Pavithra Gowda Friend: ಜೈಲಿನಲ್ಲಿ ದರ್ಶನ್ ಅವರನ್ನ ಭೇಟಿಯಾದ ಈ ಮಹಿಳೆ ಯಾರು ಗೊತ್ತಾ…?

ಜೈಲಿನಲ್ಲಿ ದರ್ಶನ್ ಅವರನ್ನ ಭೇಟಿಯಾದ ಈ ಮಹಿಳೆ ಯಾರು ಗೊತ್ತಾ...?

Darshan Meet Pavithra Gowda Friend Samatha: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗತಿಯಲ್ಲಿ ಮಾಡುತ್ತಿದ್ದು, ಒಂದೊಂದೇ ವಿಚಾರವನ್ನು ಕಲೆ ಹಾಕುತ್ತಿದ್ದಾರೆ. ಇನ್ನು ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿ ಮಾಡಲು ಚಿತ್ರ ರಂಗದ ಅನೇಕರು ಬರುತ್ತಿದ್ದಾರೆ. ಆದರೆ ದರ್ಶನ್ ಕುಟುಂಬದ ಹೊರತಾಗಿಯೂ ಬೇರೆಯರನು ಭೇಟಿ ಮಾಡುತ್ತಿಲ್ಲ ಎನ್ನುವುದು ಸದ್ಯದ ಮಾಹಿತಿಯಾಗಿದೆ.

ನಟ ವಿನೋದ್ ಪ್ರಭಾಕರ್, ರಕ್ಷಿತಾ ಪ್ರೇಮ್ ಹೊರತಾಗಿ ಪತ್ನಿ, ಮಗ, ತಾಯಿ ಮತ್ತು ಸಹೋದರರನ್ನು ಮಾತ್ರ ದರ್ಶನ್ ಭೇಟಿ ಆಗಿದ್ದರು. ಬೇರೆ ಯಾರೇ ಬಂದರು ಕೂಡ ದರ್ಶನ್ ಭೇಟಿಗೆ ಒಪ್ಪಿರಲಿಲ್ಲ. ಸದ್ಯ ಕುಟುಂಭದ ಹೊರತಾಗಿಯೂ ಈ ಮಹಿಳೆಯರನ್ನು ಭೇಟಿಯಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಅಷ್ಟಕ್ಕೂ, ಜೈಲಿನಲ್ಲಿ ದರ್ಶನ್ ಅವರನ್ನ ಭೇಟಿಯಾದ ಈ ಮಹಿಳೆ ಯಾರು…? ಅನ್ನುವ ಬಗ್ಗೆ ಸದ್ಯೆ ಪ್ರಶ್ನೆಗಳು ಕೇಳಿಬರುತ್ತಿದೆ.

Darshan Meet Pavithra Gowda Friend Samantha
Image Credit: Oneindia

ಜೈಲಿನಲ್ಲಿ ದರ್ಶನ್ ಅವರನ್ನ ಭೇಟಿಯಾದ ಈ ಮಹಿಳೆ ಯಾರು ಗೊತ್ತಾ…?
ರೇಣುಕಾಸ್ವಾಮಿ ಪ್ರಕರಣದ ಆರೋಪಿ ಎ1 ಪವಿತ್ರಾ ಗೌಡ ಸ್ನೇಹಿತೆಯನ್ನು ದರ್ಶನ್ ಜೈಲಿನಲ್ಲಿ ಭೇಟಿಯಾಗಿದ್ದಾರೆ. ಪವಿತ್ರಾ ಗೌಡ ಗೆಳತಿ ಸಮತಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ದರ್ಶನ್ ಅವರ ಭೇಟಿ ವಿವರಗಳ ಜೈಲು ಪ್ರವೇಶ ಪುಸ್ತಕದಲ್ಲಿ ಸಮತಾ ಹೆಸರು ನಮೂದಿಸಲಾಗಿದೆ. ಪವಿತ್ರಾ ಮತ್ತು ಸಮತಾ ಆಪ್ತ ಸ್ನೇಹಿತರಾಗಿದ್ದು, ಕುಟುಂಬ ಸದಸ್ಯರ ಹೊರತಾಗಿ ಪವಿತ್ರಾ ಗೌಡ ಆಪ್ತ ವಲಯದಲ್ಲಿ ಸಮತಾ ಮೊದಲಿಗರು ಎನ್ನಲಾಗಿದೆ.

ಜೈಲಿನಲ್ಲಿ ಸಮತಾ ಜೊತೆ ಮಾತನಾಡಲು ದರ್ಶನ್ ಒಪ್ಪಿದ್ದು, ಇಬ್ಬರ ನಡುವೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆದಿದೆ ಎನ್ನಲಾಗಿದೆ.ಆದರೆ ಚರ್ಚೆಯಾದ ವಿಚಾರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಜೈಲಿನಲ್ಲಿ ದರ್ಶನ್ ಭೇಟಿ ವೇಳೆ ಪವಿತ್ರಾ ಗೌಡ ಜಾಮೀನು ಪ್ರಕ್ರಿಯೆ ಕುರಿತು ಸಮತಾ ಚರ್ಚೆ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ.

ದರ್ಶನ್ ಬಂಧನಕ್ಕೆ ಒಂದು ತಿಂಗಳು ಸಮೀಪಿಸುತ್ತಿದ್ದು, ಇದುವರೆಗೆ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿಲ್ಲ. ನ್ಯಾಯಾಲಯವು ಸದ್ಯ ಪ್ರಕರಣಕ್ಕೆ ಸಂಬಂಧಿಸಿದ 17 ಆರೋಪಿಗಳನ್ನು ಮತ್ತೆ ಜುಲೈ 18 ರವರೆಗೆ ನ್ಯಾಯಾಂಗ ಬಂಡಲಲಿರಿಸಿದೆ. ಸದ್ಯ ರೇಣುಕಾಸ್ವಾಮಿ ಪ್ರಕರಣದ ಸಂಪೂರ್ಣ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಪ್ರಕರಣದ ಬಗ್ಗೆ ಆದೇಶ ಹೊರಬೀಳಲಿದೆ.

Join Nadunudi News WhatsApp Group

Darshan Meet Samantha
Image Credit: Original Source

Join Nadunudi News WhatsApp Group