Debit Card: ATM ಕಾರ್ಡ್ ಬಳಸುವವರಿಗೆ ರಾತ್ರೋರಾತ್ರಿ ಜಾರಿಗೆ ಬಂತು ಹೊಸ ನಿಯಮ, RBI ಮಹತ್ವದ ಘೋಷಣೆ.

ATM ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸುವವರಿಗೆ RBI ನಿಂದ ಹೊಸ ಸೇವೆ.

Debit Card Tokenization: Debit Card And Credit Card ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಬಳಕೆ ಮಾಡುತ್ತಿದ್ದಾರೆ. ಬ್ಯಾಂಕ್ ಖಾತೆ ಇದ್ದವರು ತಮ್ಮ ಹೆಚ್ಚಿನ ಹಣದ ವಹಿವಾಟುಗಳನ್ನ ATM Card ಮೂಲಕ ಮಾಡುತ್ತಿರುವುದು ಕೆಲವು ವಂಚಕರಿಗೆ ಮೋಸವನ್ನ ಮಾಡಲು ಸುಲಭವಾಗಿದೆ. ಸದ್ಯ ಜನರು ವಂಚನೆಯಿಂದ ಮೋಸ ಹೋಗುವುದನ್ನ ತಪ್ಪಿಸುವ ಸಲುವಾಗಿ RBI ಈಗ ಹೊಸ ನಿಯಮವನ್ನ ಜಾರಿಗೆ ತಂದಿದೆ.

Debit Card Tokenization
Image Credit: News18

ATM ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಹೊಸ ಸೇವೆ
ಇದೀಗ RBI ದೇಶದಲ್ಲಿ Card-On-File Tokenization ಅಥವಾ ಬ್ಯಾಂಕ್ ಮಟ್ಟದಲ್ಲಿ ಟೋಕನ್ ರಚನೆಯ ಸೌಲಭ್ಯವನ್ನು ವಿಸ್ತರಿಸಿದೆ. ಗ್ರಾಹಕರು ತಮ್ಮ ಕಾರ್ಡ್ ಗಳನ್ನೂ ಮರ್ಚೆಂಟ್ ಗಳ ಮೂಲಕ ಟೋಕನೈಸ್ ಮಾಡುವ ಬದಲಾಗಿ ನೇರವಾಗಿ ತಮ್ಮ ಪಿನ್ ಗಳೊಂದಿಗೆ ಟೋಕನೈಸ್ ಮಾಡಬಹುದಾಗಿದೆ. ಈ ಟೋಕನೈಸಷನ್ ಪ್ರಕ್ರಿಯೆಯು ಗ್ರಾಹಕರಿಗೆ ಹೆಚ್ಚು ಅನುಕೂಲ ಮಾಡಿಕೊಡಲಿದೆ.

Card Tokenization
ಕಾರ್ಡ್ ಟೋಕನೈಸೇಶನ್ ಎಂಬುದು ವೈಯಕ್ತಿಕ ಮತ್ತು ಅನನ್ಯ ಟೋಕನ್ ಮೂಲಕ ಸ್ವೀಕರಿಸುವವರಿಗೆ ಸೂಕ್ಷ್ಮ ಮಾಹಿತಿಯನ್ನು (ಕಾರ್ಡ್ ಸಂಖ್ಯೆ, ಮುಕ್ತಾಯ ದಿನಾಂಕ ಮತ್ತು CVV ನಂತಹ) ಮರೆಮಾಡುವ ಪ್ರಕ್ರಿಯೆಯಾಗಿದೆ. ಇದರಲ್ಲಿ 16-ಅಂಕಿಯ ಸಂಖ್ಯೆಯನ್ನು ಅನನ್ಯ ಪರ್ಯಾಯ ಕಾರ್ಡ್ ಸಂಖ್ಯೆ ಅಥವಾ ಟೋಕನ್ ಆಗಿ ಪರಿವರ್ತಿಸಲಾಗುತ್ತದೆ.

Credit Card Tokenization Benefit
Image Credit: News18

Debit Card Tokenization Benefit
ಇದರಿಂದ ಕಾರ್ಡ್‌ ಬಳಕೆದಾರರು ತಮ್ಮ ಖಾತೆಗಳನ್ನು ವಿವಿಧ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ನೇರವಾಗಿ ಲಿಂಕ್ ಮಾಡಲು ಸಾಧ್ಯವಾಗುತ್ತದೆ. RBI ಪ್ರಕಾರ ಪ್ರಸ್ತುತ Card-On-File Token ಅನ್ನು ವ್ಯಾಪಾರಿಯ ಅಪ್ಲಿಕೇಶನ್ ಅಥವಾ ವೆಬ್‌ಪುಟದಲ್ಲಿ ಮಾತ್ರ ರಚಿಸಬಹುದು. ಆದರೆ ಟೋಕನ್ ನೀಡುವ ಕುರಿತು ಬ್ಯಾಂಕ್ ಕಡೆಯಿಂದ ಮಾತುಕತೆ ನಡೆಯುತ್ತಿದೆ.

ಕಾರ್ಡ್ ಟೋಕನೈಸೇಶನ್ ಪ್ರಕ್ರಿಯೆ ಆರಂಭ
Card Tokenization ಅನ್ನು ಕಳೆದ ವರ್ಷ ಅಕ್ಟೋಬರ್ 1 ರಂದು ಪ್ರಾರಂಭಿಸಲಾಗಿದೆ. RBI ಪ್ರಕಾರ ಈ ವ್ಯವಸ್ಥೆಯ ಮೂಲಕ 56 ಕೋಟಿಗೂ ಹೆಚ್ಚು ಟೋಕನ್‌ಗಳನ್ನು ನೀಡಲಾಗಿದೆ. ಇದರ ಮೌಲ್ಯ 5 ಲಕ್ಷ ಕೋಟಿ ಆಗಿದೆ. ಇದು ಭದ್ರತೆಯನ್ನು ಹೆಚ್ಚಿಸುವುದಲ್ಲದೆ ಗ್ರಾಹಕರ ಸಮಯವನ್ನು ಉಳಿಸುತ್ತದೆ. ಯಾವುದೇ ಗ್ರಾಹಕರಿಗೆ ಇದು ಕಡ್ಡಾಯವಾದ ನಿಯಮವಲ್ಲದ ಕಾರಣ ಹೆಚ್ಚು ಆನ್ಲೈನ್ ವ್ಯವಹಾರ ಅಥವಾ ಏಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ವ್ಯವಹಾರ ಮಾಡುವವರು ಈ ಟೋಕನೈಸೇಷನ್​ ಸೇವೆಯನ್ನ ಬಳಸಿಕೊಳ್ಳುವುದು ಬಹಳ ಉತ್ತಮ.

Join Nadunudi News WhatsApp Group

Join Nadunudi News WhatsApp Group