Darshan: ಇಲ್ಲಿಯತನಕ ನಟ ದರ್ಶನ್ ಸುಳ್ಳು ಹೇಳಿಕೊಂಡು ಬಂದಿದ್ದರು, ಇನ್ನೊಂದು ದೊಡ್ಡ ಸತ್ಯ ಬಯಲಿಗೆ.

ದರ್ಶನ ಅವರ ಇನ್ನೊಂದು ದೊಡ್ಡ ಸತ್ಯ ಬಯಲಿಗೆ

Darshan New Update: ಸದ್ಯ ರಾಜ್ಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿದೆ. ನಟ ದರ್ಶನ ಈ ಕೊಲೆ ಸಂಬಂಧ ಜೈಲು ಸೇರಿದ್ದಾರೆ. ಪ್ರಕರಣ ತನಿಖೆ ಜಿರಾಗಿಯೇ ನಡೆಯುತ್ತಿದೆ. ದರ್ಶನ್ ಕೊಲೆ ಕೇಸ್ ವಿಚಾರವಾಗಿ ಜೈಲು ಸೇರುತ್ತಿದಂತೆ ದರ್ಶನ್ ಅವರ ವೈಯಕ್ತಿಕ ಜೀವನದ ವಿಚಾರಗಳು ಒಂದೊಂದೇ ಹೊರಬರುತ್ತಿದೆ.

ಇದೀಗ ದರ್ಶನ್ ಈ ಹಿಂದೆ ಚಿತ್ರರಂಗದಲ್ಲಿ ಏನು ಕೆಲಸ ಮಾಡುತ್ತಿದ್ದರು ಎಂಬುದರ ಬಗ್ಗೆ ನಿರ್ದೇಶಕ ಪ್ರಕಾಶ್ ರಾಜ ಮೇಹು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ದರ್ಶನ್ ಅವರ ಬಗ್ಗೆ ಇನ್ನೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

Darshan New Update
Image Credit: Republicworld

ಇಲ್ಲಿಯತನಕ ನಟ ದರ್ಶನ್ ಸುಳ್ಳು ಹೇಳಿಕೊಂಡು ಬಂದಿದ್ದರು
ದರ್ಶನ್ ಅವರ ಬಗ್ಗೆ ನಿರ್ದೇಶಕ ಪ್ರಕಾಶ್ ರಾಜ ಮೇಹು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. “ನಾನು “ಜನುಮದ ಜೋಡಿ” ಚಿತ್ರದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ, ಅದೇ ಚಿತ್ರದಲ್ಲಿ ದರ್ಶನ್ ಛಾಯಾಗ್ರಾಹಕ ಬಿ.ಸಿ.ಗೌರಿಶಂಕರ್ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಎಲ್ಲೆಡೆ ನಾನು ಲೈಟ್ ಬಾಯ್, ಲೈಟ್ ಎತ್ತುವ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಳ್ಳುತ್ತಾರೆ.

ಅದು ಸುಳ್ಳು, ಕ್ಯಾಮರಾಮೆನ್ ಅಸಿಸ್ಟಂಟ್ ಕೆಲಸ ಬೇರೆ, ಲೈಟ್ ಬಾಯ್ಸ್ ಕೆಲಸ ಬೇರೆ. ನಾನು “ನೀನಾಸಂ” ಕೋರ್ಸ್ ಮುಗಿಸಿ ಚಿತ್ರರಂಗಕ್ಕೆ ಬಂದೆ, ದರ್ಶನ್ ಕೂಡ ಅದೇ ಶಾಲೆಯಿಂದಲೇ ನನಗಿಂತ ಎರಡು-ಮೂರು ವರ್ಷ ಜೂನಿಯರ್. ಹಾಗಾಗಿ ನಮ್ಮ ನಡುವೆ ಆ ಸೆಂಟಿಮೆಂಟ್ ಬಾಂಧವ್ಯ ಇತ್ತು. “ಜನುಮದ ಜೋಡಿ” ಚಿತ್ರ ಬಿಡುಗಡೆಯಾದ ನಂತರ ಸೂಪರ್-ಡ್ಯೂಪರ್ ಹಿಟ್ ಆಗಿತ್ತು. ಅಂದು ಭಾರತಕ್ಕೆ “ಜಿಮ್ಮಿ ಝಿಬ್” ಎಂಬ ಹೊಸ ಕ್ಯಾಮೆರಾ ಮೆಷಿನ್ ಬಂದಿದ್ದು ಅದನ್ನು ವಜ್ರೇಶ್ವರಿಗೆ ತರಬೇಕೆಂಬುದು ಅಪ್ಪುವಿನ ಆಸೆಯಾಗಿತ್ತು. ಆ ಕ್ಯಾಮೆರಾ ತರಲು ನಿರ್ಧರಿಸಿದ ಪಾರ್ವತಮ್ಮ ಅದರ ಬಗ್ಗೆ ಮಾಹಿತಿ ಪಡೆದರು.

