Deepika Padukone Workout Vedio: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾದ ನಟಿ ದೀಪಿಕಾ ಪಡುಕೋಣೆ (Deepika Padukone) ಇದೀಗ ಸುದ್ದಿಯಲ್ಲಿದ್ದಾರೆ. ನಟಿ ದೀಪಿಕಾ ಪಡುಕೋಣೆ ಇವೆಂಟ್ ನಲ್ಲಿ ಧರಿಸಿದ ಉಡುಗೆ ಹಾಗೂ ನಿರೂಪಣೆ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನಲ್ ಮೂಡಿಸುತ್ತಿದ್ದಾರೆ.
ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಿದ ನಟಿಯ ಫೋಟೋಗಳು ಹಾಗೂ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ದೀಪಿಕಾ ಪಡುಕೋಣೆ ವರ್ಕೌಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದೀಪಿಕಾ ಪಡುಕೋಣೆ ವರ್ಕೌಟ್ ವಿಡಿಯೋ ವೈರಲ್
ದೀಪಿಕಾ ಪಡುಕೋಣೆ ಯಾಸ್ಮಿನ್ ಕರಾಚಿವಾಲ ವಾಲಾ ಅವರು ಆಸ್ಕರ್ ಗೆ ತಯಾರಾಗುವ ಮೊದಲು ದೀಪಿಕಾ ಬೆಳಿಗ್ಗೆ 6 :30 ಕ್ಕೆ ಹೇಗೆ ವರ್ಕೌಟ್ ಮಾಡಿದ್ದಾರೆ ಎಂಬುವುದನ್ನು ಬಹಿರಂಗಪಡಿಸಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈಟ್ ಕಲರ್ ಶರ್ಟ್ ಹಾಗೂ ಬ್ಲಾಕ್ ಪ್ಯಾನ್ ಧರಿಸಿದ ನಟಿ ದೀಪಿಕಾ ಅವರ ವರ್ಕೌಟ್ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ವರ್ಕೌಟ್ ಮಾಡುತ್ತಿರುವ ವಿಡಿಯೋಗೆ ನಾಟು ನಾಟು ಹಾಡು ಹಿನ್ನೆಲೆ ಗಾಯನದಲ್ಲಿ ಸೇರಿಕೊಂಡಿದೆ. ಇದೀಗ ನಟಿ ದೀಪಿಕಾ ಪಡುಕೋಣೆ ಅವರ ವರ್ಕೌಟ್ ವಿಡಿಯೋ ಬಾರಿ ವೈರಲ್ ಆಗುತ್ತಿದೆ. ಅಭಿಮಾನಿಗಳು ನಟಿಯ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ದೀಪಿಕಾ ವರ್ಕೌಟ್ ವಿಡಿಯೋ ಹಂಚಿಕೊಂಡ ಯಾಸ್ಮಿನ್
ಆಸ್ಕರ್ ಗಿಂತ ಮೊದಲು ವರ್ಕೌಟ್ ಅಂತೂ ಮಾಡಲೇ ಬೇಕು. ಆಸ್ಕರ್ ಗೆ ತಯಾರಾಗುವಾಗ ಮೊದಲು ದೀಪಿಕಾ ಪಡುಕೋಣೆ ಅವರ ಬೆಳಿಗ್ಗೆ 6:30 ರ ವರ್ಕೌಟ್ ಒಂದು ನೋಟ ಹಂಚಿಕೊಳ್ಳಲಾಗುತ್ತಿದೆ.
ಅವರ ಜೀನ್ ಗಳ ಜೊತೆಗೆ ಅವರ ಸೌಂದರ್ಯದ ರಹಸ್ಯವೆಂದರೆ ಅವರ ಶಿಸ್ತು, ಸಮರ್ಪಣೆ ಮತ್ತು ಸಮತೋಲಿನ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಬದ್ಧತೆ. ಇದು ಆಸ್ಕರ್ ಪ್ರಶಸ್ತಿಗಾಗಿ ಆಕೆಗೆ ತರಬೇತಿ ನೀಡುವ ಅದ್ಬುತ ಪ್ರಯಾಣವಾಗಿತು. ದೀಪಿಕಾ ವರ್ಕೌಟ್ ಮಾಡುವ ಹೆಚ್ಚಿನ ವಿಡಿಯೋ ನೀವು ನೋಡಲು ಬಯಸುವಿರಾ? ಎಂದು ಯಾಸ್ಮಿನ್ ತಮ್ಮ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.