Property Claim: ಮಗಳು ತಂದೆಯ ಆಸ್ತಿಯನ್ನು ಯಾವಾಗ ಕ್ಲೈಮ್ ಮಾಡಬಹುದು, ಕಾನೂನಿನಲ್ಲಿದೆ ನಿಯಮ.
ತಂದೆಯ ಈ ಆಸ್ತಿಯಲ್ಲಿ ಮಗಳಿಗೆ ಯಾವುದೇ ಹಕ್ಕು ಇಲ್ಲ.
Daughter Rights In Father Property: ದೇಶದಲ್ಲಿ Property ವಿಚಾರವಾಗಿ ಸಾಕಷ್ಟು ಪ್ರಕರಣಗಳು ನಡೆಯುತ್ತವೆ. ಆಸ್ತಿಯ ವಿಚಾರವಾಗಿ ರಕ್ತ ಸಂಬಂಧಗಳ ನಡುವೆಯೇ ಸಾಕಷ್ಟು ಕಲಹಗಳು ನಡೆಯುತ್ತವೆ. ಹಿಂದಿನ ಕಾಲದಲ್ಲಿ ಮಗನನ್ನು ಮಾತ್ರ ಮನೆಯ ವಾರಸುದಾರ ಎಂದು ಪರಿಗಣಿಸಿ ಎಲ್ಲಾ ಅಸ್ಥಿಯನ್ನು ಆತನಿಗೆ ಮಾತ್ರ ನೀಡಲಾಗುತಿತ್ತು,
ತದ ನಂತರ 2005 ರಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕನ್ನು ತರಲು ಕಾಯ್ದೆಯನ್ನು ತರಲಾಯಿತು. ಇನ್ನು ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ನೀಡುವಂತೆ ಈಗಾಗಲೇ ಕಾನೂನುಗಳು ಬಂದಿವೆ. ಇದೀಗ ನಾವು ತಂದೆಯ ಆಸ್ತಿಯಲ್ಲಿ ಮಗಳ ಪಾಲಿನ ಬಗ್ಗೆ ಮಾಹಿತಿ ತಿಳಿಯೋಣ.
ಹಿಂದೂ ಉತ್ತರಾಧಿಕಾರ ಕಾನೂನು ಪ್ರಕಾರ
ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಹೆಣ್ಣುಮಕ್ಕಳಿಗೆ ಆಸ್ತಿಯ ಪಾಲುದಾರಿಕೆ ನೀಡಲು ಸಾಕಷ್ಟು ತಿದ್ದುಪಡಿಗಳನ್ನು ತರಲಾಗಿದೆ. 2005 ರಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕನ್ನು ತರಲು ಕಾಯ್ದೆಯನ್ನು ತರಲಾಯಿತು. ಇದರಲ್ಲಿ ತಂದೆಯ ಆಸ್ತಿಯಲ್ಲಿ ಮಗಳ ಹಕ್ಕುಗಳ ಬಗ್ಗೆ ಇರುವ ಸಂದೇಹವನ್ನು ನಿವಾರಣೆ ಮಾಡಲಾಗಿದೆ.
ಇಂತಹ ಸಮಯದಲ್ಲಿ ಮಗಳು ತಂದೆಯ ಆಸ್ತಿಯಲ್ಲಿ ಪಾಲು ಕೇಳುವಂತಿಲ್ಲ
ತಂದೆ ತನ್ನ ಆದಾಯದಿಂದ ಮಡಿದ ಆಸ್ತಿಯಲ್ಲಿ ಮಗಳು ಪಾಲು ಕೇಳುವಂತಿಲ್ಲ. ಸ್ವಂತ ಹಣದಿಂದ ಜಮೀನು, ಮನೆಯನ್ನು ನಿರ್ಮಿಸಿದರೆ ಅಥವಾ ಖರೀದಿಸಿದರೆ ತಂದೆ ಅದನ್ನು ತನಗೆ ಬೇಕಾದವರಿಗೆ ನೀಡಬಹುದು. ತಾನು ಸಂಪಾದಿಸಿದ ಆಸ್ತಿಯನ್ನು ಯಾರಿಗಾದರೂ ತನ್ನ ಇಚ್ಛೆಯಂತೆ ನೀಡುವುದು ತಂದೆಯ ಕಾನೂನುಬದ್ಧ ಹಕ್ಕಾಗಿದೆ. ಅಂದರೆ ತಂದೆ ತನ್ನ ಆಸ್ತಿಯಲ್ಲಿ ಮಗಳಿಗೆ ಪಾಲು ಕೊಡಲು ನಿರಾಕರಿಸಿದರೆ ಮಗಳು ಇದರಿಂದ ಏನು ಮಾಡಲು ಸಾಧ್ಯವಿಲ್ಲ.
ಮದುವೆಯಾದ ಮಗಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಹಕ್ಕಿದೆ
2005 ರ ತಿದ್ದುಪಡಿ ನಂತರ ಮಗಳನ್ನು ಮಗನಂತೆ ಸಮಾನ ವಾರಸುದಾರ ಎಂದು ಪರಿಗಣಿಸಲಾಗಿದೆ. ಈಗ ಮಗಳ ಮದುವೆಯ ನಂತರವೂ ತಂದೆಗೆ ಆಸ್ತಿಯ ಉತ್ತರಾಧಿಕಾರದಲ್ಲಿ ಮಗಳಿಗೆ ಹಕ್ಕಿದೆ. ಇದರಲ್ಲಿ ಯಾವುದೇ ಬದಲಾವಣೆಗಳನ್ನು ತರಲಾಗಿಲ್ಲ. ಅಂದರೆ ಮದುವೆಯ ನಂತರವೂ ಮಗಳಿಗೆ ತಂದೆಯ ಆಸ್ತಿಯ ಮೇಲೆ ಹಕ್ಕಿರುತ್ತದೆ.