TCS Charges: ATM ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಗುಡ್ ನ್ಯೂಸ್, ಕೇಂದ್ರ ಸರ್ಕಾರದ ಘೋಷಣೆ.
ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರಿಗೆ ಯಾವುದೇ TCS ವಿಧಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶವನ್ನ ಹೊರಡಿಸಿದೆ.
Credit And Debit Card TCS Charges: ದೇಶದಲ್ಲಿ ಕ್ರೆಡಿಟ್ (Credit Card) ಹಾಗೂ ಡೆಬಿಟ್ ಕಾರ್ಡ್ (Debit Card) ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಜನರು ಹೆಚ್ಚಾಗಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳ ಮೂಲಕ ಹಣದ ಪಾವತಿಯನ್ನು ನಡೆಸುತ್ತಾರೆ. ಇನ್ನು ಹೊಸ ವರ್ಷದ ಆರಂಭದಿಂದ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ.
ಇನ್ನು ಇದೀಗ ಕೇಂದ್ರ ಸರ್ಕಾರ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಕ್ರೆಡಿಟ್ ಹಾಗು ಡೆಬಿಟ್ ಕಾರ್ಡ್ ಬಳಕೆಯಲ್ಲಿ ಮಹತ್ವದ ನಿರ್ಧಾರವನ್ನು ಸರ್ಕಾರ ಘೋಷಿಸಿದೆ.
ATM ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಗುಡ್ ನ್ಯೂಸ್
ವಿದೇಶದಲ್ಲಿ ಬಳಸಲಾಗುವ ಕ್ರೆಡಿಟ್ ಕಾರ್ಡ್ ಗಳ ಮೇಲಿನ ತೆರಿಗೆ ಸಂಗ್ರಹಣೆಯ ವಿಚಾರವಾಗಿ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಹಣಕಾಸು ಸಚಿವಾಲಯ ಕಾರ್ಡ್ ಬಳಕೆದಾರರಿಗೆ ವಿನಾಯಿತಿ ನೀಡಿದೆ. ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ವಿದೇಶದಲ್ಲಿ ನಡೆಸುವ ವಹಿವಾಟಿಗೆ ಟಿಸಿಎಸ್ (TCS) ಅನ್ವಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಜುಲೈ 1 ರಿಂದ ಟಿಸಿಎಸ್ ನಲ್ಲಿ ಹೊಸ ನಿಯಮ
ಗರಿಷ್ಠ ರೂ. 7 ಲಕ್ಷದM ವರೆಗೆ ಕ್ರೆಡಿಟ್ ಹಾಗು ಡೆಬಿಟ್ ಕಾರ್ಡ್ ಬಳಕೆದಾರರಿಗೆ ಯಾವುದೇ ಟಿಸಿಎಸ್ ಅನ್ವಯಿಸುವುದಿಲ್ಲ. ಸರ್ಕಾರದ ಈ ಆದೇಶ ಜುಲೈ 1, 2023 ರಿಂದ ಅವಯವಾಗಲಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ವಿದೇಶಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಟಿಸಿಎಸ್ ಪಾವತಿ LRS ಮಿತಿಗಳಿಗೆ ಹೆಚ್ಚುವರಿಯಾಗಿದೆ.
ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ಎಲ್ ಆರ್ ಎಸ್ ಅಡಿಯಲ್ಲಿ ಜಾರಿಗೊಳಿಸಲಾಗಿದೆ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಆರ್ಥಿಕ ವರ್ಷದಲ್ಲಿ ರೂ. 7 ಲಕ್ಷದವರೆಗೆ ಯಾವುದೇ ಟಿಸಿಎಸ್ ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಬಹಿರಂಗಪಡಿಸಿದೆ.