Milana and Krishna New Home: ಹೊಸ ಮನೆಯ ಗೃಹ ಪ್ರವೇಶ ಮಾಡಿ ಮನೆಗೆ ವಿಭಿನ್ನ ಹೆಸರಿಟ್ಟ ಮಿಲನ ಮತ್ತು ನಾಗರಾಜ್.
Milana and Krishna New Home: ಕನ್ನಡ ಚಿತ್ರರಂಗದ (Kannada Film Industry) ಟಾಪ್ ನಟ ಮತ್ತು ನಟಿಯರಲ್ಲಿ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಮಿಲನ ನಾಗರಾಜ್ (Milana Nagaraj) ಕೂಡ ಒಬ್ಬರು ಎಂದು ಹೇಳಬಹುದು. Darling Krishna and Milana Nagaraj New Home Opening.
ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ ಮತ್ತು ನಟಿ ಅನಿಸಿಕೊಂಡಿದ್ದಾರೆ.ಇವರಿಬ್ಬರು ಜನರಿಗೆ ಬಹಳ ಇಷ್ಟವಾಗಿದ್ದು ಲವ್ ಮಾಕ್ಟೇಲ್ (Love Mocktail) ಚಿತ್ರದ ಮೂಲಕ ಎಂದು ಹೇಳಬಹುದು. ಈ ಚಿತ್ರ ಕನ್ನಡದ ಸೂಪರ್ ಹಿಟ್ ಚಿತ್ರ ಅನಿಸಿಕೊಂಡಿತ್ತು.
ಈ ಚಿತ್ರದ ಯಶಸ್ಸಿನ ನಂತರ ನಟಿ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ಒಬ್ಬರನ್ನ ಒಬ್ಬರು ಬಹಳ ಪ್ರೀತಿಮಾಡಿ ಮದುವೆಯನ್ನ ಮಾಡಿಕೊಂಡರು. ಮದುವೆಯಾದ ನಂತರ ಲವ್ ಮಾಕ್ಟೇಲ್ 2 (Love Mocktail 2) ಚಿತ್ರವನ್ನ ಮಾಡಿ ಇನ್ನಷ್ಟು ಯಶಸ್ಸನ್ನ ಪಡೆದುಕೊಂಡರು.
ಚಿತ್ರಗಳ ಯಶಸ್ಸಿನ ನಂತರ ಹೊಸ ಮನೆಗೆ ಕಾಲಿಟ್ಟ ದಂಪತಿಗಳು
ಹೌದು ನಟಿ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ಹಲವು ಸಮಯಗಳಿಂದ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸದ್ಯ ಕೆಲವು ಸೂಪರ್ ಚಿತ್ರಗಳನ್ನ ಕೊಡುವುದರ ಮೂಲಕ ಜೀವನದಲ್ಲಿ ಯಶಸ್ಸನ್ನ ಸಾಧಿಸಿದ ನಟಿ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ಈಗ ಹೊಸ ಮನೆಯ ಗೃಹ ಪ್ರವೇಶವನ್ನ ಮಾಡಿದ್ದಾರೆ.
ಹೊಸ ಮನೆಗೆ ಕ್ರಿಸ್ಮಿ ನೆಸ್ಟ್ ಎಂದು ಹೆಸರಿಟ್ಟ ದಂಪತಿಗಳು
ಜನರು ಸಾಮಾನ್ಯವಾಗಿ ಹೆತ್ತವರ ಹೆಸರು, ದೇವಾರ್ ಹೆಸರು ಅಥವಾ ಇತರೆ ಹೆಸರನ್ನೇ ಮನೆಗೆ ಇಡುತ್ತಾರೆ, ಆದರೆ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ಬಹಳ ವಿಭಿನ್ನವಾದ ಹೆಸರನ್ನ ಮನೆಗೆ ಇಡುವುದರ ಮೂಲಕ ಸುದ್ದಿಯಾಗಿದ್ದಾರೆ.
ಹೌದು ದಂಪತಿಗಳು ಕ್ರಿಸ್ಮಿ ನೆಸ್ಟ್ ಅನ್ನುವ ಹೆಸರನ್ನ ಮನೆಗೆ ಇಟ್ಟಿದ್ದು ಸದ್ಯ ಹೆಸರು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.
