Deepika Padukone Oscar: ಆಸ್ಕರ್ ನಲ್ಲಿ ದೀಪಿಕಾ ಪಡುಕೋಣೆಗೆ ಅವಮಾನ, ಬೇಸರ ಹೊರಹಾಕಿದ ಅಭಿಮಾನಿಗಳು.
Deepika Padukone In Oscar Award Function: ನಟಿ ದೀಪಿಕಾ ಪಡುಕೋಣೆ (Deepika Padukone) ಇದೀಗ ಸುದ್ದಿಯಲ್ಲಿದ್ದಾರೆ. ಅಮೇರಿಕಾದಲ್ಲಿ ನಡೆದ ಆಸ್ಕರ್ ವೇದಿಕೆಯಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ನಿರೂಪಣೆ ಮಾಡಿ ಸಾಕಷ್ಟು ಜನರ ಮನ ಗೆದ್ದಿದ್ದಾರೆ.
ಇದೀಗ ನಟಿ ದೀಪಿಕಾ ಪಡುಕೋಣೆ ಇದೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನಟಿ ದೀಪಿಕಾ ಪಡುಕೋಣೆ ನಟನೆ ಮಾತ್ರವಲ್ಲದೆ ನಿರೂಪಣೆ ಸಹ ಮಾಡಿ ಅಭಿಮಾಗಳ ಮೆಚ್ಚುಗೆಯನ್ನು ಪಡೆದುಕೊಂಡ ನಟಿಯಾಗಿದ್ದಾರೆ.
ಆಸ್ಕರ್ ವೇಧಿಕೆಯಲ್ಲಿ ನಟಿ ದೀಪಿಕಾ ಪಡುಕೋಣೆ ಅವರಿಗೆ ಅವಮಾನ
ನಟಿ ದೀಪಿಕಾ ಪಡುಕೋಣೆ ಆಸ್ಕರ್ ವೇಧಿಕೆ ಏರಿದ ಫೋಟೋ ವೈರಲ್ ಆಗಿದೆ. ಅನೇಕರು ಅವರನ್ನು ದೀಪಿಕಾ ಪಡುಕೋಣೆ ಎಂದು ಗುರುತಿಸಲೇ ಇಲ್ಲ. ಬದಲಿಗೆ ಬ್ರೆಜಿಲ್ ಮಾಡೆಲ್, ಡಿಸೈನರ್ ಕಾಮಿಲಾ ಆಲ್ಟ್ಸ್ ಮೆಕ್ಕಾನಹೆ ಹೆಸರನ್ನು ಸೇರಿಸಲಾಗಿದೆ.
ಆಸ್ಕರ್ ವೇದಿಕೆ ಏರಿದ್ದು ಕಾಮಿಲಾ ಆಲ್ಟ್ಸ್ ಎಂದು ಅನೇಕರು ತಪ್ಪಾಗಿ ಆರ್ಥ ಮಾಡಿಕೊಂಡಿದ್ದಾರೆ. ಇದರಿಂದ ದೀಪಿಕಾಗೆ ಅವಮಾನ ಆಗಿದೆ ಎಂದು ಅನೇಕರು ಆರೋಪಿಸಿದ್ದಾರೆ.
ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಹಾಡನ್ನು ಹೊಗಳಿದ ದೀಪಿಕಾ ಪಡುಕೋಣೆ
ಆಸ್ಕರ್ ವೇಧಿಕೆ ಮೇಲೆ ನಾಟು ನಾಟು ಹಾಡಿನ ಫಾರ್ಫಾಮೆನ್ಸ್ ಗು ಮೊದಲು ದೀಪಿಕಾ ಪಡುಕೋಣೆ ಅವರು ಈ ಹಾಡಿನ ಬಗ್ಗೆ ವಿವರಣೆ ನೀಡಿದ್ದರು. ಗ್ಲೋಬಲ್ ಸೆನ್ಸೇಷನಲ್ ಸೃಷ್ಟಿಸಿದ ಹಾಡು ನಾಟು ನಾಟು ಎಂದು ದೀಪಿಕಾ ಕರೆದಿದ್ದರು.
ಅವರು ನಗುಮುಖದಲ್ಲೇ ಈ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಆಸ್ಕರ್ ವೇದಿಕೆ ಏರುವಾಗ ಕಪ್ಪು ಬಣ್ಣದ ಗೌನ್ನಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಆದರೆ ಈಗ ಅವರನ್ನು ಬೇರೆ ಹೆಸರಲ್ಲಿ ಕರೆದಿದ್ದು ಅನೇಕರಿಗೆ ಬೇಸರ ಮೂಡಿಸಿದೆ.