Deepika Padukone: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ದೀಪಿಕಾ ಪಡುಕೋಣೆ ವಾಚ್ ಬೆಲೆ, ವಿಶ್ವದ ದುಬಾರಿ ವಾಚ್.

ದೀಪಿಕಾ ಪಡುಕೋಣೆ ಅವರು ಧರಿಸುವ ವಾಚ್ ವಿಶ್ವದ ದುಬಾರಿ ವಾಚ್ ಗಳಲ್ಲಿ ಒಂದಾಗಿದೆ.

Actress Deepika Padukone Expensive Watch: ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಇದೀಗ ಸುದ್ದಿಯಲ್ಲಿದ್ದಾರೆ. ನಟಿ ದೀಪಿಕಾ ಪಡುಕೋಣೆ ಹೊಸ ಹೊಸ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಮೊನ್ನೆಯಷ್ಟೇ ನಟಿ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ನಟಿ ದೀಪಿಕಾ ಪಡುಕೋಣೆ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು ನಟಿಯ ವಾಚ್ ಎಲ್ಲರ ಗಮನ ಸೆಳೆದಿದೆ. ಇವರ ವಾಚ್ ಬೆಲೆಯ (Watch Price) ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇದೀಗ ದೀಪಿಕಾ ಪಡುಕೋಣೆ ಧರಿಸಿದ ವಾಚ್ ನ ಬೆಲೆ ಎಷ್ಟಿರಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Deepika Padukone Expensive Watch
Image Source: India Today

ದುಬಾರಿ ಬೆಲೆಯ ವಾಚ್ ಧರಿಸಿದ ದೀಪಿಕಾ ಪಡುಕೋಣೆ
ಭಾರತೀಯ ಚಿತ್ರರಂಗದ ಅನೇಕ ಸ್ಟಾರ್ ನಟ ನಟಿಯರು ಐಷಾರಾಮಿ ಜೀವನವನ್ನು ನಡೆಸುತ್ತಾರೆ ಅದರಲ್ಲೂ ನಟಿ ದೀಪಿಕಾ ಪಡುಕೋಣೆ ಅವರು ಬಾಲಿವುಡ್ ನಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು.

ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ 1,050 ಕ್ಕೂ ಅಧಿಕ ಕೋಟಿ ಗಳಿಸುವ ಮೂಲಕ ವಿಶ್ವದೆಲ್ಲೆಡೆ ಹೆಸರು ಮಾಡಿದೆ. ಈ ಚಿತ್ರ ದೀಪಿಕಾ ಅವರ ವೃತ್ತಿ ಜೀವನದಲ್ಲಿ ಮಹತ್ತರ ತಿರುವನ್ನು ನೀಡಿದೆ. ಸ್ಟಾರ್ ನಟ ನಟಿಯರು ತಮ್ಮ ಬಟ್ಟೆ ಮತ್ತು ಆಭರಣಕ್ಕೆ ವಿಶೇಷ ಗಮನ ವಹಿಸುತ್ತಾರೆ. ಇದೀಗ ನಟಿ ದೀಪಿಕಾ ಪಡುಕೋಣೆ ದುಬಾರಿ ವಾಚ್ ಧರಿಸಿದ್ದು ಎಲ್ಲರ ಗಮನ ಸೆಳೆದಿದೆ.

Deepika Padukone Expensive Watch
Image Source: Twitter

ವೈರಲ್ ಆಗಿದೆ ದೀಪಿಕಾ ಪಡುಕೋಣೆ ವಾಚ್ ಬೆಲೆ
ಇದೀಗ ದೀಪಿಕಾ ಪಡುಕೋಣೆ ಧರಿಸಿದ ವಾಚ್ ಬೆಲೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹೆಚ್ಚಾಗಿ ವಾಚ್ ನ ಬೆಲೆ ಸಾವಿರದಿಂದ ಐದು ಸಾವಿರ ಇರುತ್ತದೆ. ಆದರೆ ದೀಪಿಕಾ ಪಡುಕೋಣೆ ಧರಿಸಿದ ವಾಚ್ ಬೆಲೆಯಲ್ಲಿ 30 -40 ಸೈಟ್ ಖರೀದಿಸಬಹುದು.

Join Nadunudi News WhatsApp Group

ಚಿನ್ನದ ಬಣ್ಣದ ಬೆಲ್ಟ್ ಹಾಗೂ ಬಿಳಿ ಬಣ್ಣದ ಡಯಲ್ ಹೊಂದಿರುವ ದೀಪಿಕಾ ಅವರ ವಾಚ್ ಐಷಾರಾಮಿ ಕಾರ್ಟಿಯರ್ ಬ್ರಾಂಡ್ ಹೆಸರಿದ್ದಾಗಿದೆ. ಈ ವಾಚ್ ನ ಬೆಲೆ ಬರೋಬ್ಬರಿ ರೂ. 2.65 ಲಕ್ಷ ಆಗಿದೆ.

Deepika Padukone Expensive Watch
Image Source: Pipa news

Join Nadunudi News WhatsApp Group