DA Hike: ರಾಜ್ಯ ಸರ್ಕಾರೀ ನೌಕರರಿಗೆ ದೀಪಾವಳಿ ಉಡುಗೊರೆ, ಸಂಬಳದಲ್ಲಿ ಹೆಚ್ಚಳ ಮಾಡಿದ ಸರ್ಕಾರ.
ರಾಜ್ಯ ಸರ್ಕಾರ ತುಟ್ಟಿಭತ್ಯೆ ಹೆಚ್ಚಿಸುವುದಾಗಿ ಅಧಿಕೃತ ಘೋಷಣೆ ಹೊರಡಿಸಿದೆ.
DA Hike Latest Update: ಸದ್ಯ ರಾಜ್ಯ ಸರ್ಕಾರ ಸರ್ಕಾರೀ ನೌಕರರ ಬಹುನಿರೀಕ್ಷಿತ ಬೇಡಿಕೆಯ ಬಗ್ಗೆ ಬಿಗ್ ಅಪ್ಡೇಟ್ ನೀಡಿದೆ. ಸರ್ಕಾರೀ ನೌಕರರಿಗೆ ದೀಪಾವಳಿ ಹಾಗೂ ದಸರಾ ಉಡುಗೊರೆಯಾಗಿ ರಾಜ್ಯ ಸರ್ಕಾರ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಘೋಷಣೆ ಹೊರಡಿಸಿದೆ.
ಈ ಮೂಲಕ ಸರ್ಕಾರೀ ನೌಕರರಿಗೆ ಸಂತಸ ನೀಡಿದೆ. ಬಹುದಿನಗಳಿಂದ ಸರ್ಕಾರೀ ನೌಕರರು ವೇತನ ಹೆಚ್ಚಳ ಸುದ್ದಿಗಳನ್ನು ಕೇಳುತ್ತಿದ್ದರೆ ಹೊರತು ಸರ್ಕಾರದಿಂದ ಯಾವ ಆದೇಶವನ್ನು ಕೇಳಿರಲಿಲ್ಲ. ಸದ್ಯ ರಾಜ್ಯ ಸರ್ಕಾರವೇ ತುಟ್ಟಿಭತ್ಯೆ ಹೆಚ್ಚಿಸುವುದಾಗಿ ಅಧಿಕೃತ ಘೋಷಣೆ ಹೊರಡಿಸಿದೆ.
ರಾಜ್ಯ ಸರ್ಕಾರ ನೌಕರರಿಗೆ ಹೊಸ ತುಟ್ಟಿಭತ್ಯೆ ಘೋಷಣೆ
ರಾಜ್ಯ ಸರ್ಕಾರೀ ನೌಕರರ ಟಿಟ್ಟಿಭತ್ಯೆ ಹೆಚ್ಚಿಲದ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರೀ ನೌಕರರ ತುಟ್ಟಿಭತ್ಯೆಯನ್ನು ಶೇ. 3 .75 ರಷ್ಟು ಹೆಚ್ಚಿಸುವುದಾಗಿ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಿದೆ.
UGC /AICTE /ICAR ವೇತನ ಶ್ರೇಣಿಗಳ ಬೋಧಕ ಸಿಬ್ಬಂಧಿ ಹಾಗೂ NJPC ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ತುಟ್ಟಿಭತ್ಯೆಯನ್ನು ಶೇ. 4 ರಷ್ಟು ಹೆಚ್ಚಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದೆ. ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಸರ್ಕಾರ ಷರತ್ತುಗಳನ್ನು ಹಾಕಿದೆ. ಇಂತವರು ಮಾತ್ರ ತುಟ್ಟಿಭತ್ಯೆ ಹೆಚ್ಚಳದ ಲಾಭವನ್ನು ಪಡೆಯಬಹುದಾಗಿದೆ.
ಇಂತವರಿಗೆ ಮಾತ್ರ ಸರ್ಕಾರದ ಹೊಸ ತುಟ್ಟಿಭತ್ಯೆ ಅನ್ವಯವಾಗಲಿದೆ
*UGC /AICTE /ICAR ವೇತನ ಶ್ರೇಣಿಗಳ ಬೋಧಕ ಸಿಬ್ಬಂಧಿ ಹಾಗೂ NJPC ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳಲಿಗೆ ಹೊಸ ತುಟ್ಟಿಭತ್ಯೆ ಅನ್ವಯವಾಗಲಿದೆ.
*ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್ ಗಳ ಪೂರ್ಣಾವಧಿ ನೌಕರರಿಗೆ, ಕಲಿಕಾ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ ಚಾರ್ಜ್ ಗೆ ಅನ್ವಯವಾಗಲಿದೆ.
*ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶವವಿದ್ಯಾಲಯದಲ್ಲಿ ಕಾಲಿಕ ವೇತನ ಶ್ರೇಣಿಯಲ್ಲಿರುವ ಪೂರ್ವಾಧಿತ ನೌಕರರಿಗೆ ಹೊಸ ತುಟ್ಟಿಭತ್ಯೆ ಅನ್ವಯವಾಗಲಿದೆ.
*ತುಟ್ಟಿಭತ್ಯೆ ಕಾರಣದಿಂದ ಸಂದಾಯ ಮಾಡಬೇಕಾಗಿರುವ ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಂಶಗಳನ್ನು ಕಡೆಗೆಣಿಸತಕ್ಕದ್ದು.