High Court: ಮದುವೆಯಾಗುವ ಎಲ್ಲಾ ಪುರುಷರಿಗೆ ಹೊಸ ನಿಯಮ, ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟ.
ಮದುವೆಯಾಗುವ ಪುರುಷರಿಗೆ ಹೊಸ ಕಾನೂನು ಜಾರಿಗೆ.
Delhi High Court New Judgement: ಮದುವೆ ಅನ್ನುವುದು ಜೀವನದಲ್ಲಿ ಬರುವ ಒಂದು ಸುಂದರವಾದ ಕ್ಷಣ ಎಂದು ಹೇಳಬಹುದು. ಹೌದು ಸಾಮಾನ್ಯವಾಗಿ ಎಲ್ಲರಿಗೂ ಕೂಡ ಮದುವೆಯ ಬಗ್ಗೆ ಹೆಚ್ಚಿನ ಆಸೆ ಇರುತ್ತದೆ ಎಂದು ಹೇಳಿದರೆ ತಪ್ಪಗಲ್ಲ. ಇನ್ನು ಮದುವೆಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಹಲವು ನಿಯಮಗಳು ಇದ್ದು ಅದನ್ನ ಸರಿಯಾಗಿ ಅರಿತುಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು.
ಮದುವೆ ನಂತರ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದ್ದು ಜನರು ಮದುವೆಯ ನಂತರ ಆಗುವ ಸಮಸ್ಯೆಗಳನ್ನ ಎದುರಿಸಲು ