Darshan Weight Loss: ಜೈಲಿನಲ್ಲಿರುವ ದರ್ಶನ್ ಎಷ್ಟು ತೂಕ ಕಳೆದುಕೊಂಡರೆ ಗೊತ್ತಾ…? ಬೇಸರದಲ್ಲಿ ಫ್ಯಾನ್ಸ್.

ಜೈಲಿನಲ್ಲಿರುವ ನಟ ದರ್ಶನ್ ಎಷ್ಟು ತೂಕ ಕಳೆದುಕೊಂಡಿದ್ದಾರೆ ನೋಡಿ

Darshan Weight Loss New Update: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ 17 ಜನ ಆರೋಪಿಗಳಿಗೆ ಕೋರ್ಟ್ ಜುಲೈ 18 ರವರೆಗೆ ನ್ಯಾಯಾಂಗ ಬಂಧನ ಆದೇಶವನ್ನು ನೀಡಿದೆ. ದರ್ಶನ್ ಜೈಲು ಸೇರಿ ಒಂದು ತಿಂಗಳು ಕಳೆಯುತ್ತಾ ಬಂದರು ದರ್ಶನ್ ಗೆ ಜೈಲೂಟ ಸೆಟ್ ಆಗುತ್ತಿಲ್ಲ.

ಜೈಲು ಆಹಾರ ತಿಂದು ದರ್ಶನ್ ಸ್ಥಿತಿ ತೀರಾ ಹದೆಗೆಟ್ಟಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಸೆಲೆಬ್ರೆಟಿ ಜೀವನವನ್ನು ನಡೆಸುತ್ತಿದ್ದ ದರ್ಶನ್ ಇದೀಗ ದಿಢೀರ್ ಜೈಲು ಸೇರಿರುದರಿಂದ ಅಲ್ಲಿ ಇರಲು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಜೈಲೂಟ ತಿನ್ನುತ್ತಿರುವ ದರ್ಶನ್ ಗೆ ನಾನಾ ಕಾಯಿಲೆಗಳು ಎದುರಾಗುತ್ತಿದೆ ಎನ್ನಲಾಗುತ್ತಿದೆ.

Darshan Weight Loss
Image Credit: Zee News

ಜೈಲಿನಲ್ಲಿರುವ ದರ್ಶನ್ ಎಷ್ಟು ತೂಕ ಕಳೆದುಕೊಂಡರೆ ಗೊತ್ತಾ…?
ಇನ್ನು ಜೈಲಿನ ಆಹಾರ ದರ್ಶನ್ ಗೆ ಅಭ್ಯಾಸವಿಲ್ಲದ ಕಾರಣ ಫುಡ್ ಪೋಯ್ಸನ್ ಆಗುತ್ತಿದೆ. ಈ ಬಗ್ಗೆ ಜೈಲು ವೈದ್ಯರು ಅಭಿಪ್ರಾಯ ತಿಳಿಸಿದ್ದಾರೆ. ಅತಿಸಾರದಿಂದ ದರ್ಶನ್ ತೂಕ ತುಂಬಾ ಕಡಿಮೆಯಾಗಿದೆ. ದರ್ಶನ್ ಹಲವು ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಜೈಲು ಪಾಲಾದ ಕೆಲವೇ ದಿನಗಳಲ್ಲಿ ದರ್ಶನ್ ಬರೋಬ್ಬರಿ 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ.

ದರ್ಶನ್ ಪರ ವಕೀಲರು ಜಾಮೀನಿಗೆ ಅಗತ್ಯ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ದರ್ಶನ್ ಇನ್ನು ಕೆಲ ದಿನ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಮನೆ ಊಟಕ್ಕೆ ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಜೈಲು ಅಧಿಕಾರಿಗಳು ಈ ಮನವಿಯನ್ನು ತಿರಸ್ಕರಿಸಿದ್ದಾರಂತೆ.

Darshan Weight Loss New Update
Image Credit: Zee News

ಮನೆಯೂಟಕ್ಕಾಗಿ ಹೈಕೋರ್ಟ್ ಮೊರೆಹೋದ ಡಿ ಬಾಸ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಹತ್ತೇ ದಿನದಲ್ಲಿ ತೂಕ ಇಳಿಸಿಕೊಂಡಿದ್ದಾರೆ. ಅವರ ಹಠಾತ್ ತೂಕ ನಷ್ಟವು ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಜೈಲಿನಲ್ಲಿ ಕೆಲವು ವಿಶೇಷ ಸೌಲಭ್ಯ ಕಲ್ಪಿಸುವಂತೆ ದರ್ಶನ್ ಪರ ವಕೀಲರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

Join Nadunudi News WhatsApp Group

ದರ್ಶನ್ ಗೆ ಜೈಲಿನ ಆಹಾರ ಅಜೀರ್ಣವಾಗುತ್ತಿದ್ದು, ಭೇದಿ ಸಮಸ್ಯೆಯಾಗಿದೆ. ಹಾಗಾಗಿ ತೂಕ ಕಳೆದುಕೊಳ್ಳುತ್ತಿದ್ದೇನೆ. ಹೀಗಾಗಿ ಮನೆ ಊಟ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅಲ್ಲದೇ ಜೈಲಿನಲ್ಲಿ ತನಗೆ ನಿದ್ದೆ ಬರುತ್ತಿಲ್ಲ ಹಾಗಾಗಿ ಹಾಸಿಗೆಯ ವ್ಯವಸ್ಥೆ ಮಾಡಿ, ಸಮಯ ಕಳೆಯಲು ಓದಲು ಪುಸ್ತಕ ಕೊಡಿ ಎಂದು ದರ್ಶನ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.

Darshan Latest News Update
Image Credit: Zee News

Join Nadunudi News WhatsApp Group