Saving Account: ಸೆಪ್ಟೆಂಬರ್ 30 ರ ನಂತರ ಇಂತವರ ಬ್ಯಾಂಕ್ ಖಾತೆ ಕ್ಲೋಸ್, ಕೇಂದ್ರದ ದಿಡೀರ್ ಘೋಷಣೆ.
ಸೆ 30 ರ ನಂತರ ಇಂತಹ ಜನರ ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ಅಕೌಂಟ್ ಬ್ಲಾಕ್ ಆಗಲಿದೆ.
Deadline For Aadhaar And Pan Link To Post Office Account: ಜನಸಾಮಾನ್ಯರು ಹಣವನ್ನು ಹೂಡಿಕೆ ಮಾಡಲು ಬ್ಯಾಂಕ್ ಗಳ ಹಾಗೆ ಅಂಚೆ ಕಚೇರಿಯನ್ನು ಬಳಸಿಕೊಳ್ಳುತ್ತಾರೆ. Post Office ಗ್ರಾಹಕರಿಗೆ ಈಗಾಗಲೇ ಹಲವು ಯೋಜನೆಗಳನ್ನು ಪರಿಚಯಿಸಿದೆ. ಇದೀಗ Post Office ನಲ್ಲಿ ಖಾತೆಯನ್ನ ಹೊಂದಿರುವವರಿಗೆ ಕೆಲವು ಅಗತ್ಯ ನಿಯಮವನ್ನು ಜಾರಿಗೆ ತರಲಾಗಿದೆ. ಅದೇನೆಂದು ನಾವೀಗ ತಿಳಿಯೋಣ.
ನೀವು ಭವಿಷ್ಯದ ಅಗತ್ಯತೆಗಾಗಿ ಸಾರ್ವಜನಿಕ ಭವಿಷ್ಯ ನಿಧಿ(PPF ), ರಾಷ್ಟೀಯ ಉಳಿತಾಯ ಪ್ರಮಾಣ ಪತ್ರ(NAC ), ಹಿರಿಯ ನಾಗರಿಕರ ಉಳಿತಾಯ ಯೋಜನೆ(SCSS ) ಯಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ ನಿಯಮದ ಬಗ್ಗೆ ತಿಳಿಯುದು ಬಹಳ ಅವಶ್ಯಕವಾಗಿದೆ.
ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡುದು ಕಡ್ಡಾಯ
ಮಾರ್ಚ್ 31 ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, Post Office ನಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF ), ರಾಷ್ಟೀಯ ಉಳಿತಾಯ ಪ್ರಮಾಣ ಪತ್ರ(NAC ), ಹಿರಿಯ ನಾಗರಿಕರ ಉಳಿತಾಯ ಯೋಜನೆ(SCSS ) ಯಂತಹ ಸಣ್ಣ ಉಳಿತಾಯ ಖಾತೆ ಹೊಂದಿರುವವರು ಇನ್ನು ಕೇವಲ 10 ದಿನದ ಒಳಗೆ ತಮ್ಮ ಖಾತೆಗಳಿಗೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಅಂದರೆ ಸೆಪ್ಟೆಂಬರ್ 30 ರೊಳಗೆ ಹೊಸದಾಗಿ ಖಾತೆ ತೆರೆದವರನ್ನು ಬಿಟ್ಟು ಉಳಿದವರು ಸಣ್ಣ ಉಳಿತಾಯ ಖಾತೆಗಳಿಗೆ ಆಧಾರ್ ಹಾಗೂ ಪಾನ್ ಲಿಂಕ್ ಮಾಡುದು ಕಡ್ಡಾಯವಾಗಿದೆ.
ಆಧಾರ್ ಲಿಂಕ್ ಏಕೆ ಮಾಡಬೇಕು…?
ಸಚಿವಾಲಯವು ಕೆಲವು ನಿಯಮವನ್ನು ರೂಪಿಸಿದೆ, ಸಣ್ಣ ಉಳಿತಾಯ ಯೋಜನೆಯ ಖಾತೆದಾರರು ತಮ್ಮ ಹೂಡಿಕೆಯ ಮೊತ್ತದ ಸಂಪೂರ್ಣ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪಾನ್ ಕಾರ್ಡ್ ಹಾಗೂ ಆಧಾರ ಕಾರ್ಡ್ ಲಿಂಕ್ ಮಾಡುದು ಕಡ್ಡಾಯವಾಗಿದೆ.
ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ…?
ಗ್ರಾಹಕರು ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಹಾಗೂ ಪಾನ್ ಅನ್ನು ಲಿಂಕ್ ಮಾಡದಿದ್ದರೆ ಯೋಜನೆಗಳು ಸ್ಥಗಿತಗೊಳ್ಳುತ್ತವೆ. ಹಿಂದೆ ಬಾಕಿ ಇರುವ ಬಡ್ಡಿಯನ್ನು ಮತ್ತು ಮೆಚ್ಯುರಿಟಿ ಮೊತ್ತವನ್ನು ಹೂಡಿಕೆದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುದಿಲ್ಲ.
ಖಾತೆ ಏಕೆ ಸ್ಥಗಿತ ಗೊಳ್ಳುತ್ತದೆ…?
ಸರ್ಕಾರದ ಉಳಿತಾಯ ಉತ್ತೇಜನ ಕಾಯ್ದೆಯಡಿ ಯಾವುದೇ ಯೋಜನೆಯ ಅಡಿಯಲ್ಲಿ ಖಾತೆ ತೆರೆಯಲು ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಈಗ ನೀಡಿರುವ ನಿಗದಿತ ಗಡುವಿನೊಳಗೆ ನಿಮ್ಮ ಉಳಿತಾಯ ಖಾತೆಗಳಿಗೆ ಆಧಾರ್ ಹಾಗೂ ಪಾನ್ ಲಿಂಕ್ ಮಾಡದಿದ್ದರೆ ನಿಮ್ಮ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.