Actor Darshan Latest News
Image Credit: News 18

ಇನ್ನೊಂದು ದೊಡ್ಡ ಸತ್ಯ ಬಯಲಿಗೆ
ಆ ಝಿಮ್ಮಿಯನ್ನು ಸಾಮಾನ್ಯ ಕ್ಯಾಮರಾಮನ್‌ ಗಳಿಂದ ಆಪರೇಟ್ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಅದಕ್ಕೆ ಪ್ರತ್ಯೇಕವಾಗಿ ತರಬೇತಿ ನೀಡಬೇಕು. ಅಮ್ಮ ಬಾಂಬೆಯಲ್ಲಿ ಮೂರ್ನಾಲ್ಕು ತಿಂಗಳು ಟ್ರೈನಿಂಗ್ ಕೊಡುತ್ತಾರೆಂದು ತಿಳಿದು ಕ್ಯಾಮರಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್ ಗೆ ಫೋನ್ ಮಾಡಿ ಜಿಮ್ಮಿಯ ಬಗ್ಗೆ ಹೇಳಿ, ‘ನಿನ್ನನ್ನು ಬಾಂಬೆಗೆ ಕಳುಹಿಸುತ್ತೇನೆ, ತರಬೇತಿ ಪಡೆದು ಆ ಜಿಮ್ಮಿಯನ್ನು ನೀನೇ ನೋಡಿಕೋ ಎಂದಿದ್ದರು. ದರ್ಶನ್ ಗೆ ಕೆಲಸ ಕೊಡಿಸೋದು ಅಮ್ಮನ ಉದ್ದೇಶವೇ ಹೊರತು ಬೇರೇನೂ ಅಲ್ಲ.

Join Nadunudi News WhatsApp Group

ದರ್ಶನ್ ಒಪ್ಪಲಿಲ್ಲ. ಅದು ಅವರವರ ಆಯ್ಕೆ, ಅದರಲ್ಲಿ ತಪ್ಪೇನಿಲ್ಲ. ಮುಂದೆ ದರ್ಶನ್ ಹೀರೋ ಆದರು, ಸ್ಟಾರ್ ಆದರು ಸಂತೋಷ. ಆದರೆ ಮೇಲಿನ ವಿಚಾರದ ಬಗ್ಗೆ ದರ್ಶನ್ ಹೇಳಿದ್ದೇನು ಗೊತ್ತಾ….? ‘ನನ್ನ ಮಗ ಪುನೀತ್ ಗೆ ಇವನು ಪ್ರತಿಸ್ಪರ್ದಿಯಾಗುತ್ತಾನೆ ಅದನ್ನು ತಪ್ಪಸಿ ನನ್ನನ್ನು ಜಿಮ್ಮಿ ಆಪರೇಟರ್ ಮಾಡಲು ಪ್ಲಾನ್ ಮಾಡಿದ್ದರು ನಾನು ತಪ್ಪಿಸಿಕೊಂಡೆ ಅಂತ. ಅಪ್ಪು ಸ್ಟಾರ್ ಆಗಬೇಕು, ದರ್ಶನ್ ಪ್ರತಿಸ್ಪರ್ಧಿಯಾಗಬೇಕು ಎಂದು ಪಾರ್ವತಮ್ಮ ಕನಸು ಕಂಡಿದ್ದಾರಾ..? ಏನೋ ಅವನ ಜೀವನವೋಪಾಯಕ್ಕೆ ಒಂದು ದಾರಿಯಾಗಲಿ ಎನ್ನುವ ಒಳ್ಳೆಯ ಉದ್ದೇಶದಿಂದ ಹೇಳಿದ ಮಾತನ್ನು ಈ ರೀತಿಯಾಗಿ ಗ್ರಹಿಸಲಾಗಿತ್ತು ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

Actor Darshan Case Update
Image Credit: Kannada News Now

Join Nadunudi News WhatsApp Group