Darshan Case: ದರ್ಶನ್ ಕೇಸ್ ನಲ್ಲಿ ಇನ್ನೊಂದು ತಿರುವು, ಇನ್ನೊರ್ವ ವ್ಯಕ್ತಿ ಪತ್ತೆ.

ದರ್ಶನ್ ಕೇಸ್ ನಲ್ಲಿ ಇನ್ನೊಂದು ತಿರುವು

Darshan Case New Update: ಸದ್ಯ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳನ್ನು ಜುಲೈ 18 ರವರೆಗೆ ನ್ಯಾಯಾಂಗ ಬಂಧನವನ್ನು ಕೋರ್ಟ್ ಘೋಷಿಸಿದೆ. ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಎಲ್ಲ ಆರೋಪಿಗಳು ಸದ್ಯ ಜೈಲು ಪಾಲಾಗಿದ್ದಾರೆ. ನಟ ದರ್ಶನ್ ಇಗ ಮತ್ತೆ ಜೈಲು ವಸ ಅನುಭವಿಸುವಂತಾಗಿದೆ ಎನ್ನಬಹುದು. ಇನ್ನು ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸದ್ಯ ಪ್ರಕರಣದ ತನಿಖೆ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಮಾಹಿತಿ ಲಭಿಸಿದೆ. ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ವ್ಯಕ್ತಿ ಪತ್ತೆಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಹಿಂದೆ ಈ ವ್ಯಕಿಯ ಕೈವಾಡ ಎಷ್ಟಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Darshan Case New Update
Image Credit: India Express

ದರ್ಶನ್ ಕೇಸ್ ನಲ್ಲಿ ಇನ್ನೊಂದು ತಿರುವು
ಇದೀಗ ರೇಣುಕಾ ಸ್ವಾಮಿ ಹತ್ಯೆ ಬಳಿಕ ಸ್ಥಳದಲ್ಲಿದ್ದ ನಿಗೂಢ ವ್ಯಕ್ತಿ ಪತ್ತೆಯಾಗಿದ್ದಾನೆ. ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ನಾಪತ್ತೆಯಾದ ವ್ಯಕ್ತಿ ಇದೀಗ ಪತ್ತೆಯಾಗಿದ್ದಾನೆ ಎನ್ನಲಾಗಿದೆ. ಪತ್ತೆಯಾದ ವ್ಯಕ್ತಿಯನ್ನು ಶಾಸಕ ರವಿ ಸುಬ್ರಹ್ಮಣ್ಯ ಅವರ ಕಾರು ಚಾಲಕ ಕಾರ್ತಿಕ್ ಪುರೋಹಿತ ಎಂದು ಗುರುತಿಸಲಾಗಿದೆ.

ಪತ್ತೆಯಾದ ಕಾರ್ತಿಕ್ ಪರೋಹಿತ್ MLA ಜೊತೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನಿಗೂಢ ವ್ಯಕ್ತಿ ಕಾರ್ತಿಕ್ ಪುರೋಹಿತ್ ಸದ್ಯ ಶಾಸಕ ರವಿ ಸುಬ್ರಹ್ಮಣ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಕಾರ್ತಿಕ್ ಪುರೋಹಿತ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ನೋಟಿಸ್ ಬಂದ ತಕ್ಷಣ ಕಾರ್ತಿಕ್ ಪುರೋಹಿತ್ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Actor Darshan Latest News
Image Credit: India Express

ಪ್ರಕರಣದಲ್ಲಿ ಇನ್ನೊರ್ವ ವ್ಯಕ್ತಿ ಪತ್ತೆ
ಆರೋಪಿ ದೀಪಕ್ ಕಾರ್ತಿಕ್ ಗೆ 10 ಲಕ್ಷ ಕೊಡುವುದಾಗಿ ಹೇಳಿದ್ದ. ನಿಮ್ಮ ತಾಯಿಗೆ 5 ಲಕ್ಷ ಕೊಡುತ್ತೇವೆ. ಪ್ರಕರಣದಲ್ಲಿ ಸಿಲುಕಿಕೊಂಡರೆ ಬೇಲ್ ಕೊಡಿಸುವುದು ನಮ್ಮ ಜವಾಬ್ದಾರಿ ಎಂದು ದೀಪಕ್ ಹೇಳಿದ್ದ. ತಿಂಗಳಿಗೆ 3000 ಸಂಬಳ ನೀಡುತ್ತೇವೆ, ಶೆಡ್ ನಲ್ಲಿ ಕೆಲಸ ಕೊಡುತ್ತೇವೆ ಎಂಬ ಎಲ್ಲಾ ಮಾತಿಗೂ ಕಾರ್ತಿಕ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

Join Nadunudi News WhatsApp Group

ಆರೋಪಿ ದೀಪಕ್ ನನ್ನು ಉಳಿಸುವಂತೆ ಪ್ರಭಾವಿಗಳ ಒತ್ತಡವಿದ್ದು, ಪ್ರಭಾವಿ ಶಾಸಕರೊಬ್ಬರ ತಂಗಿ ಮಗಳ ಪತಿ ದೀಪಕ್ ನನ್ನು ಉಳಿಸಿಕೊಳ್ಳಲು ಶಾಸಕರು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ. ದೀಪಕ್ ನನ್ನ ಪ್ರಕರಣದಿಂದ ಹೊರತರಲು ಮಾಜಿ ಸಚಿವರು ಹಾಗೂ ಶಾಸಕರಿಂದ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಪೊಲೀಸರ ಮೇಲೆ ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವ ಬಗ್ಗೆ ಮಹೀ ಲಭಿಸಿದೆ.

Darshan Murder Case
Image Credit: Moneycontrol

Join Nadunudi News WhatsApp Group