Deepika Padukone Remuneration: ಪ್ರಭಾಸ್ ಜೊತೆ ನಟಿಸಲು ದುಬಾರಿ ಸಂಭಾವನೆ ಪಡೆದ ನಟಿ ದೀಪಿಕಾ ಪಡುಕೋಣೆ
Actress Deepika Padukone And Prabhas: ಬಾಲಿವುಡ್ ನ ನಟಿ ದೀಪಿಕಾ ಪಡುಕೋಣೆ (Deepika Padukone) ಇದೀಗ ತಮ್ಮ ಹೊಸ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ (Shah Rukh Khan) ಅಭಿನಯದ ಪಠಾಣ್ ಈಗಾಗಲೇ ವಿಶ್ವದೆಲ್ಲೆಡೆ 1028 ಕೋಟಿ ಹಣ ಗಳಿಸುವ ಮೂಲಕ 1000 ಕೋಟಿ ಕ್ಲಬ್ ಸೇರಿಕೊಂಡಿದೆ.
ಇದೀಗ ನಟಿ ದೀಪಿಕಾ ಪಡುಕೋಣೆ ಅವರ ಸಂಭಾವನೆಯ ಬಗ್ಗೆ ಒಂದಿಷ್ಟು ಮಾಹಿತಿ ಲಭಿಸಿದೆ. ನಟ ಪ್ರಭಾಸ್ (Prabhas) ಅಭಿನಯದ ಚಿತ್ರದಲ್ಲಿ ನಟಿಸಲು ದೀಪಿಕಾ ಪಡುಕೋಣೆ ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಗುತ್ತಿದೆ.
ದಕ್ಷಿಣದ ಪ್ಯಾನ್ ಇಂಡಿಯಾ ಸಿನಿಮಾ ಪ್ರಾಜೆಕ್ಟ್ ಕೆನಲ್ಲಿ ದೀಪಿಕಾ ಪಡುಕೋಣೆ
500 ಕೋಟಿ ಬಜೆಟ್ ನಲ್ಲಿ ದಕ್ಷಿಣ ಪ್ಯಾನ್ ಇಂಡಿಯಾ ಸಿನಿಮಾ ಪ್ರೊಜೆಕ್ ಕೆ (Project K Movie) ತಯಾರಾಗುತ್ತಿದೆ.
ಇನ್ನು ಈ ಚಿತ್ರದಲ್ಲಿ ನಟ ಪ್ರಭಾಸ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಕೂಡ ನಟಿಸಿದ್ದಾರೆ. ಪ್ರಭಾಸ್ ಜೊತೆ ನಟಿಸಲು ನಟಿ ದೀಪಿಕಾ ಪಡುಕೋಣೆ ದುಬಾರಿ ಸಂಭಾವನೆಯನ್ನು ಪಡೆದಿದ್ದಾರೆ ಎನ್ನುವ ವರದಿಯಾಗಿದೆ.
ಪ್ರಭಾಸ್ ಜೊತೆ ನಟಿಸಲು ದುಬಾರಿ ಸಂಭಾವನೆ ಪಡೆದ ದೀಪಿಕಾ ಪಡುಕೋಣೆ
ವರದಿಗಳ ಪ್ರಕಾರ ಪ್ರಭಾಸ್ ಅಭಿನಯದ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ನಟಿಸಲು ದೀಪಿಕಾ ಪಡುಕೋಣೆ ಸುಮಾರು 10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಪ್ರೊಜೆಕ್ಟ್ ಕೆ ಚಿತ್ರೀಕರಣ ನಡೆಯುತ್ತಿದೆ.
ಬಾಲಿವುಡ್ ನಲ್ಲಿ ಅತ್ಯಂತ ದುಬಾರಿ ಸಂಭಾವನೆ ಪಡೆಯುವ ನಟಿ ದೀಪಿಕಾ
ಇನ್ನು ದೀಪಿಕಾ ಪಡುಕೋಣೆ ಬಾಲಿವುಡ್ ನಲ್ಲಿ ಅತ್ಯಂತ ದುಬಾರಿ ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಹಿಂದಿ ಸಿನಿಮಾಗಳಿಗೆ ಹೋಲಿಸಿದರೆ ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಕಡಿಮೆಯಾಗಿದೆ. ಏಕೆಂದರೆ ಬಾಲಿವುಡ್ ನಲ್ಲಿ ನಟಿ ಸುಮಾರು 12 ರಿಂದ 15 ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ.