Annual Salary: ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ವಾರ್ಷಿಕ ವೇತನದಲ್ಲಿ 27,000 ರೂ ಹೆಚ್ಚಳ.
ತುಟ್ಟಿಭತ್ಯೆ ಹೆಚ್ಚಳದ ಕಾರಣ ಸರ್ಕಾರೀ ನೌಕರರ ಸಂಬಳದಲ್ಲಿ ವಾರ್ಷಿಕವಾಗಿ 27,000 ರೂಪಾಯಿ ಏರಿಕೆ ಆಗಲಿದೆ.
7th Pay Commission Salary In india: ಪ್ರಸ್ತುತ ಸರ್ಕಾರಿ ನೌಕರರು 7 ನೇ ವೇತನ ಆಯೋಗ (7th Pay Commission) ಅಡಿಯಲ್ಲಿ ವೇತನ ಅಪಡೆಯುತ್ತಿದ್ದಾರೆ. ಇತ್ತೀಚಿಗೆ ಸರ್ಕಾರಿ ನೌಕರರ ವೇತನದ ವಿಷಯಗಳು ಸಾಕಷ್ಟು ಹರಿದಾಡುತ್ತಿವೆ. ಸರ್ಕಾರಿ ನೌಕರರಿಗೆ ವೇತನದ ವಿಷಯವಾಗಿ ಸಿಹಿ ಸುದ್ದಿಗಳು ಸಿಗುತ್ತಲೇ ಇದೆ. ಈಗಾಗಲೇ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮಾಸಿಕ ತಿಂಗಳ ವೇತನದಲ್ಲಿ ಕೂಡ ಹೆಚ್ಚಳ ಮಾಡಿತ್ತು.
ಈಗಾಗಲೇ 7 ನೇ ವೇತನ ಆಯೋಗದಲ್ಲಿ ಸಂಬಳ ಹೆಚ್ಚಾಗುವ ಕುರಿತು ಸಾಕಷ್ಟು ಸುದ್ದಿಗಳು ಹರಡಿದ್ದವು. ಇದೀಗ ಮತ್ತೆ 7 ನೇ ವೇತನದ ಅಡಿಯಲ್ಲಿ ತುಟ್ಟಿಭತ್ಯೆ ಹೆಚ್ಚಳ (DA Hike) ಸಾಧ್ಯತೆ ಇದೆ. ಈ ಬಾರಿ ತುಟ್ಟಿಭತ್ಯೆ ಎಷ್ಟು ಹೆಚ್ಚಳವಾಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ಜುಲೈ ತಿಂಗಳಿನಲ್ಲಿ ಶೇ. 46 ರಷ್ಟು ತುಟ್ಟಿಭತ್ಯೆ ಹೆಚ್ಚಳ
ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 42 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯಲಿದ್ದಾರೆ. ತುಟ್ಟಿ ಭತ್ಯೆಯನ್ನು ಶೇಕಡಾ 4 ರ ದರದಲ್ಲಿ ಹೆಚ್ಚಿಸಿದೆ. ಇನ್ನು ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಎರಡು ತಿಂಗಳ ಬಾಕಿ ವೇತನವು ಸಿಗಲಿದೆ. ಜನವರಿ 1, 2023 ರಿಂದ ತುಟ್ಟಿ ಭತ್ಯೆಯಲ್ಲಿ ಶೇ. 42 ರಷ್ಟು ಹೆಚ್ಚಳವಾಗಿದೆ. ಇನ್ನು ಜುಲೈ ನಲ್ಲಿ ಮತ್ತೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಾಗಲಿದೆ. ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ ಜುಲೈ ನಲ್ಲಿ 46% ತಲುಪಲಿದೆ.
ವಾರ್ಷಿಕ ವೇತನದಲ್ಲಿ 27000 ರೂ. ಹೆಚ್ಚಳ
ಹಣದುಬ್ಬರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೌಕರರ ತುಟ್ಟಿಭತ್ಯೆ ಹೆಚ್ಚಳದ ನಿರ್ಧಾರವನ್ನು ಕೈಗೊಂಡಿದೆ. ಸರ್ಕಾರಿ ನೌಕರರ ಡಿಎ 46 % ಹೆಚ್ಚಳವಾದರೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಜುಲೈನಲ್ಲಿ 8,280 ರೂ. ಹೆಚ್ಚಳ ಆಗಲಿದೆ.
ಉದಾಹರಣೆಗೆ ಸರ್ಕಾರಿ ನೌಕರರ ಮಾಸಿಕ ವೇತನ 18,000 ರೂ. ಆಗಿದ್ದರೆ, ಅವರ ಮಾಸಿನ ಸಂಬಳದಲ್ಲಿ ರೂ. 720 ಹೆಚ್ಚಳವಾಗಲಿದೆ. ಉದ್ಯೋಗಿಯ ಮೂಲ ವೇತನವು 56,900 ರೂ. ಆಗಿದ್ದರೆ ನಂತರ ವೇತನವು ತಿಂಗಳಿಗೆ 2,181 ರೂ. ಗಳಷ್ಟು ಹೆಚ್ಚಳವಾಗಲಿದೆ.
ಇದೆ ರೀತಿಯಲ್ಲಿ ಸರ್ಕಾರೀ ನೌಕರರ ಸಂಬಳ ಏರಿಕೆಯಾದರೆ ಅವರ ಸಂಬಳದದಲ್ಲಿ ವಾರ್ಷಿಕವಾಗಿ 27,000 ರೂಪಾಯಿ ಏರಿಕೆ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ತುಟ್ಟಿಭತ್ಯೆ ಹೆಚ್ಚಳದ ಕಾರಣ ಕೇಂದ್ರ ಸರ್ಕಾರೀ ನೌಕರರ ವಾರ್ಷಿಕ ಸಂಬಳ ಸುಮಾರು 27,000 ರೂಪಾಯಿ ಏರಿಕೆ ಆಗಲಿದೆ.