Property Rules : ಮಾವನ ಆಸ್ತಿಯಲ್ಲಿ ಸೊಸೆಗೆ ಎಷ್ಟು ಹಕ್ಕಿದೆ, ಸೊಸೆಯ ಆಸ್ತಿಯ ಹಕ್ಕಿನ ಬಗ್ಗೆ ಕಾನೂನು ಹೇಳುವುದೇನು…?

ಮಾವನ ಆಸ್ತಿಯಲ್ಲಿ ಸೊಸೆಗೆ ಎಷ್ಟು ಹಕ್ಕಿದೆ.

Daughter- In- Law’s Right To Property In Father-In-Law’s Property: ಭಾರತೀಯ ಕಾನೂನಿನ (Indian Law) ನ್ಯಾಯಾಲಯದ ಪ್ರಕಾರ, ಹೆಣ್ಣು ಮಕ್ಕಳು ಆಸ್ತಿಯ (Property) ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ. ತಂದೆಯ ಸ್ವಯಾರ್ಜಿತ ಆಸ್ತಿ, ಪಿತ್ರಾಜಿತ ಆಸ್ತಿ ಹಾಗೂ ತಾಯಿಯ ಸ್ವಯಾರ್ಜಿತ ಆಸ್ತಿ, ಪಿತ್ರಾಜಿತ ಆಸ್ತಿ ಎರಡಲ್ಲೂ ಕೂಡ ಹೆಣ್ಣು ಮಕ್ಕಳು ಗಂಡು ಮಕ್ಕಳಷ್ಟೇ ಸಮಾನ ಹಕ್ಕನ್ನು ಹೊಂದಿರುತ್ತಾರೆ.

ಇನ್ನು ಹೆಣ್ಣು ಮಕ್ಕಳು ಮದುವೆಯ ನಂತರ ತಮ್ಮ ಆಸ್ತಿ ಹಕ್ಕನ್ನು ಪಡೆಯುತ್ತಾರೋ..? ಇಲ್ಲವೋ..? ಎನ್ನುವ ಬಗ್ಗೆ ಕೂಡ ಕಾನೂನಿನಲ್ಲಿ ಸಾಕಷ್ಟು ತಿದ್ದುಪಡಿಗಳಿವೆ. ಮದುವೆಯ ಬಳಿಕ ಹೆಣ್ಣಿನ ತನ್ನ ಗಂಡನ ಮನೆಯಲ್ಲಿ ಅಂದರೆ ತನ್ನ ಮಾವನ ಮನೆಯ ಆಸ್ತಿಯ ಮೇಲೆ ಎಷ್ಟು ಹಕ್ಕಿರುತ್ತದೆ ಎನ್ನುವ ಬಗ್ಗೆ ಕೆಲವರಿಗೆ ಗೊಂದಲ ಇರಬಹುದು. ಇದೀಗ ಮಾವನ ಮನೆಯಲ್ಲಿ ಸೊಸೆಯ ಆಸ್ತಿಯ ಹಕ್ಕಿನ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತದೆ ಎನ್ನುವ ಬಗ್ಗೆ ತಿಳಿಯೋಣ.

Daughter In Law's Right
Image Credit: Economictimes

ಮಾವನ ಆಸ್ತಿಯಲ್ಲಿ ಸೊಸೆಗೆ ಎಷ್ಟು ಹಕ್ಕಿದೆ..?
ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಹೆಣ್ಣುಮಕ್ಕಳಿಗೆ ಆಸ್ತಿಯ ಪಾಲುದಾರಿಕೆ ನೀಡಲು ಸಾಕಷ್ಟು ತಿದ್ದುಪಡಿಗಳನ್ನು ತರಲಾಗಿದೆ. 2005 ರಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕನ್ನು ತರಲು ಕಾಯ್ದೆಯನ್ನು ತರಲಾಯಿತು. ಇನ್ನು ಸೊಸೆಯು ತನ್ನ ಗಂಡನ ಆಸ್ತಿಯಲ್ಲಿ ಒಂದು ಪಾಲು ಪಡೆಯುವ ಮೂಲಕ ಹಿಂದೂ ಅವಿಭಜಿತ ಕುಟುಂಬದ ಹಕ್ಕುಗಳನ್ನು ಪಡೆದುಕೊಳ್ಳುತ್ತಾಳೆ. ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ನೀಡಿದ್ದರು, ಸೊಸೆಯರ ಹಕ್ಕು ಮಾತ್ರ ಸೀಮಿತವಾಗಿದೆ.

ಗಂಡನ ಸಾವಿನ ನಂತರ ಸೊಸೆಗೆ ಮಾವನ ಆಸ್ತಿಯಲ್ಲಿ ಹಕ್ಕು
ಇನ್ನು ಹೆಣ್ಣುಮಗು ಮದುವೆಯಾದ ಬಳಿಕ ತನ್ನ ಗಂಡನ ಮನೆಯನ್ನು ಸೇರುತ್ತಾಳೆ. ಗಂಡನ ಮನೆಯಲ್ಲಿ ಹೆಣ್ಣಿಗೆ ಮದುವೆಯಾದ ಬಳಿಕ ಸ್ವಲ್ಪ ಮಟ್ಟಿನ ಹಕ್ಕು ಇರುತ್ತದೆ. ಸೊಸೆಗೆ ಮಾವನ ಮನೆಯ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ. ಸರಳವಾಗಿ ಹೇಳುವುದಾದರೆ, ಅತ್ತೆ ಮತ್ತು ಮಾವನ ಆಸ್ತಿಯ ಮೇಲೆ ಸೊಸೆಗೆ ಹಕ್ಕಿರುವುದಿಲ್ಲ, ಅವಳ ಗಂಡನ ಆಸ್ತಿಯಲ್ಲಿ ಮಾತ್ರ ಹಕ್ಕಿರುತ್ತದೆ.

Daughter- In- Law's Right To Property In Father-In-Law's Property
Image Credit: Sochparprahaar

ಅತ್ತೆ ಮತ್ತು ಮಾವ ಸತ್ತ ನಂತರ ಆಸ್ತಿ ಗಂಡನಿಗೆ ಸೇರಿತ್ತದೆ. ಅತ್ತೆ ಮಾವನ ಆಸ್ತಿಯ ಮೇಲೆ ಸೊಸೆ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಮಾವನ ಮನೆಯಲ್ಲಿ ತನ್ನ ಗಂಡನ ಮರಣದ ನಂತರ ಸೊಸೆಗೆ ಆಸ್ತಿಯಲ್ಲಿ ಪಾಲು ಸಿಗುತ್ತದೆ. ಇದಕ್ಕಾಗಿ ಅತ್ತೆ, ಮಾವ ಆಸ್ತಿಗೆ ಸಂಬಂಧಿಸಿದ ವೀಲ್ ಮಾಡಿ ಬೇರೆಯವರಿಗೆ ನೀಡದೆ ಇರುವುದು ಅಗತ್ಯ. ಮದುವೆಗೆ ಸಂಬಂಧಿಸಿದ ಧಾರ್ಮಿಕ ಮತ್ತು ಸಮಾರಂಭಗಳಲ್ಲಿ ಮಹಿಳೆ ಪಡೆಯುವ ಯಾವುದೇ ಉಡುಗೊರೆ ಮಹಿಳೆಯರಿಗೆ ಹಕ್ಕು ಮಾತ್ರವಾಗಿದೆ.

Join Nadunudi News WhatsApp Group

Join Nadunudi News WhatsApp Group