ಚಿತ್ರರಂಗದಲ್ಲಿ ರಚಿತಾ ರಾಮ್ ಮಾಡಿರುವ ಆ ದಾಖಲೆ ಬಗ್ಗೆ ತಿಳಿಸಿದ ನಟ ದರ್ಶನ್

Darshan about Rachita Ram: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ನಂತರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ತಯಾರಿ(Kranti Movie Releasing on 26th January)  ಹಂತದಲ್ಲಿದೆ. ಈ ಚಿತ್ರದ ಬಗ್ಗೆ ಮೇಜರ್ ಅಪ್ ಡೇಟ್(Kranti Movie Updates)  ಸಿಕ್ಕಿದೆ.

ಬರುವ ವರ್ಷ ಜನವರಿ 2023ರ ಗಣರಾಜ್ಯೋತ್ಸವಕ್ಕೆ ಕ್ರಾಂತಿ ಚಿತ್ರ ತೆರೆಗೆ ಅಪ್ಪಳಿಸಲಿದ್ದು ಈಗಾಗಲೇ ಘೋಷಣೆ ಮಾಡಿದೆ. ಇನ್ನು ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೆಚ್ಚಿಸಿದೆ.

ಈ ನಡುವೆ ಚಿತ್ರದ ನಾಯಕಿ ಬಗ್ಗೆ ದಚ್ಚು ಗುಣಗಾನ ಮಾಡಿದ್ದು
ಈಗಿನ ಪೀಳಿಗೆಯಲ್ಲಿ ಯಶಸ್ವಿ ನಾಯಕಿಯಾಗಿ 10 ವರುಷ ತುಂಬಿರುವುದು ದೊಡ್ಡ ಸಾಧನೆ ಎಂದು ಕ್ರಾಂತಿ ನಟಿ ರಚಿತಾ ರಾಮ್ ಬಗ್ಗೆ ದರ್ಶನ್ ರವರು ಶ್ಲಾಘಿಸಿದ್ದಾರೆ.

ಹೌದು ಈ ಹಿಂದೆ ನಾಯಕಿಯರು ಎರಡು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಮೆರೆದ ಸಂದರ್ಭಗಳಿದ್ದು ಆದರೆ ಈಗಿನ ಸಂದರ್ಭದಲ್ಲಿ ಅದು ಕಷ್ಟ.

ಇಂದುಹೆಚ್ಚಿನ ನಾಯಕಿಯರು ಸುಮಾರು 5 ರಿಂದ 7 ವರ್ಷಗಳ ವರೆಗೆ ಮಾತ್ರ ಸಿನಿಮಾ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ. ‍ಆದರೆ ನಟಿ ರಚಿತಾ ಪ್ರತಿಭೆಮತ್ತು ಸಮರ್ಪಣಾ ಭಾವವೇ ಆಕೆಯನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ನಟ ದರ್ಶನ್ ರವರು ಅಭಿಪ್ರಾಯ ಪಟ್ಟಿದ್ದಾರೆ.

Join Nadunudi News WhatsApp Group

Darshan about Rachita Ram
Image Credit: Times Of India

ಕಿರುತೆರೆಯಿಂದ ಬೆಳ್ಳಿಪರದೆಗೆ ಪಯಣ

ನಾನು ಮೊದಲು ಕಿರುತೆರೆಯಿಂದ ಬೆಳ್ಳಿಪರದೆಗೆ ಬಂದಿದ್ದು ದರ್ಶನ್ ಅವರ ಬುಲ್ ಬುಲ್ ಚಿತ್ರ ಮೂಲಕವಾಗಿ ನಾನು ಸ್ಯಾಂಡಲ್ ವುಡ್ ಪ್ರವೇಶ ಮಾಡಿದೆ. ಸೆಪ್ಟಂಬರ್ 21 2012 ರಂದು ನನ್ನ ಮೊದಲ ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು 10 ವರ್ಷಗಳ ನಂತರ ಅದೇ ದಿನ ನಾನು ಕ್ರಾಂತಿ ಚಿತ್ರೀಕರಣದಲ್ಲಿ ಪಾಲ್ಗೊಂಡೆ.

ಹೌದು ನನ್ನ ಸಿನಿಮಾ ತಂಡ ವೃತ್ತಿ ಜೀವನದ ವಾರ್ಷಿಕೋತ್ಸವ ಆಚರಿಸಿತು ಎಂದು ರಚಿತಾ ರಾಮ್ ತಿಳಿಸಿದ್ದು ಬುಲ್ ಬುಲ್ ಸಿನಿಮಾಗೂ ಕೂಡ ವಿ ಹರಿಕೃಷ್ಣ ರವರ ಸಂಗೀತವಿತ್ತು. ಕ್ರಾಂತಿ ಸಿನಿಮಾದಲ್ಲಿ ಸಂಗೀತ ನಿರ್ದೇಶಕರಾಗಿದ್ದು ಜೊತೆಗೆ ಸಿನಿಮಾ ನಿರ್ದೇಶನ ಕೂಡ ಮಾಡಿದ್ದಾರೆ.

