Dr Bro Update: ದೇಶ ಸುತ್ತುವ ಜೊತೆಗೆ ಇನ್ನೊಂದು ಹೊಸ ಕೆಲಸ ಆರಂಭಿಸಿದ ಡಾ.ಬ್ರೋ, ಮೆಚ್ಚಿದ ಬ್ರೋ ಅಭಿಮಾನಿಗಳು.

ದೇಶ ವಿದೇಶಗಳಿಗೆ ಭೇಟಿ ನೀಡಿ ವಿಡಿಯೋ ಮಾಡುತ್ತಿರುವ ಡಾ ಬ್ರೋ ಇದೀಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.

Dr Bro Latest Update: ಕನ್ನಡಿಗರ ನೆಚ್ಚಿನ ಸ್ಟಾರ್ ಯೂಟ್ಯೂಬರ್ Da Bro ಅಲಿಯಾಸ್ Gagan Srinivas ಇತ್ತೀಚಿಗೆ ಬಾರಿ ಸುದ್ದಿಯಲ್ಲಿದ್ದಾರೆ.

ಅತಿ ಚಿಕ್ಕ ವಯಸ್ಸಿನಲ್ಲೇ ಯೂಟ್ಯೂಬ್ ವಿಡಿಯೋ ಮೂಲಕ ಅದೆಷ್ಟೋ ದೇಶ ವಿದೇಶಗಳಿಗೆ ಭೇಟಿನೀಡಿ ಸಾಕಷ್ಟು ದೇಶಗಳನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ. ಇನ್ನು ಡಾ ಬ್ರೋ ಸೋಶಿಯಲ್ ಮೀಡಿಯಾದಲ್ಲಿ ಸರಿಸುಮಾರು ಮಿಲಿಯನ್ ನಷ್ಟು ಫಾಲೋವರ್ಸ್ ಅನ್ನು ಪಡೆದುಕೊಂಡಿದ್ದಾರೆ.

Dr Bro Latest Update
Image Credit: Vistaranews

ಕನ್ನಡಿಗರ ನೆಚ್ಚಿನ ಯೂಟ್ಯೂಬರ್ Dr Bro
ಹೆಚ್ಚಿನ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿರುವ ಡಾ ಬ್ರೋ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹೈಲೈಟ್ ಆಗುತ್ತಾ ಇರುತ್ತಾರೆ. ಡಾ ಬ್ರೋ ಅವರ ಸಾಧನೆಯನ್ನು ಎಲ್ಲರು ಮೆಚ್ಚಿಕೊಂಡಿದ್ದಾರೆ. ಕನ್ನಡಿಗರಿಗೆ ತಿಳಿದಿರದ ಅದೆಷ್ಟೋ ದೇಶದ ಜೀವನ ಶೈಲಿ, ಆಹಾರ, ಭಾಷೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕೆಲ ದಿನಗಳಿಂದ ಸೊಮಾಲಿಯಲ್ಲಿ ವಿಡಿಯೋ ಮಾಡಿ ಜನರಿಗೆ ಅಲ್ಲಿನ ಮಾಹಿತಿ ನೀಡುತ್ತಿದ್ದ ಡಾ ಬ್ರೋ ಇದೀಗ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ. ಈ ಬಾರಿ ಡಾ ಬ್ರೋ ಬೆಂಗಳೂರಿನಲ್ಲಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.

ದೇಶ ಸುತ್ತುವ ಜೊತೆಗೆ ಇನ್ನೊಂದು ಹೊಸ ಕೆಲಸ ಆರಂಭಿಸಿದ ಡಾ.ಬ್ರೋ
ಡಾ ಬ್ರೋ ಅವರು ಎಷ್ಟು ಪ್ರಖ್ಯಾತರಾಗಿದ್ದರೋ ಹಾಗೆಯೆ ‘ನಮಸ್ಕಾರ್ ದೇವ್ರು” ಎನ್ನುವ ಅವರ ಡೈಲಾಗ್ ಕೂಡ ಅಷ್ಟೇ ಫೇಮಸ್ ಆಗಿದೆ. ನಮಸ್ಕಾರ ದೇವ್ರು ಎಂದು ಯಾರೇ ಹೇಳಿದರು ಡಾ ಬ್ರೋ ನೆನಪಾಗುತ್ತಾರೆ. ಸದ್ಯ ದೇಶ ವಿದೇಶಗಳಿಗೆ ಭೇಟಿ ನೀಡಿ ವಿಡಿಯೋ ಮಾಡುತ್ತಿರುವ ಡಾ ಬ್ರೋ ಇದೀಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.  ಬ್ರೋ ಅವರ ಹೊಸ ಕೆಲಸ ಯಾವುದು ಎಂದು ಯೋಚಿಸುತ್ತಿದ್ದೀರಾ? ಅದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Join Nadunudi News WhatsApp Group

ಕ್ರಿಕೆಟ್ ಅಪ್ಡೇಟ್ ನೀಡಲಿದ್ದಾರೆ ಡಾ ಬ್ರೋ
ದೇಶದಲ್ಲಿ ನಡೆಯುತ್ತಿರುವ ವಿಶ್ವ ಕಪ್ ಕ್ರಿಕೆಟ್ ಪ್ರಿಯರಲ್ಲಿ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸುತ್ತಲೇ ಇದೆ. ಅದರಲ್ಲೂ October 8 ರಂದು ನಡೆಯಲಿರುವ ಇಂಡಿಯಾ ಮತ್ತು ಆಸ್ಟ್ರೇಲಿಯಾ ಪಂದ್ಯದ ಬಗ್ಗೆ ಭಾರತೀಯರು ಕುತೂಹಲರಾಗಿದ್ದಾರೆ. ನಾಳೆ ನಡೆಯುವ ಇಂಡಿಯಾ ಮ್ಯಾಚ್ ಅನ್ನು ನೀವು ನಮಸ್ಕಾರ ದೇವ್ರು ಕಾಮೆಂಟ್ರಿ ಜೊತೆಗೆ ನೋಡಬಹುದಾಗಿದೆ.

ಹೌದು ದೇಶ ಸುತ್ತಿ ವಿಡಿಯೋ ಮಾಡುತ್ತಿರುವ ಡಾ ಬ್ರೋ ಇದೀಗ ನಾಳೆ ನಡೆಯಲಿರುವ ಪಂದ್ಯದ ಕಮೆಂಟ್ರಿಯನ್ನ ನೀಡಲಿದ್ದಾರೆ. ಇನ್ನು ಡಾ ಬ್ರೋ ಅವರ ಈ ಕೆಲಸಕ್ಕೆ ಸ್ಟ್ರಾರ್ ಸ್ಪೋರ್ಟ್ಸ್ ಕನ್ನಡ ಕೈಜೋಡಿಸಿದ್ದು, ಹೊಸ ವಿಡಿಯೋ ಶೇರ್ ಮಾಡುವ ಮೂಲಕ ಡಾ ಬ್ರೋ ಅಭಿಮಾನಿಗಳಿಗೆ ಕ್ರಿಕೆಟ್ ಅಪ್ಡೇಟ್ ಕೊಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಡಾ ಬ್ರೋ ಅವರ ಸಡನ್ ಸರ್ಪ್ರೈಸ್ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ. ಎಲ್ಲರು ಡಾ ಬ್ರೋ ಶೈಲಿಯಲ್ಲಿ ಪಂದ್ಯ ವೀಕ್ಷಣೆಗೆ ಕಾಯುತ್ತಿದ್ದಾರೆ.

Join Nadunudi News WhatsApp Group