ದೇಶದಲ್ಲಿ ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ವಸ್ತುವಿನ ಬೆಲೆ ಏರುತ್ತಲೇ ಇದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಎಲ್ಲಾ ವಸ್ತುವಿನ ಬೆಲೆ ಏರಿಕೆ ಆಗಿದ್ದು ಇದು ಜನರ ಜೇಬಿಗೆ ಕತ್ತರಿ ಬೀಳುವಂತೆ ಆಗಿದೆ ಎಂದು ಹೇಳಬಹುದು. ಇನ್ನು ಪ್ಟೆರೋಲ್ ಮತ್ತು ಡೀಸೆಲ್ ಬೆಲೆಗಳ ರೀತಿಯಲ್ಲಿ ದೇಶದಲ್ಲಿ ಪ್ರತಿದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆ ಆಗುತ್ತಿದ್ದು ಇದು ಜನರ ಶಾಕ್ ಗೆ ಕಾರಣವಾಗುತ್ತಿದೆ. ಹೌದು ತಿಂಗಳ ಆರಂಭದಲ್ಲಿ ಕೊಂಚ ಇಳಿಕೆಯನ್ನ ಕಂಡಿದ್ದ ಚಿನ್ನದ ಬೆಲೆ ಕಳೆದ ಒಂದು ವಾರದಿಂದ ಬಾರಿ ಪ್ರಮಾಣದಲ್ಲಿ ಏರಿಕೆಯನ್ನ ಕಂಡಿದ್ದು ಇದು ಬಡಜನರ ಬೇಸರಕ್ಕೆ ಕಾರಣವಾಗುತ್ತಿದೆ. ಮಗಳ ಮದುವೆಯನ್ನ ಮಾಡಬೇಕು ಅಂದುಕೊಂಡಿದ್ದ ಬಡವರು ಪ್ರತಿದಿನ ಏರುತ್ತಿರುವ ಚಿನ್ನದ ಬೆಲೆಯನ್ನ ಬೇಸರವನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದು.
ಇನ್ನು ಈಗ ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಚಿನ್ನದ ಬೆಲೆ ಇಂದು ಕೂಡ ದಾಖಲೆಯ ಪ್ರಮಾಣದಲ್ಲಿ ಏರಿಕೆಯನ್ನ ಕಂಡಿದ್ದು ದೇಶದಲ್ಲಿ ಮತ್ತೆ ಚಿನ್ನದ ಬೆಲೆ ದಾಖಲೆಯನ್ನ ಮಾಡುವ ಮುನ್ಸೂಚನೆ ಇದಾಗಿದೆ ಎಂದು ಹೇಳಬಹುದು. ಹಾಗಾದರೆ ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಿನ್ನದ ಬೆಲೆಯಲ್ಲಿನ ಈ ಏರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ಇಂದು ದೇಶದಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4485 ರೂಪಾಯಿ ಆಗಿದೆ.
ಅಕ್ಟೋಬರ್ ತಿಂಗಳ ಆರಂಭದಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4320 ರೂಪಾಯಿ ಆಗಿತ್ತು, ಆದರೆ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯ ಹಾದಿಯನ್ನ ಹಿಡಿದಿತ್ತು ಇಂದಿಗೆ ಚಿನ್ನದ ಬೆಲೆಯಲ್ಲಿ ಸುಮಾರು 165 ರೂಪಾಯಿ ಏರಿಕೆ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 165 ರೂಪಾಯಿ ಏರಿಕೆ ಆಗಿದ್ದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1650 ರೂಪಾಯಿ ಏರಿಕೆ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ದೇಶದ ಷೇರು ಮಾರುಕಟ್ಟೆಯಲ್ಲಿ ದಿಡೀರ್ ಬದಲಾವಣೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದ ಏರಿಕೆ ಆದಕಾರಣ ದೇಶದಲ್ಲಿ ಕೂಡ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಹೇಳಬಹುದು. ಇಂದು ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 44850 ರೂಪಾಯಿ ಆಗಿದ್ದು ಒಂದು ಪವನ್ ಚಿನ್ನದ ಬೆಲೆ 35880 ರೂಪಾಯಿ ಆಗಿದೆ. ಚಿನ್ನದ ಬೆಲೆ ಬಡಜನರ ನಿದ್ದೆಯನ್ನ ಕೆಡಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದ ಏರುಪೇರು ಆಗುವ ಬಹುತೇಕ ಲಕ್ಷಣ ಇದೆ ಎಂದು ತಜ್ಞರು ತಮ್ಮ ಅಭಿಪ್ರಾಯವನ್ನ ಹೇಳಿದ್ದಾರೆ. ಸ್ನೇಹಿತರೆ ಚಿನ್ನದ ಬೆಲೆಯಲ್ಲಿನ ಭಾರಿ ಪ್ರಮಾಣದ ಏರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.