ಇಬ್ಬರ ಹೆಸರನ್ನ ಸೇರಿಸಿ ಮನೆಗೆ ಹೆಸರು
ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ಇಬ್ಬರ ಹೆಸರನ್ನ ಸೇರಿಸಿ ಮನೆಗೆ ಹೆಸರನ್ನ ಇಟ್ಟಿದ್ದಾರೆ. ಕೃಷ್ಣ ಮತ್ತು ಮಿಲನ ಅವರ ಮೊದಲ ಅಕ್ಷರಗಳನ್ನ ತೆಗೆದುಕೊಂಡು ಮನೆಗೆ ಕ್ರಿಸ್ಮಿ ನೆಸ್ಟ್ ಅನ್ನುವ ಹೆಸರನ್ನ ಇಡಲಾಗಿದೆ. ಇನ್ನು ಈ ಕ್ರಿಸ್ಮಿ ನೆಸ್ಟ್ ಅನ್ನುವ ಹೆಸರು ಕೃಷ್ಣ ಮತ್ತು ಮೂಲಕ ಗೂಡು ಅನ್ನುವ ಅರ್ಥವನ್ನ ನೀಡುತ್ತದೆ.
ಅದ್ದೂರಿಯಾಗಿ ಮನೆಯ ಪ್ರವೇಶ ಮಾಡಿದ ದಂಪತಿಗಳು
ಚಿತ್ರರಂಗದಲ್ಲಿ ಯಾರು ಪರಿಚಯದವರು ಇಲ್ಲದೆ ಚಿತ್ರರಂಗವನ್ನ ಪ್ರವೇಶ ಮಾಡಿ ಈಗ ಚಿತ್ರರಂಗದ ಟಾಪ್ ನಟ ನಟಿ ಮತ್ತು ಉತ್ತಮ ನಿರ್ದೇಶಕರು ಅನ್ನುವ ಪಟ್ಟವನ್ನ ನಟಿ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ಪಡೆದುಕೊಂಡಿದ್ದಾರೆ.
View this post on Instagram
ಸದ್ಯ ಬೆಂಗಳೂರಿನಲ್ಲಿ ಹೊಸ ಮನೆಯ ಪ್ರವೇಶವನ್ನ ದಂಪತಿಗಳು ಬಹಳ ಅದ್ದೂರಿಯಾಗಿ ಮಾಡಿದ್ದು ಈ ಮನೆಯ ಗೃಹ ಪ್ರವೇಶಕ್ಕೆ ಚಿತ್ರರಂಗದ ಹಲವು ಗಣ್ಯ ನಟ ನಟಿಯರು ಕೂಡ ಭಾಗವಹಿಸಿದ್ದರು.
ಫಿಲಂ ಫೇರ್ ಅವಾರ್ಡ್ ಪಡೆದುಕೊಂಡ ಮಿಲನ ಮತ್ತು ನಾಗರಾಜ್
ಇತ್ತೀಚಿಗೆ ನಡೆದ ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ನಟಿ ಮಿಲನ ನಾಗರಾಜ್ ಮತ್ತು ಕೃಷ್ಣ ಅವರು ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಉತ್ತಮವಾಗಿ ನಟನೆಯನ್ನ ಮಾಡಿದ ಕಾರಣ ಉತ್ತಮ ನಟ ಮತ್ತು ನಟಿ ಅನ್ನುವ ಪ್ರಶಸ್ತಿಯನ್ನ ಕೂಡ ಪಡೆದುಕೊಂಡರು.
ಸದ್ಯ ಚಿತ್ರರಂಗದಲ್ಲಿ ಬಹಳ ಒಳ್ಳೆಯ ಸಾಧನೆಯನ್ನ ಮಾಡುತ್ತಿರುವ ನಟಿ ಮಿಲನ ಮತ್ತು ನಾಗರಾಜ್ ಅವರು ಅಭಿಮಾನಿಗಳು ಶುಭಾಶಯಗಳನ್ನ ಸಲ್ಲಿಸಿದ್ದಾರೆ.