Deepika Padukone Baby Photo: ವೈರಲ್ ಆಯಿತು ದೀಪಿಕಾ ಪಡುಕೋಣೆ ಮಗುವಿನ ಫೋಟೋ, ದೀಪಿಕಾಗೆ ಮಗು ಆಯಿತಾ…?
ದೀಪಿಕಾ ಪಡುಕೋಣೆಗೆ ಮಗು ಆಯಿತಾ...? ವೈರಲ್ ಆಗಿದೆ ಫೋಟೋಗಳು
Deepika Padukone Baby Photo Viral: ಬಾಲಿವುಡ್ ನ ಟಾಪ್ ನಟಿಯಾಗಿರುವ ದೀಪಿಕಾ ಪಡುಕೋಣೆ ತಾಯಿಯಾಗಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಪ್ರಭಾಸ್ ನಟನೆಯ ಕಲ್ಕಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ತಾಯಿ ಪಾತ್ರ ಮಾಡಿದ್ದಾರೆ. ಹಾಗೆಯೆ ನಿಜ ಜೀವನದಲ್ಲಿಯೂ ದೀಪಿಕಾ ತಾಯಿಯಾಗಿದ್ದಾರೆ. ನಟಿ ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು. ದೀಪಿಕಾ ಪಡುಕೋಣೆ ಫ್ಯಾಮಿಲಿ ಮತ್ತು ಅವರ ಅಭಿಮಾನಿಗಳು ದೀಪಿಕಾ ಮಗುವಿಗಾಗಿ ಕಾಯುತ್ತಿದ್ದಾರೆ.
ಸದ್ಯ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. ಮಗುವಿನ ಜೊತೆಗಿರುವ ದೀಪಿಕಾ ಫೋಟೋ ಕೂಡ ಬಾರಿ ಸದ್ದು ಮಾಡುತ್ತಿದೆ. ಈ ಫೋಟೋ ನೋಡಿದವರು ದೀಪಿಕಾ ಮಗುವಿಗೆ ಜನ್ಮ ನೀಡಿದ್ದಾರ…? ಎನ್ನುವ ಬಗ್ಗೆ ಚರ್ಚಿಸುತ್ತಿದ್ದಾರೆ. ಸದ್ಯ ನಾವೀಗ ಈ ವೈರಲ್ ಸುದ್ದಿಯ ಬಗ್ಗೆ ಒಂಧಿಷ್ಟು ಮಾಹಿತಿ ನೀಡಲಿದ್ದೇವೆ. ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಯಿತು ದೀಪಿಕಾ ಪಡುಕೋಣೆ ಮಗುವಿನ ಫೋಟೋ
ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಜೊತೆಗಿರುವ ದೀಪಿಕಾ ಫೋಟೋ ಬಾರಿ ವೈರಲ್ ಆಗುತ್ತಿದೆ. ದೀಪಿಕಾ ಪಡುಕೋಣೆ ಮಗುವಿಗೆ ಜನ್ಮ ನೀಡಿರುವ ಸುದ್ದಿಯ ಜೊತೆಗೆ, ರಣವೀರ್ ಸಿಂಗ್ ತನ್ನ ಮಡಿಲಲ್ಲಿ ಜನಿಸಿದ ಮಗುವನ್ನು ನೋಡುತ್ತಿರುವ ಫೋಟೋ ಕೂಡ ತುಂಬಾ ವೈರಲ್ ಆಗಿದೆ.
ಇನ್ನು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮಗುವಿನೊಂದಿಗೆ ಪೋಷಕರಾಗುತ್ತಿರುವ ಚಿತ್ರಗಳು ವೈರಲ್ ಆಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ನಡೆದಿದೆ. ಆದರೆ ಈಗ ಇತ್ತೀಚೆಗೆ ವೈರಲ್ ಆಗುತ್ತಿರುವ ಫೋಟೋಗಳು ನಿಜವೇ…? ಎನ್ನುವುದು ಸದ್ಯ ಎಲ್ಲರ ಪ್ರಶ್ನೆಯಾಗಿದೆ.
ದೀಪಿಕಾಗೆ ಮಗು ಆಯಿತಾ…?
ಈ ವೈರಲ್ ಚಿತ್ರ ಸಂಪೂರ್ಣವಾಗಿ ನಕಲಿ ಎನ್ನುವುದು ಸ್ಪಷ್ಟ ಮಾಹಿತಿ. ಕಳೆದ ಬಾರಿಯಂತೆ ಈ ಬಾರಿಯೂ ಯಾರೋ ಒಬ್ಬರು ಲೈಕ್ ಗಳು ಮತ್ತು ವೀಕ್ಷಣೆಗಾಗಿ ಹಳೆಯ ವೈರಲ್ ಚಿತ್ರದೊಂದಿಗೆ ತಮ್ಮ ಆಸೆಯಂತೆ ಕಥೆಯನ್ನು ಸೇರಿಸುವ ಮೂಲಕ ನೆಟ್ ನಲ್ಲಿ ಈ ಸುದ್ದಿಯನ್ನು ವೈರಲ್ ಮಾಡಿದ್ದಾರೆ. ಇದೊಂದು ಎಡಿಟೆಡ್ ಫೋಟೋವಾಗಿದೆ. ಅಷ್ಟಕ್ಕೂ ಈ ವೈರಲ್ ಫೋಟೋ ಯಾವಾಗ ತೆಗೆದಿದ್ದು, ಎಲ್ಲಿಂದ ಬಂತು ಎಂಬ ಪ್ರಶ್ನೆಗಳು ಈಗ ಜನರ ಮನಸ್ಸಿನಲ್ಲಿ ಮೂಡುತ್ತಿವೆ.
ವೈರಲ್ ಆಗಿರುವ ಚಿತ್ರದಲ್ಲಿ ರಣವೀರ್ ಸಿಂಗ್ ಮಗುವಿನೊಂದಿಗೆ ಆಸ್ಪತ್ರೆಯಲ್ಲಿದ್ದು ನಗುತ್ತಿರುವ ದೃಶ್ಯ ಕಂಡುಬಂದಿದೆ. ಈ ಫೋಟೋ ಸಂಪೂರ್ಣ ನಕಲಿ. ದೀಪಿಕಾ ಪಡುಕೋಣೆ ಬೇಬಿ ಬಂಪ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಅವರ ಚಿತ್ರವನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ವಾಸ್ತವವಾಗಿ ದೀಪಿಕಾ ಸೆಪ್ಟೆಂಬರ್ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಅವರ ಅಭಿಮಾನಿಗಳು ತುಂಬಾ ಸಂತೋಷ ಮತ್ತು ಉತ್ಸುಕರಾಗಿದ್ದಾರೆ.