Ads By Google

Deepika Padukone Watch Pathan: ಮುಖ ಮುಚ್ಚಿಕೊಂಡು ಪಠಾಣ್ ಸಿನಿಮಾ ನೋಡಲು ಬಂದ ದೀಪಿಕಾ ಪಡುಕೋಣೆ.

deepika padukone watching pathan movie

Image Source: India Today

Ads By Google

Deepika Padukone Watch Pathan: ಬಾಲಿವುಡ್ ಕಿಂಗ್ ಶಾರುಖ್ ಖಾನ್ ಹಾಗು ದೀಪಿಕಾ ಪಡುಕೋಣೆ (Deepika Padukone) ನಟನೆಯ ಪಠಾಣ್ (Pathaan) ಸಿನಿಮಾ ಜನವರಿ 26 ರಂದು ಬಿಡುಗಡೆ ಆಗಿದ್ದು ಜನರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ.

ಶಾರುಖ್ ಖಾನ್ ಹಾಗು ದೀಪಿಕಾ ಪಡುಕೋಣೆಯ ನಟನೆಯನ್ನು ನೋಡಿದ ಅಭಿಮಾನಿಗಳು ಈ ಸಿನಿಮಾವನ್ನು ಹೊಗಳುತ್ತಿದ್ದಾರೆ. ಪಠಾಣ್ ಸಿನಿಮಾ ವಿಕ್ಸಿಸಲು ನಟಿ ದೀಪಿಕಾ ಪಡುಕೋಣೆ ಮಾರುವೇಷದಲ್ಲಿ ಚಿತ್ರಮಂದಿರಕ್ಕೆ ಹೋಗಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Image Source: India Today

 

 

 

 

ಪಠಾಣ್ ಚಿತ್ರ ನೋಡಲು ಮಾರುವೇಷದಲ್ಲಿ ಹೋದ ದೀಪಿಕಾ ಪಡುಕೋಣೆ
ಬಾಲಿವುಡ್ ಪಠಾಣ್ ಸಿನಿಮಾ ಬಿಡುಗಡೆಯಾಗಿ ಬಹುತೇಕ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಲ್ಲದೆ ಪಠಾಣ್ ಸಿನಿಮಾ ಈಗಾಗಲೇ ಸಾಕಷ್ಟು ಕಲೆಕ್ಷನ್ ಸಹ ಮಾಡಿದೆ.

ಪಠಾಣ್ ಸಿನಿಮಾ ನೋಡಲು ಸಿನಿಮಾದ ನಾಯಕಿ ದೀಪಿಕಾ ಪಡುಕೋಣೆ ಮಾರುವೇಷದಲ್ಲಿ ಚಿತ್ರಮಂದಿರಕ್ಕೆ ಹೋಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್ ಆಗಿದೆ.

Image Source: Times Of India

ದೀಪಿಕಾ ಪಡುಕೋಣೆ ಪಠಾಣ್ ಸಿನಿಮಾ
ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಂಬಿನೇಷನ್ ನ ಸಿನಿಮಾ ಪಠಾಣ್ ಅಭಿಮಾನಿಗಳ ಮನ ಗೆದ್ದಿದೆ. ಈ ಸಿನಿಮಾದ ಹಾಡು ಒಂದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದಕ್ಕೆ ವಿವಾದ ಆಗಿತ್ತು.ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ ಎಂದು ಹಲವಾರು ಜನರು ವಿರೋಧ ವ್ಯಕ್ತಪಡಿಸಿದ್ದರು.

ಸೆನ್ಸಾರ್ ಮಂಡಳಿ ಕೂಡ ಮಧ್ಯ ಪ್ರವೇಶ ಮಾಡಿತ್ತು. ಆದರೂ, ಕೇಸರಿ ಬಿಕಿನಿ ತಗೆಯುವಂತಹ ಸಾಹಸವನ್ನು ಚಿತ್ರತಂಡ ಮಾಡಿಲ್ಲ. ಆದರೂ ಸಹ ಪಠಾಣ್ ಸಿನಿಮಾ ಗೆದ್ದಿದೆ.

Image Source: India Today

ವೀಕ್ಷಕರಿಗೆ ಅಭಿನಂದನೆ ತಿಳಿಸಿದ ದೀಪಿಕಾ ಪಡುಕೋಣೆ
ನಟಿ ದೀಪಿಕಾ ಪಡುಕೋಣೆ ಅಂಗರಕ್ಷಕರೊಂದಿಗೆ ಥಿಯೇಟರ್ ಗೆ ಬಂದಿದ್ದಾರೆ. ಮುಖ ಕವರ್ ಮಾಡಿಕೊಂಡು ಪ್ರೇಕ್ಷಕರ ಮಧ್ಯೆ ಸಿನಿಮಾ ನೋಡಿದ್ದಾರೆ. ಆ ಅನುಭವವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರೇಕ್ಷಕರು ಸಿನಿಮಾ ಗೆಲ್ಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಥಿಯೇಟರ್ ನಲ್ಲಿ ನೋಡುಗರು ಸಂಭ್ರಮಿಸುತ್ತಿರುವ ರೀತಿ ಕಂಡು ತುಂಬಾ ಖುಷಿಯಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

Image Source: India Today
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field