Deepika Padukone Emotion: RRR ಆಸ್ಕರ್ ಸಿಕ್ಕಿದ್ದು ಕಂಡು ಕಣ್ಣೀರು ಹಾಕಿದ ದೀಪಿಕಾ ಪಡುಕೋಣೆ, ಇದು ಭಾರತದ ತಾಕತ್ತು ಅಂದ ಜನರು.
Actress Deepika Padukone About RRR Naatu Naatu Song: ಎಂ.ಎಂ ಕೀರವಾಣಿ (M.M Keeravani) ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಆರ್.ಆರ್.ಆರ್ ಚಿತ್ರದ ನಾಟು ನಾಟು ಹಾಡು ಇದೀಗ ಆಸ್ಕರ್ ಪ್ರಶಸ್ತಿ ಪಡೆದಿದೆ.
ಈ ನಾಟು ನಾಟು ಹಾಡು ಹೊಸ ಹೊಸ ದಾಖಲೆ ಬರೆಯುತ್ತಿದೆ. 95 ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ಹಾಡು ಬೆಸ್ಟ್ ಒರಿಜಿನಲ್ ಸಾಂಗ್ (Best Original Song) ವಿಭಾಗದಲ್ಲಿ ಆಸ್ಕರ್ ಪಡೆದಿದೆ. ಈ ವೇಳೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಭಾವುಕರಾಗಿದ್ದಾರೆ.
ಆಸ್ಕರ್ ಪಡೆಯುತ್ತಿದ್ದ ವೇಳೆಯಲ್ಲಿ ನಟಿ ದೀಪಿಕಾ ಪಡುಕೋಣೆ ಭಾವುಕ
95 ನೇ ಶಾಲಿನ ಅಕಾಡೆಮಿ ಪ್ರಶಸ್ತಿಗಳಲ್ಲಿ ನಾಟು ನಾಟು ಹಾಡಿಗೆ ಡಾನ್ಸ್ ಮಾಡಿದ ವೇಳೆ ನಟಿ ದೀಪಿಕಾ ಪಡುಕೋಣೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಎಂ ಎಂ ಕೀರವಾಣಿ ವೇದಿಕೆಗೆ ಬಂದು ಪ್ರಶಸ್ತಿ ಸ್ವೀಕರಿಸುತಿದ್ದ ವೇಳೆ ನಟಿ ದೀಪಿಕಾ ಪಡುಕೋಣೆ ಭಾವುಕರಾಗಿದ್ದಾರೆ.
RRR ಸಿನಿಮಾ ತಂಡ ವೇದಿಕೆ ಮೇಲೆ ಹೋಗುತ್ತಿದ್ದಂತೆ ಕೆಳಗೆ ಕುಳಿದ್ದ ದೀಪಿಕಾ ಪಡುಕೋಣೆ ಕಣ್ಣೀರಿಟ್ಟಿದ್ದಾರೆ. ದೀಪಿಕಾ ಪಡುಕೋಣೆ ಭಾವುಕರಾದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.
RRR ತಂಡದಿಂದ ದೂರ ಕುಳಿತಿದ್ದರು ಎಸ್ ಎಸ್ ರಾಜಮೌಳಿ ಚಿತ್ರ ತಂಡಕ್ಕೆ ದೀಪಿಕಾ ಪಡುಕೋಣೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಕುಳಿತಲ್ಲೇ ದೇಶ ಗೆದ್ದ ಗೆಲುವಿನ ನಗೆ ಬೀರಿದ್ದಾರೆ.
ನಾಟು ನಾಟು ಹಾಡಿನ ಕುರಿತು ಮಾತನಾಡಿದ ದೀಪಿಕಾ
ನಾಟು ನಾಟು ಹಾಡಿನ ಕುರಿತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಾತನಾಡಿದ್ದಾರೆ. ಈ ಹಾಡು ಅದ್ಭುತವಾಗಿದೆ ಎಂದಿದ್ದಾರೆ.
ಕೋರಸ್, ಎಲೆಕ್ಟ್ರಿಫೈಯಿಂಗ್ ಬೀಟ್ಸ್ ಗಳು ಎಲ್ಲರನ್ನು ಸೆಳೆದಿದೆ ಎಂದು ನಾಟು ನಾಟು ಹಾಡಿನ ಬಗ್ಗೆ ದೀಪಿಕಾ ಪಡುಕೋಣೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಾನ್ಸ್ ಕೊರಿಯೋಗ್ರಾಫಿ ಮಾಡಿದವರನ್ನು ಕೂಡ ನಟಿ ಹೊಗಳಿದ್ದಾರೆ.