Darshan about Rachita Ram
Image Credit: Times Of India

ಕ್ರಾಂತಿ ಸಿನಿಮಾ ಮುಂದಿನ ಕೆಲ ವರ್ಷಗಳ ವರೆಗೂ ಕೂಡ ನನ್ನ ಪ್ರಯಾಣವನ್ನು ವ್ಯಾಖ್ಯಾನಿಸಲಿದೆ. ನನ್ನ ವೃತ್ತಿ ಜೀವನದ 10ನೇ ವರ್ಷದಲ್ಲಿ ಕ್ರಾಂತಿ ಸಿನಿಮಾ ಬಿಡುಗಡೆ ಆಗುತ್ತಿರುವುದು ನನ್ನ ಮೊದಲ ಸಿನಿಮಾ ಬಿಡುಗಡೆ ಆದಂತೆ ಅನಿಸುತ್ತಿದೆ.

ಕ್ರಾಂತಿ ಸಿನಿಮಾ ಬಿಡುಗಡೆ

ಹೌದು ಈ 10 ವರ್ಷಗಳಲ್ಲಿ ನಾನು ಗಳಿಸಿದ ಅನುಭವ ಕೇವಲ ಪ್ರಯೋಗವಾಗಿದೆ ಎನ್ನಿಸುತ್ತಿದೆ. ಇನ್ನು ಒಬ್ಬ ಕಲಾವಿದೆಯಾಗಿ ನಾನು ನನ್ನ ಅಧ್ಯಯನ ಮಾಡಬೇಕು. ಜೊತೆಗೆ ಸಿನಿಮಾ ರಂಗವನ್ನು ಗಮನಿಸಬೇಕು ಎಂದಿದ್ದಾರೆ ರಚಿತಾ.

ಇನ್ನು ನಟಿ ರಚಿತಾ ರಾಮ್ ರವರು ಮೊದಲಿನಿಂದಲೂ ಕೂಡ ಕಮರ್ಷಿಯಲ್ ಹೀರೋಯಿನ್ ಎಂದೇ ಪರಿಗಣಿಸಲ್ಪಟ್ಟಿದ್ದು ಇಂದಿಗೂ ಆ ಸ್ಥಾನಮಾನವನ್ನು ಉಳಿಸಿಕೊಂಡು ಬಂದಿರುವ ಖುಷಿಯಲ್ಲಿದ್ದಾರೆ. ಹೌದು ದೀರ್ಘಕಾಲದವರೆಗೆ ಕಮರ್ಷಿಯಲ್ ನಾಯಕಿಯಾಗಿ ಉಳಿಯುವುದು ಆಶೀರ್ವಾದವಾಗಿದ್ದು ಒಂದೆರಡು ಸಿನಿಮಾಗಳ ಬಗ್ಗೆ ವಿಷಾದವಿದೆ.

Darshan about Rachita Ram
Image Credit: Times Of India

ಪ್ರತಿಯೊಬ್ಬ ನಿರ್ದೇಶಕರು ಕಥೆ ಬರೆಯುವಾಗ ನನ್ನನ್ನು ಅವರ ಮನಸ್ಸಿನಲ್ಲಿರಿಸಿಕೊಂಡಿರುವುದು ನನಗೆ ಖುಷಿಯಾಗಿದ್ದು ನಾನು ಕಮರ್ಷಿಯಲ್ ಹೀರೋಯಿನ್ ಆಗಿದ್ದೇನೆ. ಹೌದು ಹೀಗಾಗಿ ಅವರ ಕೈಗೆ ಸಿಗುವುದಿಲ್ಲ ಎಂದು ಹೇಳುತ್ತಿದ್ದರು.

ರಚಿತಾರಾಮ್ ಬಗ್ಗೆ ಹೊಗಳಿಕೆ

ಇದು ತಪ್ಪು ಗ್ರಹಿಕೆ ಎಂದು ಸ್ಪಷ್ಟ ಪಡಿಸಿದ್ದಾರೆ ಗುಳಿಕೆನ್ನೆ ಸುಂದರು. ಇಷ್ಟು ವರ್ಷ ಇಲ್ಲಿರುವ ನನಗೆ ಕನ್ನಡ ಚಿತ್ರರಂಗದ ಮಾರುಕಟ್ಟೆ ಅರ್ಥವಾಗುತ್ತಿದ್ದು ಇದಲ್ಲದೆ ನಾನು ಮೊದಲು ನಟಿ ನಂತರ ಮಾತ್ರ ನಾಯಕಿ.

ನಾನು ಯಾವುದೇ ರೀತಿಯ ಪಾತ್ರದಲ್ಲಿ ಬೆರೆಯಬಲ್ಲೆ. ಹೌದು ನಾನು ಸಂಭಾವನೆಯ ದೃಷ್ಟಿಯಿಂದ ಎಲ್ಲದಕ್ಕೂ ಬೆಲೆ ಕೊಡುವುದಿಲ್ಲ ಎಂದಿದ್ದು ಜನವರಿ 26 ರಂದು ಕ್ರಾಂತಿ ಬಿಡುಗಡೆ ಆಗಲಿದ್ದು ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ನಂತರ ನಿರ್ಧಾರ ಕೈಗೊಳ್ಳುವುದಾಗಿ ರಚಿತಾ ರಾಮ್ ತಿಳಿಸಿದ್ದಾರೆ.

Join Nadunudi News WhatsApp Group