Darshan Self Statement: ಕೊನೆಗೂ ಸತ್ಯ ಒಪ್ಪಿಕೊಂಡ ಡಿ ಬಾಸ್, ಸಾಭೀತಾದರೆ ಮರಣದಂಡನೆ ಅಥವಾ ಜೀವಾವಧಿ.

ಕೊನೆಗೂ ಸತ್ಯ ಒಪ್ಪಿಕೊಂಡ ಡಿ ಬಾಸ್, ಜೈಲು ಸೇರುತ್ತಾರಾ ನಟ ದರ್ಶನ್

Darshan Self Statement About Renukaswamy Murder: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ A2 ಆರೋಪಿಯಾಗಿದ್ದಾರೆ. ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ 17 ಆರೋಪಿಗಳನ್ನು ಬಂಧಿಸಲಾಗಿದೆ.

ದರ್ಶನ್ ರೇಣುಕಾಸ್ವಾಮಿ ಕೊಲೆಯಲ್ಲಿ ಆರೋಪಿ ಆಗಿರುವುದರಿಂದ ಪ್ರಕರಣದ ಬಗ್ಗೆ ತನಿಖೆ ಜೋರಾಗಿಯೇ ನಡೆಯುತ್ತಿದೆ. ಪೊಲೀಸರು ಪ್ರಕರಣಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ವಿಚಾರಣೆಯ ವೇಳೆ ನಟ ದರ್ಶನ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ದರ್ಶನ್ ಈ ಹೇಳಿಕೆ ಪ್ರಕರಣಕ್ಕೆ ಹೊಸ ರೀತಿಯ ಟ್ವಿಸ್ಟ್ ನೀಡಿದೆ ಎನ್ನಬಹುದು.

Darshan Self Statement About Renukaswamy Murder
Image Credit: New Indian Express

ಕೊನೆಗೂ ಸತ್ಯ ಒಪ್ಪಿಕೊಂಡ ಡಿ ಬಾಸ್
ಪೊಲೀಸರ ವಿಚಾರಣೆ ವೇಳೆ ನಟ ದರ್ಶನ್ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದು, ಅದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೊಲೆಯಾದ ವ್ಯಕ್ತಿಯ ಮೃತದೇಹವನ್ನು ವಿಲೇವಾರಿ ಮಾಡಿ ಮತ್ತು ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಕಾಣಿಸದಂತೆ ನೋಡಿಕೊಳ್ಳಬೇಕು. ಪೊಲೀಸರು, ವಕೀಲರು, ದೇಹ ಸಾಗಿಸುವವರ ವೆಚ್ಚ ಭರಿಸಲು ಪ್ರದುಶ್‌ ಗೆ 30 ಲಕ್ಷ ನೀಡಿರುವುದಾಗಿ ದರ್ಶನ್ ಸ್ವ ಇಚ್ಛೆ ಹೇಳಿಕೆ ನೀಡಿದ್ದಾರೆ.

ಆದರೆ ಪಟ್ಟಗೆರೆಯ ಶೆಡ್ ನಲ್ಲಿ ನಡೆದ ದಾಳಿಯಲ್ಲಿ ದರ್ಶನ್ ಭಾಗಿಯಾಗಿದ್ದನ್ನು ಒಪ್ಪಿಕೊಂಡಿಲ್ಲ. ಜೂನ್ 8 ರಂದು ರಾತ್ರಿ ದರ್ಶನ್ ತನ್ನ ಜೀಪಿನಲ್ಲಿ ಶೆಡ್ ಬಳಿ ಬರುತ್ತಿರುವುದು ಶೆಡ್ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಂಡುಬಂದಿದ್ದು, ಕೊಲೆಯ ನಂತರ ದರ್ಶನ್ ಆರೋಪಿಗಳ ಜೊತೆ ಪಾರ್ಟಿ ಮಾಡಿದ್ದಾಗಿಯೂ ಪ್ರತ್ಯಕ್ಷದರ್ಶಿಗಳಿಂದ ಗೊತ್ತಾಗಿದೆ. ಆದರೆ ಆರೋಪಿಗಳು ಪಟ್ಟಗೆರೆಯ ಶೆಡ್‌ ನಲ್ಲಿ ಯಾವುದೇ ಸಿಸಿಟಿವಿ ಸಾಕ್ಷ್ಯವನ್ನು ಉಳಿಸಿಲ್ಲ.

Join Nadunudi News WhatsApp Group

Darshan Self Statement
Image Credit: Filmibeat

ರೇಣುಕಾಸ್ವಾಮಿ ಮೊಬೈಲ್ ಗಾಗಿ ಹುಡುಕಾಟ
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ರೇಣುಕಾ ಸ್ವಾಮಿ ಹಾಗೂ ಆರೋಪಿ ರಾಘವೇಂದ್ರ ಅವರ ಮೊಬೈಲ್‌ ಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್ ನಲ್ಲಿ ಪ್ರಮುಖ ಸಾಕ್ಷಿಗಳಿದ್ದು, ಇದೀಗ ಶೋಧಕ್ಕಾಗಿ ಅಗ್ನಿಶಾಮಕ ದಳವನ್ನು ಸಂಪರ್ಕಿಸಲಾಗಿದೆ. ರೇಣುಕಾಸ್ವಾಮಿ ಮತ್ತು ಎ5 ಆರೋಪಿ ರಾಘವೇಂದ್ರ ಇಬ್ಬರ ಮೊಬೈಲ್‌ ಗಳನ್ನು ತೆಗೆದುಕೊಂಡು ಪ್ರದೋಶ್ ಸುಮನಹಳ್ಳಿಯ ರಾಜಕಾಲುವೆ ಬಳಿ ಎಸೆದಿದ್ದಾನೆ.

ಪಟ್ಟಣಗೆರೆ ಶೆಡ್‌ ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಆರೋಪಿಗಳು ಈ ಮೊಬೈಲ್‌ ಗಳಲ್ಲಿ ವಿಡಿಯೋ ಮಾಡಿಕೊಂಡಿದ್ದರು. ಹೀಗಾಗಿ ರೇಣುಕಾಸ್ವಾಮಿ ಹಾಗೂ ಆರೋಪಿ ರಾಘವೇಂದ್ರ ಅವರ ಮೊಬೈಲ್ ಗಳೇ ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿ. ಇಬ್ಬರ ಮೊಬೈಲ್ ಫೋನ್ ಗಳನ್ನು ರಾಜ್ ಕಾಲುವೆಗೆ ಎಸೆದಿರುವುದಾಗಿ ಪ್ರದುಶ್ ಹೇಳಿಕೆ ನೀಡಿದ್ದಾನೆ. ಈ ಹಿನ್ನಲೆ ರಾಜಕಾಲುವೆಯಲ್ಲಿ ಮೊಬೈಲ್ ಗಾಗಿ ಹಾಡುಕಾಟ ಆರಂಭವಾಗಿದೆ.

Actor Darshan Case Update
Image Credit: Original Source

Join Nadunudi News WhatsApp Group