Pavithra Gowda: ಈ ಕಾರಣಕ್ಕೆ ಪವಿತ್ರ ಜೊತೆ ಮಾತುಬಿಟ್ಟ ದರ್ಶನ್, ಕಣ್ಣೀರಿಟ್ಟ ಪವಿತ್ರ ಗೌಡ.

ಈ ಕಾರಣಕ್ಕೆ ಪವಿತ್ರ ಜೊತೆ ಮಾತುಬಿಟ್ಟ ದರ್ಶನ್

Darshan And Pavitra Gowda New Update: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ. ರೇಣುಕಾಸ್ವಾಮಿ ಹತ್ಯೆಯ ಪ್ರಕಣದಲ್ಲಿ ಸಿಲುಕಿರುವ ಆರೋಪಿಗಳು ಸದ್ಯ ಜುಲೈ 18 ರವರೆಗೆ ನ್ಯಾಯಾಂಗ ಬಂದನಾ ಆದೇಶವಾಗಿದೆ.

ಈ ಮದ್ಯೆ ದರ್ಶನ್ ಹಾಗೂ ಪವಿತ್ರ ಗೌಡಗೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಬಹಿರಂಗವಾಗುತ್ತಿದೆ. ದರ್ಶನ್ ರೇಣುಕಾಸ್ವಾಮಿ ಹತ್ಯೆ ಮಾಡುವ ಮುನ್ನ ಯಾವ ರೀತಿ ಪವಿತ್ರ ಗೌಡ ಜೊತೆ ಮಾತುಕತೆ ನಡೆಸಿದ್ದರು ಎನ್ನುವ ಬಗ್ಗೆ ತನಿಖೆ ನಡೆಸಲಾಗಿತ್ತು. ಸದ್ಯ ಈ ವೇಳೆ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

Darshan And Pavitra Gowda New Update
Image Credit: News 18

ದರ್ಶನ್ ಜೊತೆ ಮಾತು ಬಿಟ್ಟಿದ್ದ ಪವಿತ್ರ ಗೌಡ
ರೇಣುಕಾಸ್ವಾಮಿ ಹತ್ಯೆಗೂ ಮುನ್ನ ನಟ ದರ್ಶನ್ ಜೊತೆ ಪವಿತ್ರಾ ಜಗಳವಾಡಿದ್ದರಂತೆ. ಐಷಾರಾಮಿ ಕಾರು ಕೊಡಿಸುವ ವಿಚಾರದಲ್ಲಿ ಪವಿತ್ರಾ ಗೌಡ ದರ್ಶನ್ ಜೊತೆ ಮಾತು ಬಿಟ್ಟಿದ್ದರಂತೆ. ಸುಮಾರು ಒಂದು ತಿಂಗಳ ಕಾಲ ನಟ ದರ್ಶನ್ ಜೊತೆ ಪವಿತ್ರಾ ಮಾತನಾಡುವುದನ್ನು ನಿಲ್ಲಿಸಿದ್ದರು ಎನ್ನಲಾಗಿದ್ದು, ನಂತರ ನಟ ದರ್ಶನ್ ಅವರಿಗೆ ರೇಂಜ್ ರೋವರ್ ಕಾರು ನೀಡಿದ್ದಾರೆ.

ದರ್ಶನ್ ನೀಡಿರುವ ರೇಂಜ್ ರೋವರ್ ಕಾರಿನ ಬೆಲೆ ಇಂದಿನ ಮಾರುಕಟ್ಟೆಯಲ್ಲಿ ಸುಮಾರು 2-3 ಕೋಟಿ ಎನ್ನಲಾಗಿದೆ. ಕಾರು ಕೊಟ್ಟ ನಂತರ ಪವಿತ್ರಾ ಗೌಡ ಖುಷಿ ಪಟ್ಟಂತೆ ಕಾಣುತ್ತಿತ್ತು. ಇದಾದ ನಂತರ ಕೆಲ ದಿನಗಳ ನಂತರ ದರ್ಶನ್ ಮೇಲೆ ಮತ್ತೆ ಮುನಿಸಿಕೊಂಡಿದ್ದರಂತೆ. ಅದ್ದೂರಿಯಾಗಿ ನಡೆದ ವಿವಾಹ ವಾರ್ಷಿಕೋತ್ಸವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪವಿತ್ರಾ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಕರ್ಮಾ ರಿಟರ್ನ್ಸ್ ಎಂದು ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.

Darshan Wife Vijayalakshmi
Image Credit: Times Now News

ಈ ಕಾರಣಕ್ಕೆ ಪವಿತ್ರ ಜೊತೆ ಮಾತುಬಿಟ್ಟ ದರ್ಶನ್
ಅದೇ ರೀತಿ ಮೇ 19 ರಂದು ದರ್ಶನ್ ಮತ್ತು ವಿಜಯಲಕ್ಷ್ಮಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ದುಬೈನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡರು. ದರ್ಶನ್ ಕೂಡ ತಮ್ಮ ಪತ್ನಿಯೊಂದಿಗೆ ಖುಷಿಯಿಂದ ಸಮಯ ಕಳೆದಿದ್ದು, ಈ ವಿಡಿಯೋಗಳನ್ನು ವಿಜಯಲಕ್ಷ್ಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇಷ್ಟೆಲ್ಲಾ ಆದ ಕೆಲವೇ ದಿನಗಳಲ್ಲಿ ರೇಣುಕಾಸ್ವಾಮಿಯವರಿಂದ ಸಂದೇಶಗಳು ಹೆಚ್ಚಾಗುತ್ತಿದ್ದವು.

Join Nadunudi News WhatsApp Group

ಆದರೆ ಈ ವೇಳೆ ದರ್ಶನ್ ಮೇಲೆ ಪವಿತ್ರ ಮುನಿಸಿಕೊಂಡಿದ್ದರಿಂದ ಈ ವಿಚಾರ ಹೇಳಿರಲಿಲ್ಲ. ಆದರೆ ಪವಿತ್ರಾ ಮನೆಯಲ್ಲಿಯೇ ಇದ್ದ ಪವನ್ ಗೆ ಮಾಹಿತಿ ನೀಡಿದ್ದರು. ಈ ವೇಳೆ ಪವಿತ್ರಾ ಗೌಡ ಅಕೌಂಟ್ ಮೂಲಕ ಪವನ್ ರೇಣುಕಾಸ್ವಾಮಿ ಜೊತೆ ಚಾಟ್ ಮಾಡುತ್ತಿದ್ದ ಎನ್ನಲಾಗಿದೆ. ಇದಾದ ಬಳಿಕ ಎಲ್ಲರು ಪ್ಲಾನ್ ಮಾಡಿ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ್ದಾರೆ ಎನ್ನುವುದು ಪ್ರಕರಣದ ತನಿಖೆಯಿಂದ ಬಂದ ಮಾಹಿತಿಯಾಗಿದೆ.

Renukaswami Murder Case
Image Credit: Mathrubhumi

Join Nadunudi News WhatsApp Group