್ತಿವೆ ಅದರಲ್ಲಿ ಇದು ಕೊಡ ಒಂದಾಗಿದೆ ಎನ್ನಬಹುದು. ಹಾಗು ಇಂದಿನ ಯುವಪೀಳಿಗೆ ಹೊಸ ತಂತ್ರಜ್ಞಾನ ಅಳವಡಿಕೆಗೆ ಕಾತುರದಲ್ಲಿ ಇರುವುದು ಕೂಡ ಸಹಜ.

ಪ್ರಸ್ತುತ ಸಾಲಿನಲ್ಲಿ ಟಿವಿ, ಮೊಬೈಲ್ ಫೋನ್ ಇಲ್ಲದೆ ಇರುವ ಮನೆಗಳೇ ಇಲ್ಲ,ಸಮೀಕ್ಷೆಯ ಪ್ರಕಾರ ದೇಶದಲ್ಲಿ 21 ಕೋಟಿ ಕುಟುಂಬಗಳು ಟಿವಿ ಹೊಂದಿವೆ. 800 ದಶಲಕ್ಷಕ್ಕೂ ಹೆಚ್ಚು ಜನರು ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದಾರೆ. ಹಾಗು  2026 ರ ವೇಳೆಗೆ ಮೊಬೈಲ್ ಬಳಕೆದಾರರ ಸಂಖ್ಯೆ 100 ಕೋಟಿ ದಾಟುವ ನಿರೀಕ್ಷೆಯಿದೆ. ಈ ಸಂದರ್ಭಗಳಲ್ಲಿ ಮೊಬೈಲ್ ಫೋನ್ ಗಳು ಅತಿದೊಡ್ಡ ವೇದಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರ ನಿರೀಕ್ಷಿಸುತ್ತದೆ.

TV and OTT can be used without internet through D2M technology.
Image Credit: Marketingmind

ಇಂಟರ್ನೆಟ್  ಇಲ್ಲದೆ  TV, OTT ಪ್ರಸಾರವನ್ನು ವೀಕ್ಷಿಸಬಹುದಾ…?
ಇಂಟರ್ನೆಟ್  ಇಲ್ಲದೆ  TV, OTT ಪ್ರಸಾರವನ್ನು ಹೇಗೆ ನೋಡಬಹುದು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಡೈರೆಕ್ಟ್ 2 ಮೊಬೈಲ್ ತಂತ್ರಜ್ಞಾನವು ಬ್ರಾಡ್ ಬ್ಯಾಂಡ್ ಮತ್ತು ಪ್ರಸಾರದ ಸಂಯೋಜನೆಯಾಗಿದೆ. ಡಿ 2 ಎಂ ತಂತ್ರಜ್ಞಾನವು ಮೊಬೈಲ್ ಗಳಲ್ಲಿನ ಎಫ್ ಎಂ ರೇಡಿಯೋ ಪ್ರಸರಣವನ್ನು ಹೋಲುತ್ತದೆ. ಅದರಂತೆ, ಫೋನ್ ರಿಸೀವರ್ ರೇಡಿಯೋ ತರಂಗಗಳನ್ನು ಸ್ವೀಕರಿಸುತ್ತದೆ.

ಪ್ರಸ್ತುತ ಟಿವಿ ಚಾನೆಲ್ ಗಳ ಪ್ರಸಾರಕ್ಕಾಗಿ ಬಳಸಲಾಗುತ್ತಿರುವ 526-582 ಮೆಗಾಹರ್ಟ್ಸ್ ಬಾಂಡ್ ಅನ್ನು ಡಿ 2 ಎಂ ನಲ್ಲಿ ಬಳಸಲಾಗುತ್ತಿದೆ. ಹೀಗಾಗಿ ಇಂಟರ್ ನೆಟ್ ಇಲ್ಲದೇ ಟಿವಿ, ಒಟಿಟಿ ಪ್ರಸಾರಗಳನ್ನು ವೀಕ್ಷಿಸಬಹುದಾಗಿದೆ. ಇದರೊಂದಿಗೆ, ಕೇಂದ್ರವು ಮೊಬೈಲ್ ಬಳಕೆದಾರರನ್ನು ಗುರಿಯಾಗಿಸಲು ಪ್ರಾರಂಭಿಸಿದೆ. ಮತ್ತೊಂದೆಡೆ, ಈ ಡೈರೆಕ್ಟ್ 2 ಮೊಬೈಲ್ ತಂತ್ರಜ್ಞಾನ ಲಭ್ಯವಾದರೆ. ಟೆಲಿಫೋನ್ ಆಪರೇಟರ್ಗಳ ಡೇಟಾ ಆದಾಯದಲ್ಲಿ ಶೇಕಡಾ 80 ರಷ್ಟು ಕುಸಿತದ ಸಾಧ್ಯತೆಯಿದೆ.

Join Nadunudi News WhatsApp Group

D2M Technology In India
Image Credit: Economictimes

ಈ ಹಿನ್ನೆಲೆಯಲ್ಲಿ, ಟೆಲಿಕಾಂ ಆಪರೇಟರ್ಗಳು ಸರ್ಕಾರದ ಪ್ರಸ್ತಾಪಗಳ ವಿರುದ್ಧ ಪ್ರತಿಭಟಿಸುವ ಸಾಧ್ಯತೆಯಿದೆ. ಈ ಹೊಸ ತಂತ್ರಜ್ಞಾನ ಹೊಸ ಏಳಿಗೆಗೆ ಕಾರಣವಾಗಬಹುದು. ಈ ಹೊಸ  D2M ತಂತ್ರಜ್ಞಾನದಿಂದ ಇನ್ನುಮುಂದೆ ಇಂಟರ್ನೆಟ್ ಇಲ್ಲದೆ ಟಿವಿ ಮತ್ತು OTT ಬಳಸಬಹುದು ಎಂದು ಹೇಳಲಾಗಿದ್ದು ಈ ಹೊಸ ತಂತ್ರಜ್ಞಾನ ಹೇಗೆ ಬಳಕೆ ಆಗುತ್ತದೆ ಎಂದು ಕಾದು ನೋಡಬೇಕಿದೆ ಮತ್ತು D2M ತಂತ್ರಜ್ಞಾನಕ್ಕೆ ಮೊಬೈಲ್ ಫೋನ್ ಗಳು ಮುಖ್ಯ ಅಡಿಪಾಯವಾಗಲಿದೆ.

Join Nadunudi News WhatsApp Group