Ads By Google

Deepika Padukone: ದೀಪಿಕಾ ಬೆನ್ನಿನ ಮೇಲೆ ಹಳೆ ಪ್ರಿಯತಮನ ಟ್ಯಾಟೂ, ಟ್ಯಾಟೂ ಬಗ್ಗೆ ಸ್ಪಷ್ಟನೆ ಕೊಟ್ಟ ದೀಪಿಕಾ.

Deepika Padukone Tattoo

Image Source: FilmiBeat

Ads By Google

Deepika Padukone Tattoo: ಬಾಲಿವುಡ್ ನಲ್ಲಿ ಸೆಲೆಬ್ರಿಟಿಗಳ ಲವ್ ಸ್ಟೋರಿ ಹಾಗೂ ಬ್ರೇಕಪ್ ಸ್ಟೋರಿ ಹೆಚ್ಚಾಗಿರುತ್ತವೆ. ಇನ್ನು ಬಾಲಿವುಡ್ ಸ್ಟಾರ್ ನಟ ನಟಿಯರಾದ ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣಬೀರ್ ಕಪೂರ್ (Ranbir Kapoor) ಅವರ ಲವ್ ಸ್ಟೋರಿ ಕೆಲವು ವರ್ಷಗಳ ಹಿಂದೆ ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಸದ್ದು ಮಾಡಿತ್ತು.

ಇದೀಗ ದೀಪಿಕಾ ಪಡುಕೋಣೆ ತಮ್ಮ ಮಾಜಿ ಲವರ್ ನ ಹೆಸರಿನ ಟ್ಯಾಟೋ (Tattoo) ಬಗ್ಗೆ ಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Image Source: Times Of India

ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್
ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆ ಸಮಯದಲ್ಲಿ ಈ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಇನ್ನು ಯಾವುದೊ ಒಂದು ಕಾರಣಕ್ಕೆ ಈ ಜೋಡಿ ತಮ್ಮ ಲವ್ ಸ್ಟೋರಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಬ್ರೇಕ್ ಅಪ್ ನ ನಂತರ ದೀಪಿಕಾ ರಣಬೀರ್ ಸಿಂಗ್ ಅವರನ್ನು ಹಾಗೂ ರಣಬೀರ್ ಕಪೂರ್ ಆಲಿಯಾ ಭಟ್ ಅವರನ್ನು ಮದುವೆಯಾಗಿದ್ದರು. ಆದರೆ ರಣಬೀರ್ ಜೊತೆ ಬ್ರೇಕ್ ಆಗಿದ್ದರು ಕೂಡ ಆರ್ ಕೆ ಹೆಸರಿನ ಟ್ಯಾಟೋವನ್ನು ದೀಪಿಕಾ ಪಡುಕೋಣೆ ಇನ್ನು ಅಳಿಸಿಲ್ಲ. ಈ ಬಗ್ಗೆ ನಟಿ ದೀಪಿಕಾ ದಾಸ್ ಸ್ಪಷ್ಟನೆ ನೀಡಿದ್ದಾರೆ.

Image Source: India Today

RK ಟ್ಯಾಟೂ ಬಗ್ಗೆ ಮಾತನಾಡಿದ ದೀಪಿಕಾ ಪಡುಕೋಣೆ
ರಣಬೀರ್ ಕಪೂರ್ ಜೊತೆ ಪ್ರೀತಿಯಲ್ಲಿದ್ದಾಗ ದೀಪಿಕಾ ಆರ್ ಕೆ ಎಂದು ತಮ್ಮ ಕತ್ತಿನಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದರು. ಮದುವೆ ಆದ ಬಳಿಕ ಕೂಡ ನಟಿ ಟ್ಯಾಟೊವನ್ನು ತೆಗಿಸಿಲ್ಲ. ಈ ಬಗ್ಗೆ ನಟಿ 2013 ರ ಸಂದರ್ಶನದಲ್ಲಿ ಮಾತನಾಡಿದ್ದಾರೆ.

“ಟ್ಯಾಟೋ ಬಗ್ಗೆ ಯಾವುದೇ ವಿಷಾದವಿಲ್ಲ. ಆ ಸಮಯದಲ್ಲಿ ನಾನು ಸರಿಯಾಗಿ ಮಾಡಿದ್ದೇನೆ ಎಂದು ಭಾವಿಸಿದೆ. ಅದನ್ನು ತೆಗೆದು ಹಾಕುವ ಬಗ್ಗೆ ನಾನು ಇಂದಿಗೂ ಯೋಚಿಸಿಲ್ಲ. ಆದ್ರೆ ಮಾಧ್ಯಮಗಳು ನಿರಂತರವಾಗಿ ತೆಗೆದು ಹಾಕಿದ್ದೇನೆ ಎಂದು ಸುದ್ದಿ ಹರಡಿಸಿದ್ದರು. ಅದನ್ನು ತೆಗೆಯುವ ಯಾವುದೇ ಯೋಚನೆ ಇಲ್ಲ” ಎಂದು ನಟಿ ದೀಪಿಕಾ ಪಡುಕೋಣೆ ಉತ್ತರ ನೀಡಿದ್ದಾರೆ.

Image Source: FilmiBeat
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in