Dasara Holiday: ದಸರಾ ರಜೆಯ ಖುಷಿಯಲ್ಲಿ ಇದ್ದ ಶಾಲಾ ಮಕ್ಕಳಿಗೆ ಬೇಸರದ ಸುದ್ದಿ, ಹೊಸ ಮಾರ್ಗಸೂಚಿ ಪ್ರಕಟ.

ದಸರಾ ರಜೆಯ ವಿಷಯವಾಗಿ ರಾಜ್ಯ ಸರ್ಕಾರ ಇನ್ನೊಂದು ಮಾರ್ಗಸೂಚಿ ಪ್ರಕಟ ಮಾಡಿದೆ.

School Dasara Holiday Cancellation: ಪ್ರಸ್ತುತ ಶಾಲಾ ಮಕ್ಕಳಿಗೆ 2023 -24 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭಗೊಂಡಿದೆ. ಶಾಲೆಗಳು ಪ್ರಾರಂಭಗೊಳ್ಳುವ ಮುನ್ನ ಶಿಕ್ಷಣ ಇಲಾಖೆ ಸಾಕಷ್ಟು ನಿಯಮವನ್ನು ಜಾರಿಗೊಳಿಸಿದೆ. ಹಿಂದಿನ ಶಿಕ್ಷಣ ನೀತಿಗಿಂತ ಈ ಬಾರಿ ಶಿಕ್ಷಣ ನೀತಿಯಲ್ಲಿ ಬಾರಿ ಬದಲಾವಣೆಯನ್ನು ತಂದಿದೆ. ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಬೇಕೆನ್ನುವುದು ಇಲಾಖೆಯ ಗುರಿಯಾಗಿದೆ.

ಶಿಕ್ಷಣ ವ್ಯಸ್ಥೆಯಲ್ಲಿ ಈಗಾಗಲೇ ಹಲವು ನಿಯಮವನ್ನು ಬದಲಾಯಿಸಿದ್ದು ಈ ಬಾರಿ ಶಿಕ್ಷಣ ನೀತಿ ಮಕ್ಕಳಿಗೆ ಹೊಸತಾಗಿದೆ. ಮಕ್ಕಳು ಕಲಿಯುವ ವಿಷಯಗಳಲ್ಲಿ ಕೂಡ ಸಾಕಷ್ಟು ಬದಲಾವಣೆಯನ್ನು ತರಲಾಗಿದೆ. ಹಿಂದೆ ಕಲಿಯಬೇಕಿದ್ದ ವಿಷಯಗಳ ಜೊತೆಗೆ ಇದೀಗ ಮತ್ತೆ ಕೆಲ ಹೊಸ ಹೊಸ ವಿಷಯಗಳನ್ನು ಇಲಾಖೆ ಸೇರ್ಪಡೆ ಮಾಡಿದೆ. ಇನ್ನು ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ಶಿಸ್ತಿನ ವಾತಾವರಣವನ್ನು ಸೃಷ್ಟಿಸಲು ಅನೇಕ ನಿಯಮಗಳನ್ನು ಕೂಡ ಜಾರಿಗೊಳಿಸಲಾಗಿದೆ.

School Dasara Holiday Cancellation
Image Credit: Scroll

ಶಾಲಾ ಮಕ್ಕಳಿಗೆ ಶಿಕ್ಷಣಾ ಇಲಾಖೆಯ ಹೊಸ ಮಾರ್ಗಸೂಚಿ ಬಿಡುಗಡೆ
ಇನ್ನು ಶಾಲಾ ಮಕ್ಕಳು ಹೆಚ್ಚಾಗಿ ರಜೆ ಯಾವಾಗ ಸಿಗುತ್ತದೆ ಎನ್ನುವ ಬಗ್ಗೆ ಯೋಚಿಸುತ್ತಾರೆ. ವಾರದಲ್ಲಿ ಶನಿವಾರ ಅರ್ಧ ದಿನ ಹಾಗೂ ಭಾನುವಾರ ಶಾಲಾ ಮಕ್ಕಳಿಗೆ ರಜೆ ಇರುತ್ತದೆ. ಇದರ ಹೊರತಾಗಿ ಕೆಲ ಹಬ್ಬಗಳಿಗೆ ರಜೆ ನೀಡಲಾಗುತ್ತದೆ. ಇನ್ನು ಶಾಲಾ ಮಕ್ಕಳಿಗೆ ವಿಶೇಷವಾಗಿ ಮಧ್ಯಂತರ ರಜೆಯನ್ನು ನೀಡಲಾಗುತ್ತದೆ.

ಈ ಮಧ್ಯಂತರ ರಜೆ ಮಕ್ಕಳಿಗೆ ಅಕ್ಟೊಬರ್ ನಲ್ಲಿ ನೀಡಲಾಗುತ್ತದೆ. ಇನ್ನು ಎರಡು ವರ್ಷಗಳ ಹಿಂದೆ ಕರೋನ ಬಂದ ಹಿನ್ನಲೆ ಮಧ್ಯಂತರ ರಜೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿತ್ತು. ಅಕ್ಟೊಬರ್ ನ ಮಧ್ಯಂತರ ರಜೆಯ ಸಮಯದಲ್ಲಿ ಮಕ್ಕಳು ಶಾಲೆಗಳಿಗೆ ಬರಬೇಕಿತ್ತು. ಇದೀಗ ಶಿಕ್ಷಣ ಇಲಾಖೆ 2023 -24 ನೇ ಸಾಲಿನ ಶೈಕ್ಷಣಿಕ ವರ್ಷದ ಮಧ್ಯಂತರ ರಜೆಯಲ್ಲಿ ಬಾರಿ ಬದಲಾವಣೆ ತರಲು ನಿರ್ಧರಿಸಿದೆ.

School Holiday updates
Image Credit: Indiatoday

ಶಾಲಾ ಮಕ್ಕಳಿಗೆ ಈ ಬಾರಿ ಕೂಡ ದಸರಾ ರಜೆ ಇಲ್ಲಾ
ಈ ಹಿಂದೆ ಕರೋನ ಹಿನ್ನಲೆ ಲಾಕ್ ಡೌನ್ ಸಮಯದಲ್ಲಿ ನೀಡಲಾದ ರಜೆಯನ್ನು ಸರಿದೂಗಿಸಲು ಅಕ್ಟೊಬರ್ ನ ಮಧ್ಯಂತರ ರಜೆಯಲ್ಲಿ ಶಾಲಾ ಮಕ್ಕಳಿಗೆ ತರಗತಿಯನ್ನು ಮಾಡಲಾಗಿತ್ತು. ಪ್ರಸ್ತುತ ಎಲ್ಲವೂ ಸಹಜ ಸ್ಥಿತಿಯಲ್ಲಿದ್ದರು ಕೂಡ ಇಲಾಖೆ ಮಧ್ಯಂತರ ರಜೆಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ.

Join Nadunudi News WhatsApp Group

ಸಾಮಾನ್ಯ ಶಾಲೆಗಳಿಗೆ ಅಕ್ಟೋಬರ್ 8 ರಿಂದ ಅಕ್ಟೋಬರ್ 24 ರವರೆಗೆ ದಸರಾ ರಜೆ ನೀಡಲಾಗಿದ್ದು, ವಿಶೇಷ ಶಾಲೆಗಳಿಗೆ ದಸರಾ ರಜೆಯನ್ನು ರದ್ದುಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಬಾರಿ ಕೂಡ ಮಕ್ಕಳು ದಸರಾ ರಜೆಯಿಂದ ವಂಚಿತರಾಗಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group