Dhananjay Marriage: ಡಾಲಿಗೆ ಬೀಳುತ್ತಿದೆ ಕೆಟ್ಟ ಕನಸು, ಕನಸಿನ ಬಗ್ಗೆ ಹೇಳಿ ಭಯಪಟ್ಟ ಡಾಲಿ ಧನಂಜಯ್.

ನಟ ಡಾಲಿ ಧನಂಜಯ್ ಅವರು ತನಗೆ ಮದುವೆಯ ಬಗ್ಗೆ ಬೀಳುತ್ತಿರುವ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ

Actor Dhananjay Dreams: ವೀಕೆಂಡ್ ವಿತ್ ರಮೇಶ್ ಸೀಸನ್ 5 (Weekend With Ramesh Season 5) ಕ್ಕೆ ಐದನೇ ಅತಿಥಿಯಾಗಿ ಬಂದಿದ್ದ ನಟ ಡಾಲಿ ಧನಂಜಯ್ ಅವರು ಹಲವು ವಿಚಾರಗಳನ್ನು ವೇಧಿಕೆಯಲ್ಲಿ ಮಾತನಾಡಿದ್ದಾರೆ. ಇನ್ನು ನಟ ಡಾಲಿ ಧನಂಜಯ್ (Daali Dhananjay) ಅವರು ತಮ್ಮ ಕುಟುಂಬ, ಕಷ್ಟದ ದಿನಗಳ ಬಗ್ಗೆ ಅವರು ಜೀವನದಲ್ಲಿ ಅನುಭವಿಸಿದ ಅನುಮಾನದ ಬಗ್ಗೆ ಹೇಳಿಕೊಂಡಿದ್ದಾರೆ.

ಸಾಧಕರ ಕುರ್ಚಿಯಲ್ಲಿ ಕುಳಿತು ನಟ ಡಾಲಿ ಧನಂಜಯ್ ಅವರು ತಮ್ಮ ಜೀವನದ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ಅವರು ಎದುರಿಸಿದ ಕಷ್ಟ ನೋವುಗಳನ್ನು ಹೇಳಿಕೊಂಡಿದ್ದಾರೆ. ಇನ್ನು ಈ ವೇಧಿಕೆಯಲ್ಲಿ ನಟ ಡಾಲಿ ಧನಂಜಯ್ ಅವರಿಗೆ ಸಾಕಷ್ಟು ಸ್ನೇಹಿತರು ವಿಶ್ ಮಾಡಿದ್ದಾರೆ.

Actor Dhananjay talks about his dream in Weekend with Ramesh.
Image Credit: news18

ಧನಂಜಯ್ ಮದುವೆ ಮಾಡುತ್ತೇನೆ ಎಂದ ಅಜ್ಜಿ ಎಲ್ಲಮ್ಮ
ನಟ ಡಾಲಿ ಧನಂಜಯ್ ಅವರ ಮದುವೆ ವಿಚಾರ ಸಹ ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಚರ್ಚೆ ಆಗಿದೆ. ಈಗಾಗಲೇ ನಟಿ ಅಮೃತ ಅಯ್ಯಂಗಾರ್ ಹಾಗು ಡಾಲಿ ಧನಂಜಯ್ ಅವರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಇವರಿಬ್ಬರು ನಾವಿಬ್ಬರು ಫ್ರೆಂಡ್ಸ್ ಅಷ್ಟೇ ಎಂದು ಹೇಳಿದ್ದರು.

ಹೀಗಿರುವಾಗಲೇ ನಟ ಧನಂಜಯ್ ಅವರ ಮದುವೆ ಬಗ್ಗೆ ಅವರ ಅಜ್ಜಿ ಎಲ್ಲಮ್ಮ ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಮಾತನಾಡಿದ್ದಾರೆ.

ಧನಂಜಯ್ ಗೆ ಮದುವೆ ಮಾಡಬೇಕು. ನಾನು ಇದ್ದಾಗಲೇ ವಿವಾಹ ಮಾಡಬೇಕು ಎಂದು ಹೇಳಿದರೆ ಆಗೋಣ ಅಜ್ಜಿ ಎಂದು ಹೇಳುತ್ತಾನೆ. ಎಲ್ಲರ ಮದುವೆಯನ್ನು ಮಾಡಿದ್ದೇನೆ. ನಾವು ಹುಡುಕಿದ ಹುಡುಗಿಯನ್ನು ಅವನು ಒಪ್ಪಿಕೊಳ್ಳಬೇಕಲ್ಲ. ಅವನು ಒಪ್ಪಿಕೊಂಡರೆ ನಾನು ಮದುವೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Join Nadunudi News WhatsApp Group

Actor Dolly Dhananjay has said that recently he is dreaming of marriage.
Image Credit: filmibeat

ಕೆಟ್ಟ ಕನಸು ಬೀಳುತ್ತಿದೆ ಎಂದ ನಟ ಧನಂಜಯ್
ಯಾರನ್ನಾದರೂ ನೋಡಿ ಅವರು ಇಷ್ಟ ಆದರೆ ಮದುವೆ ಆಗುವುದು. ಇತ್ತೀಚಿಗೆ ಮದುವೆ ಕನಸು ಬೀಳುತ್ತಾ ಇದೆ. ಒತ್ತಾಯಕ್ಕೆ ಯಾರನ್ನು ನೋಡಿ ಒಪ್ಪಿಕೊಂಡಂತೆ. ನಂತರ ಸಫರ್ ಮಾಡಿದಂತೆ ಕನಸು ಬೀಳುತ್ತಾ ಇದೆ ಎಂದು ಧನಂಜಯ್ ಹೇಳಿದ್ದಾರೆ. ಸದ್ಯ ಈ ವಿಷಯವನ್ನ ನಟ ಡಾಲಿ ಧನಂಜಯ್ ಅವರು ವೀಕೆಂಡ್ ವಿಥ್ ರಮೇಶ್ ನಲ್ಲಿ ಹೇಳಿಕೊಂಡಿದ್ದಾರೆ.

Join Nadunudi News WhatsApp Group