Darshan Manager: ನಾಪತ್ತೆಯಾದ ಮಲ್ಲಿಕಾರ್ಜುನ್ ಕೊನೆಗೂ ಪತ್ತೆ, ಇಷ್ಟು ದಿನ ಎಲ್ಲಿದ್ದರು ದರ್ಶನ್ ಮ್ಯಾನೇಜರ್.

ದರ್ಶನ್ ಮ್ಯಾನೇಜರ್ ಇಷ್ಟು ದಿನ ಎಲ್ಲಿದ್ದರು...?

Darshan Manager New Update: ನಟ ದರ್ಶನ್ ಜೈಲು ಸೇರಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ದರ್ಶನ್ ಜೈಲು ಸೇರುತ್ತಿದ್ದಂತೆ ಅನೇಕ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ. ದರ್ಶನ್ ಡೇಟ್ಸ್ ನಿಂದ ಹಿಡಿದು ತೂಗುದೀಪ ಡಿಸ್ಟ್ರಿಬ್ಯುಶನ್ ನ ಎಲ್ಲಾ ಕೆಲಸಗಳನ್ನು ನೋಡಿಕೊಂಡ ಮಲ್ಲಿ (ಮಲ್ಲಿಕಾರ್ಜುನ್) ದರ್ಶನ್ ಮಾತ್ರವಲ್ಲದೆ ಅರ್ಜುನ್ ಸರ್ಜಾ ಸೇರಿದಂತೆ ಹಲವು ಮಂದಿಗೆ ದರ್ಶನ್ ಹೆಸರಲ್ಲಿ ಮೋಸ ಮಾಡಿದ್ದರು.

ಮಲ್ಲಿಯ ಹೆಸರು ನಾಪತ್ತೆಯಾದವರ ಹೆಸರಿನಲ್ಲಿ ಹಲವು ವರ್ಷಗಳಿಂದ ಪ್ರಕಟವಾಗಿದೆ. ಈ ಏಳು ವರ್ಷಗಳಲ್ಲಿ ಮಲ್ಲಿಕಾರ್ಜುನ ಎಲ್ಲಿ ಹೋದ? ಏನು ಆದ? ಎನ್ನುವ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆದರೆ ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಬಂಧನವಾದ ಬೆನ್ನಲ್ಲೇ ಮಲ್ಲಿ ಪತ್ತೆಯಾಗಿದ್ದಾರೆ ಮಲ್ಲಿ ಪತ್ತೆಯಾದ ಬೆನ್ನಲ್ಲೇ ಇಷ್ಟು ದಿನ ದರ್ಶನ್ ಮ್ಯಾನೇಜರ್ ಎಲ್ಲಿದ್ದರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

Actor Darshan Manager Mallikarjun
Image Credit: The Economic Times

ನಾಪತ್ತೆಯಾದ ಮಲ್ಲಿಕಾರ್ಜುನ್ ಕೊನೆಗೂ ಪತ್ತೆ
ಮಲ್ಲಿ ನಾಪತ್ತೆಯ ಹಿಂದೆ ದರ್ಶನ್ ಕೈವಾಡ ಇದೆಯಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ದರ್ಶನ್ ರೇಣುಕಾಸ್ವಾಮಿ ಅವರಂತೆ ಎಲ್ಲಿ ಮಲ್ಲಿಯನ್ನು ಕೂಡ ಕೊಂದಿರಬಹುದು ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗ ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ ಇದೀಗ ಪತ್ತೆಯಾಗಿದ್ದಾರೆ. ಸದ್ಯ ಮಲ್ಲಿ ಗೋವಾದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. 2018 ರಲ್ಲಿ ಹಣ ವಂಚನೆ ಪ್ರಕರಣದಲ್ಲಿ ದರ್ಶನ್ ಬಳಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್ ನಾಪತ್ತೆಯಾಗಿ 7 ವರ್ಷ ಕಳೆದಿದ್ದು, ಈಗ ಅವರು ಇರುವ ಬಗ್ಗೆ ಅನುಮಾನ ಮೂಡಿದೆ.

ಇಷ್ಟು ದಿನ ಎಲ್ಲಿದ್ದರು ದರ್ಶನ್ ಮ್ಯಾನೇಜರ್
ಪ್ರೇಮ ಬರಹ ಚಿತ್ರದ ವಿತರಣಾ ಜವಾಬ್ದಾರಿಯನ್ನು ತೂಗುದೀಪ ಪ್ರೊಡಕ್ಷನ್ಸ್‌ ಗೆ ವಹಿಸಲಾಗಿತ್ತು. ಮಲ್ಲಿಕಾರ್ಜುನ್ ಇದರ ಸಂಪೂರ್ಣ ಹೊಣೆ ಹೊತ್ತಿದ್ದರು. ಚಿತ್ರದ ಹಕ್ಕು ಹಂಚಿಕೆಯಾದ ಬಳಿಕ ಮಲ್ಲಿಕಾರ್ಜುನ್ ಹಣ ತೆಗೆದುಕೊಂಡು ಓಡಿ ಹೋಗಿದ್ದಾರೆ. ಸುಮಾರು 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ ಈವರೆಗೆ ಪತ್ತೆಯಾಗಿರಲಿಲ್ಲ. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ್, ದರ್ಶನ್ ರಿಂದ ನಮಗೆ ಯಾವುದೇ ತೊಂದರೆ ಆಗಿಲ್ಲ, ಅವರಿಂದ ಒಂದು ಹೊತ್ತು ಊಟ ಸಿಕ್ಕಿದೆ. ದಯವಿಟ್ಟು ನಮ್ಮ ಮನೆಯ ಬಳಿ ಯಾರು ಬರಬೇಡಿ ಎಂದು ಹೇಳಿದ್ದಾರೆ.

Darshan Manager New Update
Image Credit: Lehren

Join Nadunudi News WhatsApp Group

Join Nadunudi News WhatsApp Group