ಕ್ರಿಕೆಟ್ ಆಟಗಾರ ಅಂದರೆ ಆತನಿಗೆ ದೇಶದಲ್ಲಿ ಅಪಾರವಾದ ಅಭಿಮಾನಿಗಳು ಇರುತ್ತಾರೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ ಮತ್ತು ಅವರು ಯಾವುದೇ ಕೆಲಸವನ್ನ ಮಾಡಿದರು ಅದು ಬಹಳ ವೈರಲ್ ಆಗುತ್ತದೆ ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ ಭಾರತ ತಂಡ ಆಟಗಾರ ಮತ್ತು ಐಪಿಎಲ್ ನಲ್ಲಿ ಚನೈ ತಂಡದಲ್ಲಿ ಆಟವನ್ನ ಆಡುತ್ತಿರುವ ಖ್ಯಾತ ಬೌಲರ್ ದೀಪಕ್ ಚಾಹರ್ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ತನ್ನ ಅಮೋಘವಾದ ಬೌಲಿಂಗ್ ಮೂಲಕ ಹಲವು ಪಂದ್ಯಗಳನ್ನ ಗೆಲ್ಲಿಸಿಕೊಟ್ಟ ದೀಪಕ್ ಚಾಹರ್ ಹಲವು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ ಎಂದು ಹೇಳಬಹುದು. ನಿನ್ನೆ ನಡೆದ ಪಂದ್ಯದಲ್ಲಿ ಪಂದ್ಯದಲ್ಲಿ ಚನೈ ಸೋತರು ಕೂಡ ದೀಪಕ್ ಚಾಹರ್ ಗೆದ್ದಿದ್ದಾರೆ ಎಂದು ಹೇಳಬಹುದು.
ಹೌದು ದೀಪಕ್ ಚಾಹರ್ ಅವರು ಪ್ರೇಯಸಿಯ ಬಳಿ ತನ್ನ ಪ್ರೇಮವನ್ನ ನಿವೇಧನೆ ಮಾಡಿಕೊಳ್ಳುವುದರಲ್ಲಿ ಗೆದ್ದಿದ್ದು ಪ್ರೇಯಸಿ ದೀಪಕ್ ಚಾಹರ್ ಅವರ ಪ್ರೀತಿಯನ್ನ ಒಪ್ಪಿಕೊಂಡಿದ್ದಾರೆ. ಹೌದು ಮೈದಾನದಲೇ ದೀಪಕ್ ಚಾಹರ್ ಅವರು ಪ್ರೇಯಸಿಗೆ ಪ್ರೇಮ ನಿವೇಧನೆ ಮಾಡಿದ್ದು ಅಲ್ಲೇ ರಿಂಗ್ ತೊಡಿಸಿದ್ದಾರೆ ಮತ್ತು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಹಾಗಾದರೆ ದೀಪಕ್ ಚಾಹರ್ ಪ್ರೀತಿ ಮಾಡುತ್ತಿರುವ ಈ ಲಕ್ಕಿ ಹುಡುಗಿ ಯಾರು ಅನ್ನುವ ಪ್ರಶ್ನೆ ಎಲ್ಲರ ತಲೆಯಲ್ಲಿ ಕಾಡುತ್ತಿದೆ ಎಂದು ಹೇಳಬಹುದು.
ಹಾಗಾದರೆ ದೀಪಕ್ ಚಾಹರ್ ಪ್ರೇಮ ನಿವೇಧನೆ ಮಾಡಿದ್ದು ಯಾರಿಗೆ ಮತ್ತು ಈ ಲಕ್ಕಿ ಹುಡುಗಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇವರ ಪ್ರೀತಿಗೆ ಶುಭ ಹಾರೈಸಿ. ಹೌದು ಸ್ನೇಹಿತರೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಾಹರ್ ಗುರುವಾರ ಗೆಳತಿ ಜಯಾ ಭಾರದ್ವಾಜ್ ಅವರಿಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಎಲ್ಲರೆದುರೇ ಪ್ರೇಮ ನಿವೇದನೆ ಮಾಡಿದರು. ಸ್ನೇಹಿತರೆ ಜಯಾ ಭಾರದ್ವಾಜ್ ಅವರು ನಟ ಮತ್ತು ಬಿಗ್ ಬಾಸ್ ಸ್ಪರ್ಧಿ ಬಿಗ್‌ಬಾಸ್ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ.
ಪ್ರಸ್ತುತ ದೆಹಲಿಯಲ್ಲಿ ಇರುವ ಜಯಾ ಭಾರದ್ವಾಜ್ ಅವರು ದೆಹಲಿಯ ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ದೀಪಕ್ ಚಾಹರ್ ಅವರ ಪ್ರೀತಿಯನ್ನ ಒಪ್ಪಿಕೊಂಡಿದ್ದು ಸದ್ಯದಲ್ಲೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ದೀಪಕ್ ಚಾಹರ್ ಗೆಳತಿ ಜಯಾ ಅವರನ್ನು ಟೀಂ ಇಂಡಿಯಾದ ಆಟಗಾರರಿಗೆ ಪರಿಚಯಿಸಿದ್ದಾರೆ ಎನ್ನಲಾಗಿದೆ. ದೀಪಕ್ ಬಾಲಿವುಡ್ ಮಾಡೆಲ್ ಮತ್ತು ನಟಿ ಮಾಲ್ತಿ ಚಾಹರ್ ಅವರ ತಮ್ಮ ಮತ್ತು ಕ್ರಿಕೆಟಿಗ ರಾಹುಲ್ ಚಾಹರ್ ಅವರ ಅಣ್ಣ. ಇನ್ನು ಜಯಾ ಅವರು ನಟ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ ಮತ್ತು ಸಿದ್ಧಾರ್ಥ್ ಅವರು ಬಿಗ್‌ಬಾಸ್ ಸೇರಿದಂತೆ ಹಲವು ಟಿವಿ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾದವರು. ಏನೇ ಆಗಲಿ ಇವರಿಬ್ಬರ ದಾಂಪತ್ಯ ಜೀವನ ಆದಷ್ಟು ಬೇಗ ಆರಂಭ ಆಗಲಿ ಎಂದು ಶುಭ ಹಾರೈಸೋಣ.