Damage Notes Exchange: ಹರಿದ ನೋಟುಗಳು ಇದ್ದರೆ ಭಯಪಡುವ ಅಗತ್ಯ ಇಲ್ಲ, RBI ಹೊಸ ನಿಯಮ.

Damage Notes Exchange: ನೋಟುಗಳನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ಬಳಕೆ ಮಾಡುತ್ತಾರೆ. ನೋಟುಗಳ ಬಳಕೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳು ಜಾರಿಯಲ್ಲಿ ಇದ್ದು ಅದನ್ನ ಜನರು ತಿಳಿದುಕೊಳ್ಳದೆ ದೊಡ್ಡ ಮಟ್ಟದ ನಷ್ಟಗಳನ್ನ ಕೂಡ ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು.

There is no need to panic if you have torn notes, RBI has come up with a new rule.
Image Credit: outlookindia

ಹೌದು RBI ನೋಟುಗಳ ಬಳಕೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನ ಜಾರಿಗೆ ತಂದಿದ್ದು ಅದನ್ನ ತಿಳಿದುಕೊಳ್ಳುವುವುದು ಅತ್ಯವಶ್ಯಕವಾಗಿದೆ. ಹೌದು ಹರಿದ ನೋಟುಗಳ (Damage Notes) ಬಗ್ಗೆ ಕೆಲವು ನಿಯಮಗಳು ಜಾರಿಯಲ್ಲಿ ಇದ್ದು ಅದನ್ನ ತಿಳಿದುಕೊಂಡಿರುವುದು ಅತ್ಯಾವಶ್ಯಕವಾಗಿರುತ್ತದೆ.

ಹರಿದ ನೋಟುಗಳಿಗೆ ಇದೆ ಕೆಲವು ನಿಯಮಗಳು
ಹಲವು ಹಳೆಯ ನೋಟುಗಳಿಗೆ ಸಂಬಂಧಿಸಿದಂತೆ ಹಲವು ವದಂತಿಗಳು ಮಾರುಕಟ್ಟೆಯಲ್ಲಿ ಇದೆ ಎಂದು ಹೇಳಬಹುದು. ಹರಿದ ನೋಟುಗಳಿಂದ ಯಾವುದೇ ವ್ಯವಹಾರ ಮಾಡಲು ಸಾಧ್ಯವಿಲ್ಲ ಅನ್ನುವ ಕಾರಣಕ್ಕೆ ಹಲವು ಜನರು ತಮ್ಮ ಬಳಿ ಇರುವ ಹರಿದ ನೋಟುಗಳನ್ನ ಎಸೆಯುತ್ತಾರೆ ಮತ್ತು ಕೆಲವು ಜನರು ಅದನ್ನ ಸುಟ್ಟು ಹಾಕುತ್ತಾರೆ.

If there are torn notes, they can be exchanged at the bank.
Image Credit: dnaindia

ಹರಿದ ನೋಟುಗಳಿಗೆ ಬೆಲೆ ಇದೆ
ಹೌದು ಹರಿದ ನೋಟುಗಳು ಇದ್ದರೆ ಅದನ್ನ ಬಹಳ ಸುಲಭವಾಗಿ ಬದಲಾಯಿಸಿಕೊಳ್ಳಬಹುದು. ಹತ್ತಿರದ ಬ್ಯಾಂಕಿಗೆ ಭೇಟಿ ನೀಡುವುದರ ಮೂಲಕ ಹರಿದ ನೋಟುಗಳನ್ನ ಬದಲಾಯಿಸಿಕೊಳ್ಳಬಹುದು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve bank Of India)ನಿಯಮಗಳ ಪ್ರಕಾರ ಹರಿದ ನೋಟುಗಳನ್ನ ಪಡೆದುಕೊಳ್ಳಲು ಬ್ಯಾಂಕುಗಳು ನಿರಾಕರಣೆ ಮಾಡಿದರೆ ಜನರು ಬ್ಯಾಂಕಿನ ವಿರುದ್ಧ ಕೆಲವು ನಿಯಮಗಳ ಅಡಿಯಲ್ಲಿ ದೂರು ದಾಖಲು ಮಾಡಬಹುದು.

Join Nadunudi News WhatsApp Group

ಬ್ಯಾಂಕುಗಳು ಹರಿದ ನೋಟುಗಳನ್ನ ಪಡೆದುಕೊಳ್ಳಲು ನಿರಾಕರಣೆ ಮಾಡಿದರೆ ಜನರು ಕೆಲವು ನಿಯಮಗಳ ಅಡಿಯಲ್ಲಿ ಬ್ಯಾಂಕಿನ ಮೇಲೆ ದೂರು ದಾಖಲು ಮಾಡಬಹುದು ಎಂದು RBI ತನ್ನ ನಿಯಮಗಳ ಅಡಿಯಲ್ಲಿ ತಿಳಿಸಿದೆ.

There are rules in RBI to exchange torn notes to banks
Image Credit: justdial

ನೋಟುಗಳನ್ನ ಹೇಗೆ ಬದಲಾಯಿಸಿಕೊಳ್ಳುವುದು
ಹರಿದ ಅಥವಾ ಹಾಳಾದ ನೋಟುಗಳನ್ನ ಬ್ಯಾಂಕಿನಲ್ಲಿ ಕೆಲವು ಷರತ್ತುಗಳ ಅಡಿಯಲ್ಲಿ ಬದಲಾಯಿಸಿಕೊಳ್ಳಬಹುದು ಮತ್ತು ನೋಟುಗಳು ಹೆಚ್ಚು ಕೆಟ್ಟಿದ್ದರೆ ಅದರ ಮೌಲ್ಯ ಕೂಡ ಕಡಿಮೆ ಆಗುತ್ತದೆ.

ಇನ್ನು ಒಬ್ಬ ವ್ಯಕ್ತಿಯ ಬಳಿ 5000 ರೂಪಾಯಿಗೂ ಅಧಿಕ ಹಾಳಾದ ನೋಟುಗಳು ಇದ್ದರೆ ಅದಕ್ಕೆ ವಹಿವಾಟು ಶುಲ್ಕವನ್ನ ಕೂಡ ವಿಧಿಸಲಾಗುತ್ತದೆ. ನೋಟುಗಳಲ್ಲಿ ಭದ್ರತಾ ಚಿಹ್ನೆ ಘೋಚರವಾದರೆ ಮಾತ್ರ ಬ್ಯಾಂಕುಗಳು ನಿಮ್ಮ ನೋಟುಗಳನ್ನ ಬದಲಾವಣೆ ಮಾಡಿಕೊಡುತ್ತದೆ.

Torn notes can be given to the bank for exchange under RBI rules
Image Credit: dailynews360

ಇನ್ನು ವ್ಯಕ್ತಿ ಕೊಡುವ ನೋಟುಗಳು ಅಸಲಿ ನೋಟುಗಳು ಆಗಿದ್ದರೆ ಮಾತ್ರ ಅವುಗಳನ್ನ ಬದಲಾಯಿಸಿಕೊಳ್ಳಬಹುದು ಮತ್ತು ನಕಲಿ ನೋಟುಗಳು ನೀಡಿದರೆ ಬ್ಯಾಂಕುಗಳು ನಿಮ್ಮ ಮೇಲೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿರುತ್ತದೆ. ಈ ನಿಯಮಗಳು ಎಲ್ಲಾ ಗ್ರಾಹಕರಿಗೂ ಅನ್ವಯ ಆಗುತ್ತದೆ.

Join Nadunudi News WhatsApp Group