31st December Rule: ಡಿಸೆಂಬರ್ 31 ರೊಳಗೆ ಮುಗಿಸಿಕೊಳ್ಳಿ ಈ 5 ಕೆಲಸಗಳನ್ನು, ಜನವರಿ 1 ರಿಂದ ಹೊಸ ರೂಲ್ಸ್.

ಡಿಸೆಂಬರ್ 31 ರೊಳಗೆ ಈ 5 ಕೆಲಸಗಳನ್ನ ಮುಗಿಸಿಕೊಳ್ಳದಿದ್ದರೆ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ

Deadline For 31st December: December 2023 ರ ಕೊನೆಯ ತಿಂಗಳು ಮುಗಿದರೆ 2024 ರ ಹೊಸ ವರ್ಷ ಆರಂಭವಾಗಲಿದೆ. ಇನ್ನು ಹೊಸ ವರ್ಷದಲ್ಲಿ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತದೆ. ಇನ್ನು ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಜನರು ಸಾಕಷ್ಟು ಕೆಲಸಗಳನ್ನು December ತಿಂಗಳಿನಲ್ಲಿ ಪೂರ್ಣಗೊಳಿಸಿಕೊಳ್ಳಬೇಕಿದೆ.

ಹೌದು ಹೊಸ ವರ್ಷದಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿದ್ದು ಜನರು ಈ ಕೆಲಸಗಳನ್ನ ಆದಷ್ಟು ಬೇಗ ಮುಗಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಹಾಗಾದರೆ ಈ ಡಿಸೆಂಬರ್ ಅಂತ್ಯದೊಳಗೆ ಮುಗಿಸಿಕೊಳ್ಳಬೇಕಾದ ಕೆಲಸಗಳು ಯಾವುದು ಅನ್ನುವುದರ ಮಾಹಿತಿ ಇಲ್ಲಿದೆ.

Deadline For 31st December
Image Credit: Original Source

ಡಿಸೆಂಬರ್ 31 ರೊಳಗೆ ಮುಗಿಸಿಕೊಳ್ಳಿ ಈ 5 ಕೆಲಸಗಳನ್ನು
•ಮ್ಯೂಚುವಲ್ ಫಂಡ್ ನಾಮನಿರ್ದೇಶನ ಸಲ್ಲಿಕೆಗೆ ಗಡುವು
ಅಸ್ತಿತ್ವದಲ್ಲಿರುವ ಡಿಮ್ಯಾಟ್ ಖಾತೆದಾರರಿಗೆ ನಾಮನಿರ್ದೇಶನ ವಿವರಗಳನ್ನು ಒದಗಿಸಲು December 31 2023 ರವರೆಗೆ SEBI ಗಡುವನ್ನು ನೀಡಿದೆ. ಭೌತಿಕ ಭದ್ರತಾ ಹೊಂದಿರುವವರು ತಮ್ಮ ಪಾನ್, ನಾಮನಿರ್ದೇಶನ, ಸಂಪರ್ಕ ವಿವರ ಎಲ್ಲವನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕು.

•Income Tax return
ಆದಾಯ ತೆರಿಗೆಯನ್ನು ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ 2023, ಆದರೆ ನಿಗದಿತ ದಿನಾಂಕದೊಳಗೆ ಈ ಕೆಲಸವನ್ನು ಮಾಡದವರು, ಅದನ್ನು ಮಾಡಲು ಡಿಸೆಂಬರ್ 31 ರ ವರೆಗೆ ಅವಕಾಶವಿದೆ. ನವೀಕರಿಸಿದ ITR ಅನ್ನು ಈ ಗಡುವಿನವರೆಗೆ ವಿಳಂಬ ಶುಲ್ಕದೊಂದಿಗೆ ಸಲ್ಲಿಸಬಹುದು. ಇನ್ನು ತೆರಿಗೆದಾರರ ಆದಾಯ 5,00,000 ರೂ.ಗಿಂತ ಹೆಚ್ಚಿದ್ದರೆ, 5,000 ರೂ.ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಆದಾಯವು 5,00,000 ರೂ.ಗಿಂತ ಕಡಿಮೆಯಿದ್ದರೆ 1000 ರೂ. ದಂಡವನ್ನು ಪಾವತಿಸಬೇಕು.

Income Tax Return
Image Credit: India-briefing

•ಬ್ಯಾಂಕ್ ಲಾಕರ್ ಒಪ್ಪಂದ
ಇನ್ನು Reserve Bank Of India ಬ್ಯಾಂಕ್ ಲಾಕರ್ ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಪ್ರತಿವರ್ಷ ಗ್ರಾಹಕರು ತಮ್ಮ ಬ್ಯಾಂಕುಗಳೊಂದಿಗೆ ಲ್ಕರ್ ಒಪ್ಪಂದಕ್ಕೆ ಸಹಿ ಹಾಕುವಂತೆ RBI ಆದೇಶಿಸಿದೆ. ಬಳಕೆದಾರರು ಬಾಡಿಗೆ ಪಾವತಿಸುವುದನ್ನು ಮುಂದುವರೆಸಿದರೆ ಮಾತ್ರ ಲಾಕರ್ ಗಳನ್ನೂ ಬಳಸಲು ಅವಕಾಶವಿರುತ್ತದೆ. ಈ ಒಪ್ಪಂದವನ್ನು ಮಾಡಲು December 31 ಕೊನೆಯ ದಿನಾಂಕವಾಗಿದೆ.

Join Nadunudi News WhatsApp Group

•UPI ಸೇವೆ ಸ್ಥಗಿತ
ಸದ್ಯ National Payment Corporation Of India ಇದೀಗ UPI ಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ವರ್ಷಗಳಿಂದ ಬಳಸದೆ ಇರುವ UPI ID ಗಳನ್ನೂ ಸ್ಥಗಿತಗೊಳಿಸಲು NPCI ನಿರ್ಧಾರ ಕೈಗೊಂಡಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ವಹಿವಾಟುಗಳಿಲ್ಲದ UPI ID ಗಳನ್ನೂ ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದು ವರ್ಷದಲ್ಲಿ ಯಾವುದೇ ವಹಿವಾಟು ಕಂಡುಬರದಿದ್ದರೆ ಅಂತಹ UPI ID ಯನ್ನು December 31 ರ ನಂತರದ ದಿನಗಳಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ. ಹೀಗಾಗಿ ನಿಮ UPI ID ಯನ್ನು ಉಳಿಸಿಕೊಳ್ಳಲು December 31 ರೊಳಗೆ ಒಮ್ಮೆಯಾದರೂ ವಹಿವಾಟು ನಡೆಸುವುದು ಉತ್ತಮ.

UPI ID Close
Image Credit: Mypunepulse

•SBI ಅಮೃತ್ ಕಲಶ ಕೊನೆಯ ದಿನಾಂಕ
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ಯ ವಿಶೇಷ FD ಯೋಜನೆಯಾದ ಅಮೃತ್ ಕಲಶ ಯೋಜನೆಯನ್ನು ಜನರಿಗಾಗಿ ನೀಡುತ್ತಿದೆ. ಬ್ಯಾಂಕ್ ಇದರ ಮೇಲೆ 7.10% ಬಡ್ಡಿಯನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು 31 ಡಿಸೆಂಬರ್ 2023 ಕೊನೆಯ ದಿನಾಂಕ ಆಗಿದೆ.

Join Nadunudi News WhatsApp Group