ಕನ್ನಡ ಕಿರುತೆರೆಯಲ್ಲಿ ಹಲವು ರಿಯಾಲಿಟಿ ಶೋ ಗಳು ಮೂಡಿ ಬರುತ್ತಿದ್ದು ಜನರು ಪ್ರತಿನಿತ್ಯ ಈ ರಿಯಾಲಿಟಿ ಶೋ ಗಳನ್ನ ನೋಡುವುದರ ಮೂಲಕ ಮನರಂಜನೆಯನ್ನ ಪಡೆದುಕೊಳ್ಳುತ್ತಿದ್ದರು ಎಂದು ಹೇಳಬಹುದು. ಪ್ರಸ್ತುತ ದಿನಗಳಲ್ಲಿ ಬಹಳ ಒಳ್ಳೆಯ ಕಾರ್ಯಕ್ರಮಗಳು ಮೂಡಿಬರುತ್ತಿರುವ ಕಿರುತೆಯ ಚಾನೆಲ್ ನಲ್ಲಿ ಜೀ ಕನ್ನಡ ಚಾನೆಲ್ ಅಗ್ರ ಸ್ಥಾನದಲ್ಲಿ ಇದೆ ಎಂದು ಹೇಳಬಹುದು. ಈ ಚಾನೆಲ್ ನಲ್ಲಿ ಬಹಳ ಒಳ್ಳೆಯ ಧಾರಾವಾಹಿ ಮತ್ತು ಶೋ ಗಳು ಮೂಡಿಬರುತ್ತಿದ್ದು ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬಂದ ಜನಪ್ರಿಯ ಶೋ ಗಳಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಕೂಡ ಒಂದು ಹೇಳಲಬಹುದು.
ರಾಜ್ಯದಲ್ಲಿ ಹಲವು ಜಿಲ್ಲೆಯ, ಹಲವು ಗ್ರಾಮದ ಪ್ರತಿಭೆಗಳು ಈ ವೇದಿಕೆಗೆ ಒಂದು ತಮ್ಮ ಪ್ರತಿಭೆಯನ್ನ ತೋರಿಸಿದ್ದು ನಿನ್ನೆ ಇದರ ಫೈನಲ್ ಕೂಡ ನಡೆದಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಫೈನಲ್ ಬಹಳ ರೋಚಕ ಹಂತವನ್ನ ತಲುಪಿದ್ದು ಕೊನೆಯಲ್ಲಿ ಹೆಚ್ಚಿನ ಮತವನ್ನ ಪಡೆದುಕೊಳ್ಳುವ ಮೂಲಕ ರಾಹುಲ್ ಮತ್ತು ಬೃಂದಾ ವಿಜೇತರಾಗಿದ್ದಾರೆ. ಇನ್ನು ವಿನ್ನರ್ ಸ್ಥಾನವನ್ನ ಗಿಟ್ಟಿಸಿಕೊಂಡ ರಾಹುಲ್ ಮತ್ತು ಬೃಂದಾ ಅವರಿಗೆ ಬಹುಮಾನಗಳ ಸುರಿಮಳೆಯೇ ಸುರಿದು ಬಂದಿದೆ ಎಂದು ಹೇಳಬಹುದು.
ಹಾಗಾದರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಫೈನಲ್ ನಲ್ಲಿ ವಿನ್ನರ್ ಆದ ರಾಹುಲ್ ಮತ್ತು ಬೃಂದಾ ಅವರಿಗೆ ಸಿಕ್ಕ ಒಟ್ಟು ಬಹುಮಾನದ ಹಣ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಪ್ರೈಕರ ಯಾರು ವಿನ್ ಆಗಬೇಕಿತ್ತು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.ಹೌದು ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ರಾಹುಲ್ ಮತ್ತು ಬೃಂದಾ ವಿಜೇತರಾಗಿದ್ದಾರೆ. ಖ್ಯಾತ ತೀರ್ಪುಗಾರ ಅನಿಸಿಕೊಂಡಿದ್ದ ಚಿನ್ನಿ ಪ್ರಕಾಶ್ ಅವರು ವಿಜೇತರನ್ನ ಘೋಷಣೆ ಮಾಡಿದ್ದಾರೆ. ಇನ್ನು ಡಾನ್ಸ್ ಶೋ ನಲ್ಲಿ ವಿನ್ನರ್ ಪಟ್ಟವನ್ನ ರಾಹುಲ್ ಮತ್ತು ಬೃಂದಾ ಅವರು ತಮ್ಮ ಹೆಗಲಿಗೆ ಏರಿಸಿಕೊಂಡಿದ್ದಾರೆ.
ಇನ್ನು ಮೊದಲ ಸ್ಥಾನ ಪಡೆದುಕೊಂಡ ರಾಹುಲ್ ಮತ್ತು ಬೃಂದಾ ಅವರಿಗೆ 20 ಲಕ್ಷ ರೂಪಾಯಿ ಮೌಲ್ಯದ ನಿವೇಶನ ಮತ್ತು 5 ಲಕ್ಷ ರೂಪಾಯಿ ಹಣ ಸೇರಿ ವಿವಿಧ ಬಹುಮಾನ ನೀಡಲಾಗಿದೆ. ತೀರ್ಪುಗಾರರಾಗಿದ್ದ ಚಿನ್ನಿಪ್ರಕಾಶ್, ವಿಜಯ ರಾಘವೇಂದ್ರ, ರಕ್ಷಿತಾ, ಅರ್ಜುನ್ ಜನ್ಯ ಹಾಗೂ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರ್ ಅವರು ವಿಜೇತರಿಗೆ ಟ್ರೋಫಿ ವಿತರಿಸಿದ್ದಾರೆ. ಫೈನಲ್ ನಲ್ಲಿ ಬಹಳ ಪೈಪೋಟಿ ಆಗಿದ್ದು ಕೊನೆಯ ಕ್ಷಣದಲ್ಲಿ ರಾಹುಲ್ ಮತ್ತು ಬೃಂದಾ ಅವರು ಹೆಚ್ಚಿನ ವೋಟ್ ಪಡೆದುಕೊಂಡ ಕಾರಣ ಅವರನ್ನ ವಿನ್ನರ್ ಎಂದು ಘೋಷಣೆ ಮಾಡಲಾಯಿತು. ಸ್ನೇಹಿತರೆ ನಿಮ್ಮ ಪ್ರಕಾರ ಯಾರು ವಿನ್ ಆಗಬೇಕಿತ್ತು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.