Darshan Sim Card Secret: ಬಯಲಾಯ್ತು ದರ್ಶನ್ ಬಳಸುತ್ತಿದ್ದ ಸಿಮ್ ಕಾರ್ಡ್ ಸೀಕ್ರೆಟ್, ದರ್ಶನ್ ಯಾರ ಹೆಸರಿನ ಸಿಮ್ ಕಾರ್ಡ್ ಬಳಸುತ್ತಿದ್ರು ಗೊತ್ತಾ…?

ಬಯಲಾಯ್ತು ದರ್ಶನ್ ಬಳಸುತ್ತಿದ್ದ ಸಿಮ್ ಕಾರ್ಡ್ ಸೀಕ್ರೆಟ್

Darshan Sim Card Secret New Update: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಜುಲೈ 4 ರವರೆಗೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಸದ್ಯ ಜುಲೈ 4 ರಂದು ನ್ಯಾಯಾಲಯ ತನಿಖೆ ನಡೆಸಿ ಮತ್ತೆ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲು ಆದೇಶಿಸಿದೆ.

ಜುಲೈ 18 ರವರೆಗೆ ದರ್ಶನ್ ಸೇರಿದಂತೆ 17 ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಆದೇಶಿಸಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಆರೋಪಿಗಳು ಬಳಸುತ್ತಿದ್ದಂತಹ ಸಿಮ್ ಕಾರ್ಡ್ ನ ಬಗ್ಗ ಮಾಹಿತಿ ಕಲೆ ಹಾಕುವಾಗ ಮಹತ್ವದ ಮಾಹಿತಿಯೊಂದು ಲಭಿಸಿದೆ.

ಆರೋಪಿಗಳು ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ಗಳನು ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಅಷ್ಟಕ್ಕೂ ಆರೋಪಿಗಳು ಯಾರ ಹೆಸರಿನಲ್ಲಿ ಸಿಮ್ ಕಾರ್ಡ್ ಗಳನ್ನೂ ಬಳಸುತ್ತಿದ್ದರು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Darshan Sim Card Secret
Image Credit: Original Source

ಬಯಲಾಯ್ತು ದರ್ಶನ್ ಬಳಸುತ್ತಿದ್ದ ಸಿಮ್ ಕಾರ್ಡ್ ಸೀಕ್ರೆಟ್
ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಂಡಿರುವ ಪೊಲೀಸರು ಫೋನ್ ಮೂಲಕ ಹಲವು ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ನಟ ದರ್ಶನ್ ಬೇರೆಯವರ ಹೆಸರಿನಲ್ಲಿ ಸಿಮ್ ಬಳಸುತ್ತಿದ್ದರು ಎಂಬ ಮಾಹಿತಿಯೂ ಹೊರಬಿದ್ದಿದೆ. ತನಿಖೆ ವೇಳೆ ದರ್ಶನ್ ಬಳಸುತ್ತಿದ್ದ ಸಿಮ್ ರಹಸ್ಯ ಬಯಲಾಗಿದೆ. ಬೇರೆಯವರ ಹೆಸರಿನಲ್ಲಿ ಸಿಮ್ ಪಡೆದಿರುವ ವಿಚಾರ ಬೆಳಕಿಗೆ ಬಂದಿದೆ.

ಸಿಮ್ ಖರೀದಿಸಿದವರಿಗೆ ನೋಟಿಸ್ ನೀಡಲು ಪೊಲೀಸರು ಸಜ್ಜಾಗಿದ್ದಾರೆ ಎನ್ನಲಾಗಿದೆ. ಕೆಲವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿರುವಂತಿದೆ. ಆರೋಪಿಗಳ ಮೊಬೈಲ್ ನಂಬರ್ ಕ್ಯಾಪ್ ನ ಪ್ರತಿಗಳನ್ನು ಸಂಗ್ರಹಿಸಲಾಗಿದ್ದು, ಮಾಹಿತಿ ಸಂಗ್ರಹಣೆ ಮತ್ತು ಪರಿಶೀಲನೆ ವೇಳೆ ಸಿಮ್ ಕಾರ್ಡ್ ನ ರಹಸ್ಯ ಬಯಲಾಗಿದೆ.

Join Nadunudi News WhatsApp Group

darshan and renukaswami murder case
Image Credit: News 18

ದರ್ಶನ್ ಯಾರ ಹೆಸರಿನ ಸಿಮ್ ಕಾರ್ಡ್ ಬಳಸುತ್ತಿದ್ರು ಗೊತ್ತಾ…?
ನಟ ದರ್ಶನ್ ಮಾತ್ರವಲ್ಲದೆ ಪವಿತ್ರ ಗೌಡ, ಪ್ರದುಶ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ಸಹ ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ಬಳಸುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ನಟ ದರ್ಶನ್ ಅವರು ಸಿಪಿ ಹೇಮಂತ್, ಬಿನ್. ಎನ್ ಚಂದನ್ ಹೆಸರಿನಲ್ಲಿದ್ದ ಸಿಮ್ ಕಾರ್ಡ್ ಬಳಸುತ್ತಿದ್ದರು ಎನ್ನಲಾಗಿದೆ.

ಮನೋಜ್ ಹೆಸರಿನಲ್ಲಿರುವ ಸಿಮ್ ಕಾರ್ಡ್ ಅನ್ನು ನಟಿ ಪವಿತ್ರಾ ಗೌಡ ಬಳಸುತ್ತಿದ್ದಾರೆ ಎನ್ನಲಾಗಿದೆ. ಆರೋಪಿ ನಂದೀಶ್ ಕೂಡ ಹೇಮಂತ್ ಹೆಸರಿನಲ್ಲಿ ಸಿಮ್ ಬಳಸುತ್ತಿದ್ದರು. ಆರೋಪಿ ಪ್ರದ್ಯುಷ್ ಖಾಸಗಿ ಕಂಪನಿಯೊಂದರ ಹಿರಿಯ ಮ್ಯಾನೇಜರ್ ಹೆಸರಿನಲ್ಲಿ ಸಿಮ್ ಬಳಸುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Darshan Sim Card Secret New Update
Image Credit: News 18

Join Nadunudi News WhatsApp Group