Aadhaar Number: ಮರಣದ ನಂತರ ಆತನ ಆಧಾರ್ ಕಾರ್ಡ್ ಏನಾಗುತ್ತದೆ….? ಬೇರೆಯವರಿಗೆ ಸಿಗುತ್ತಾ ಆ ಆಧಾರ್ ನಂಬರ್…?
ಒಬ್ಬ ವ್ಯಕ್ತಿಯ ಮರಣದ ನಂತರ ಆತನ ಆಧಾರ್ ಕಾರ್ಡ್ ಏನಾಗುತ್ತದೆ.
Aadhaar Biometric Lock Process: ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿ ಕೂಡ Aadhaar Card ಅನ್ನು ಹೊಂದಿರುತ್ತಾರೆ.ಆಧಾರ್ ವ್ಯಕ್ತಿಯ ಜೀವನದಲ್ಲಿ ಎಷ್ಟು ಮುಖ್ಯ ದಾಖಲೆ ಎನ್ನುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ನಿಮ್ಮ ಆಧಾರ್ ನಲ್ಲಿ ಎಲ್ಲ ವೈಯಕ್ತಿಕ ಮಾಹಿತಿ ಅಡಕವಾಗಿರುವುದರಿಂದ ನೀವು ಆಧಾರ್ ಕಾರ್ಡ್ ನಿಂದ ಒಂದು ರೀತಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಇನ್ನು ಆಧಾರ್ ಕಾರ್ಡ್ ಅನ್ನು ನಿಮ್ಮ ಇನ್ನಿತರ ವೈಯಕ್ತಿಕ ದಾಖಲೆಗಳೊಂದಿಗೆ ಲಿಂಕ್ ಮಾಡದೆ ಇದ್ದರೆ ನೀವು ಸರ್ಕಾರದ ವಿವಿಧ ಯೋಜನೆಯಿಂದ ವಂಚಿತರಾಗುವುದಂತೂ ಖಂಡಿತ. ಆದರೆ ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ನ ಬಗ್ಗೆ ನಿಮಗೆ ತಿಳಿದಿರದ ಸಾಕಷ್ಟು ವಿಷಯಗಳಿವೆ. ಆಧಾರ್ ಹೊಂದಿರುವ ವ್ಯಕ್ತಿಯ ಮರಣದ ನಂತರ ಆಧಾರ್ ಕಾರ್ಡ್ ಏನಾಗುತ್ತದೆ..? ಆಧಾರ್ ಸಂಖ್ಯೆಯನ್ನು ರದ್ದುಗೊಳಿಸಲು ಸಾಧ್ಯವೇ..? ಎನ್ನುವ ಬಗ್ಗೆ ವಿವರ ಇಲ್ಲಿದೆ.
ವ್ಯಕ್ತಿಯ ಮರಣದ ನಂತರ ಆಧಾರ್ ಕಾರ್ಡ್ ಏನಾಗುತ್ತದೆ..?
ಸಾಮಾನ್ಯವಾಗಿ ಆಧಾರ್ ಕಾರ್ಡ್ ನಿಂದ ವಂಚಕರು ವಂಚನೆಯನ್ನು ಆರಂಭಿಸುತ್ತಿದ್ದಾರೆ ಎನ್ನಬಹುದು. ಆಧಾರ್ ಕುರಿತು ಸಣ್ಣ ಮಾಹಿತಿ ಸಿಕ್ಕರೂ ಕೂಡ ವಂಚನೆ ಮಾಡಲು ಕಾಯುತ್ತಿರುತ್ತಾರೆ. ಹೀಗಿರುವಾಗ ಸತ್ತ ವ್ಯಕ್ತಿಯ ಆಧಾರ್ ಕಾರ್ಡ್ ದುರುಪಯೋಗ ಪಡಿಸಿಕೊಳ್ಳುವುದು ಸಹಜ. ಈಗಾಗಲೇ ಮರಣ ಹೊಂದಿದ ವ್ಯಕ್ತಿಯ ಆಧಾರ್ ನ ಪುರಾವೆಯನ್ನು ಬಳಸಿಕೊಂಡು ಮೋಸ ಮಾಡಿರುವ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಈ ಕಾರಣಕ್ಕೆ ಆದಾಯ ಇಲಾಖೆ ಎಚ್ಚುತ್ತುಕೊಂಡಿದೆ.
ಆಧಾರ್ ಕಾರ್ಡ್ ಅನ್ನು ರದ್ದು ಮಾಡಲು ಸಾಧ್ಯವೇ..?
ವ್ಯಕ್ತಿಯ ಮರಣದ ನಂತರ ಆಧಾರ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗುವುದಿಲ್ಲ. UIDAI ಆಧಾರ್ ಅನ್ನು ನಿಷ್ಕ್ರಿಯಗೊಳಿಸಲು ಯಾವುದೇ ನಿಭಂದನೆಯನ್ನು ಮಾಡಿಲ್ಲ. UIDAI ಮರಣ ಹೊಂದಿದ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ಯಾವುದೇ ವ್ಯಕ್ತಿಗೂ ನೀಡುವುದಿಲ್ಲ. ಆಧಾರ್ ಕಾರ್ಡ್ ಅನ್ನು ಸರೆಂಡರ್ ಮಾಡಲು ಅಥವಾ ರದ್ದು ಮಾಡಲು ಅವಕಾಶ ಇಲ್ಲದಿದ್ದರೂ, ನೀವು Aadhaar Biometric ಅನ್ನು ಲಾಕ್ ಮಾಡಬಹುದು.
ಈ ರೀತಿಯಾಗಿ ನಿಮ್ಮ ಆಧಾರ್ ಬಯೋಮೆಟ್ರಿಕ್ ಅನ್ನು ಲಾಕ್ ಮಾಡಿ
ನೀವು ನಿಮ್ಮ Aadhaar Biometric ಅನ್ನು Lock ಮಾಡುವುದು ಉತ್ತಮ. ನೀವು ಆನ್ಲೈನ್ ನಲ್ಲಿಯೇ ಸುಲಭವಾಗಿ ನಿಮ್ಮ Biometric ಅನ್ನು ಸಕ್ರಿಯಗೊಳಿಸಿಕೊಳ್ಳಬಹುದು. UIDAI ನ ಅಧಿಕೃತ ವೆಬ್ ಸೈಟ್ https://www.uidai.gov.in/ ಗೆ ಲಾಗಿನ್ ಆಗುವ ಮೂಲಕ ನೀವು ಸುಲಭವಾಗಿ ನಿಮ್ಮ Aadhaar Lock ಅಥವಾ Unlock ಮಾಡಬಹುದು. ವೆಬ್ ಸೈಟ್ ಗೆ ಭೇಟಿ ನೀಡಿ Biometric ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಅಲ್ಲಿ ಕೇಳಲಾಗುವ ವಿವರವನ್ನು ಭರ್ತಿಮಾಡಿ OTP ಸೆಂಡ್ ಮಾಡಿದರೆ ನಿಮ್ಮ ಆಧಾರ್ ಸುಲಭವಾಗಿ ಲಾಕ್ ಆಗುತ್ತದೆ.