Employees DA Increase: ಕೇಂದ್ರ ಸರ್ಕಾರಿ ನೌಕರರಿಗೆ ಡಬಲ್ ಧಮಾಕ, ಡಿಎ ಜೊತೆಗೆ ಸ್ಯಾಲರಿ ಹೆಚ್ಚಳ.
Government Employees DA And Salary Increase: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ಹೊಸದೊಂದು ಸುದ್ದಿ ಹೊರ ಬಿದ್ದಿದೆ. ಈ ವಿಚಾರ ಅವರಿಗೆ ಸಿಹಿ ಸುದ್ದಿ ಎನ್ನಬಹುದು. ಮೊನ್ನೆ ಅಷ್ಟೇ ಕೇಂದ್ರ ಸರ್ಕಾರದಿಂದ ನೌಕರರಿಗೆ ಮುಂಗಡವಾಗಿ 10 ಸಾವಿರ ರೂಪಾಯಿ ನೀಡುವ ಸುದ್ದಿಯನ್ನು ನೀಡಿದ್ದರು. ಇದಾದ ಎರಡೇ ದಿನಕ್ಕೆ ಇನ್ನಷ್ಟು ಸಿಹಿ ಸುದ್ದಿ ನೀಡಿದ್ದಾರೆ. ಈ ತಿಂಗಳಲ್ಲಿಯೇ ಸರ್ಕಾರಿ ಉದ್ಯೋಗಿಗಳಿಗೆ ವೇತನ ಹೆಚ್ಚಾಗಲಿದೆ.
ಕೇಂದ್ರ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ
ಕೇಂದ್ರ ಸರ್ಕಾರೀ ನೌಕರರಿಗೆ ಪ್ರಾಯಶಃ ಇದೆ ತಿಂಗಳು ವೇತನ ಹೆಚ್ಚಳ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ. ನೌಕರರ ಕನಿಷ್ಠ ವೇತನದಲ್ಲಿ ಬದಲಾವಣೆ ಮಾಡುವ ಫಿಟ್ ಮೆಂಟ್ ಅಂಶ ತುಟ್ಟಿಭತ್ಯೆಯನ್ನು ಶೀಘ್ರದಲ್ಲೇ ಸರ್ಕಾರ ಪ್ರಕಟಿಸುವ ಸಂಭವವಿದೆ ಎಂದು ವರದಿಗಳು ತಿಳಿಸಿವೆ.
ಫ್ಟ್ ಮೆಂಟ್ ಅಂಶದಲ್ಲಿ ಏರಿಕೆಯಾದ ಬಳಿಕ ಕೇಂದ್ರ ಸರ್ಕಾರೀ ನೌಕರರ ಕನಿಷ್ಠ ಸಂಬಳ 18 ಸಾವಿರದಿಂದಾಗಿ 26 ಸಾವಿರ ರೂ. ಈ ಹೆಚ್ಚಾಗುವ ನಿರೀಕ್ಷೆ ಇದೆ. ಮಾರ್ಚ್ ತಿಂಗಳಿನಲ್ಲಿಯೇ ಕೇದ್ರ ಸರ್ಕಾರ ಫಿಟ್ ಮೆಂಟ್ ಅಂಶ ಹಾಗು ತುಟ್ಟಿಭತ್ಯೆ ಯನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂದು ವರದಿಗಳು ವಿವರಿಸಿದೆ.
ಸಾಮಾನ್ಯ ಫಿಟ್ ಮೆಂಟ್ ಅಂಶ ಹಾಲಿ ಶೇ. 2.57 ರಷ್ಟಿದೆ. ಇದರ ಅರ್ಥ 4200 ಗ್ರೇಡ್ ಪೆನಲ್ಲಿರುವ ನೌಕರ 15500 ರೂಪಾಯಿ. ಮೂಲ ವೇತನ ಗಳಿಸುತ್ತಾನೆ ಎಂದರೆ ಅದನ್ನು 2.7 ರಿಂದ ಗುಣಿಸಬೇಕಾಗುತ್ತದೆ. ಆರನೇ ವೆತಾನಾ ಆರೋಗ ಶೇ.1.86 ರಷ್ಟು ಫಿಟ್ ಮೆಂಟ್ ಅಂಶಕ್ಕೆ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರಿ ನೌಕರರು ಇದೀಗ ಫಿಟ್ ಮೆಂಟ್ ಅಂಶವನ್ನು ಶೇ. 3.68 ಕ್ಕೆ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಲಾಗಿದೆ.