The deadline for this work is December 31st: ಇನ್ನೇನು ಕೆಲವೇ ದಿನಗಳಲ್ಲಿ 2025 ರ ವರ್ಷ ಮುಕ್ತಾಯವಾಗಲಿದೆ. ಅನೇಕ ಸರ್ಕಾರೀ ಕೆಲಸಗಳಿಗೆ ಡಿಸೆಂಬರ್ 31 ಕೊನೆಯ ದಿನಾಂಕ ಆಗಿದೆ. ಈ ವರ್ಷದ ಅಂತ್ಯದೊಳಗೆ ಈ ಕೆಳಗಿನ ಸರ್ಕಾರೀ ಕೆಲಸವನ್ನು ಪೂರ್ಣಗೊಳಿಸದಿದ್ದರೆ ನೀವು ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾದರೆ ನಾವೀಗ ಡಿಸೆಂಬರ್ 31 ರ ಒಳಗೆ ಯಾವೆಲ್ಲ ಕೆಲಸವನ್ನು ಪೂರ್ಣಗೊಳಿಸಬೇಕು..? ಹಾಗೆ ಪೂರ್ಣಗೊಳಿಸದಿದ್ದರೆ ಆಗುವ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
ಭಾರತ ಸರ್ಕಾರದ ಆದೇಶದ ಪ್ರಕಾರ, ಡಿಸೆಂಬರ್ 31 ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಆಗಿದೆ. ಡಿಸೆಂಬರ್ 31 ರೊಳಗೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ಅವರ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಪಾನ್ ಕಾರ್ಡ್ ನಿಷ್ಕ್ರಿಯವಾದರೆ ಬ್ಯಾಂಕ್ ವಹಿವಾಟು, ಟ್ಯಾಕ್ಸ್ ಫೈಲಿಂಗ್ ಹಾಗೆ ಹೂಡಿಕೆ ಮಾಡಲು ಸಾಧ್ಯವಿಲ್ಲ ಮತ್ತು ನಿಷ್ಕ್ರಿಯವಾದ ಪಾನ್ ಕಾರ್ಡ್ ಬಳಕೆ ಮಾಡಿದರೆ 10 ಸಾವಿರ ರೂಪಾಯಿಯ ತನಕ ದಂಡ ಪಾವತಿ ಮಾಡಬೇಕಾಗುತ್ತದೆ.
ಡಿಸೆಂಬರ್ 31 ರೊಳಗೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ 1000 ರೂ ದಂಡ ಪಾವತಿ ಮಾಡಬೇಕು. ತೆರಿಗೆ ಇಲಾಖೆಯ ದಂಡದಿಂದ ತಪ್ಪಿಸಿಕೊಳ್ಳಲು ನಿಮ್ಮ ಪಾನ್ ಸ್ಟೇಟಸ್ ಪರಿಶೀಲಿಸಿ. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಗೆ ಹೋಗಿ ಆಧಾರ್ ಲಿಂಕ್ ಮಾಡಿ. ಡಿಸೆಂಬರ್ 31 2025 ಒಳಗೆ ಮಾಡದಿದ್ದರೆ ಪಾನ್ ನಿಷ್ಕ್ರಿಯವಾಗುತ್ತದೆ.
ಆಧಾರ್ ಮತ್ತು ಪಾನ್ ಲಿಂಕ್ ಮಾಡದೆ ಇದ್ದರೆ ಆಗುವ ಸಮಸ್ಯೆಗಳು
* ಬ್ಯಾಂಕಿಂಗ್ ವಹಿವಾಟಿನಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ
* ತೆರಿಗೆ ಪಾವತಿ ಮಾಡಲು ಸಮಸ್ಯೆ ಉಂಟಾಗುತ್ತದೆ
* ಸರ್ಕಾರೀ ಯೋಜನೆಗಳು ಅರ್ಜಿ ಸಲ್ಲಿಸಲು ಸಮಸ್ಯೆ ಉಂಟಾಗುತ್ತದೆ
* ಹೊಸ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಿಲ್ಲ
* ಪಾನ್ ಕಾರ್ಡ್ ನಿಷ್ಕ್ರಿಯವಾದರೆ ITR ಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆ ಎದುರಿಸಬೇಕಾಗುತ್ತದೆ.
ITR ಫೈಲಿಂಗ್
ಸೆಪ್ಟೆಂಬರ್ 15 2025 ರ ಒಳಗೆ ITR ಫೈಲ್ ಮಾಡದಿದ್ದವರು ಡಿಸೆಂಬರ್ 31, 2025 ರವರೆಗೆ ಬಿಲೇಟೆಡ್ ರಿಟರ್ನ್ ಸಲ್ಲಿಸಬಹುದು. ಮೊದಲು ಗಡುವು ತಪ್ಪಿದವರು ಈ ಅವಕಾಶ ಬಳಸಿಕೊಳ್ಳಬಹುದು, ಆದರೆ ದಂಡ ಮತ್ತು ಬಡ್ಡಿ ಅನ್ವಯವಾಗುತ್ತದೆ.
* ಒಟ್ಟು ಆದಾಯ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ, 5,000 ರೂ. ದಂಡ
* ಒಟ್ಟು ಆದಾಯ 5 ಲಕ್ಷ ರೂ.ಗಿಂತ ಕಡಿಮೆ ಇದ್ದರೆ, 1,000 ರೂ. ದಂಡ
* ಸೆಕ್ಷನ್ 234A ಅಡಿಯಲ್ಲಿ ಬಾಕಿ ತೆರಿಗೆಯ ಮೇಲೆ ತಿಂಗಳಿಗೆ 1% ಬಡ್ಡಿ ಪಾವತಿ ಮಾಡಬೇಕಾಗುತ್ತದೆ.
ಇತರ ಮುಖ್ಯ ಕೆಲಸಗಳು
* ಕೆಲವು ರಾಜ್ಯದಲ್ಲಿ ರೇಷನ್ ಕಾರ್ಡ್ E KYC ಮಾಡಲು ಡಿಸೆಂಬರ್ 31 ಕೊನೆಯ ದಿನಾಂಕ ಆಗಿದೆ. ರೇಷನ್ ಕಾರ್ಡ್ KYC ಇನ್ನೂ ಕೂಡ ಪೂರ್ಣ ಮಾಡದೆ ಇರುವವರು ಡಿಸೆಂಬರ್ 31 ರೊಳಗೆ ಕೆಲಸ ಮುಗಿಸಬೇಕು. ರೇಷನ್ ಕಾರ್ಡ್ KYC ಮುಗಿಸದಿದ್ದರೆ ಮುಂದಿನ ದಿನಗಳಲ್ಲಿ ಪಡಿತರ ದಾನ್ಯ ಪಡೆದುಕೊಳ್ಳಲು ಸದ್ಯಾವುದಿಲ್ಲ.
* ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕ ಆಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಸ್ವಂತ ಮನೆ ಇಲ್ಲದ ಬಡವರು ಹೊಸ ಮನೆ ನಿರ್ಮಾಣ ಮಾಡಲು ಸಬ್ಸಿಡಿ ಹಣ ಪಡೆದುಕೊಳ್ಳಲು. ಸದ್ಯ 2025 ರ ಅರ್ಜಿ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

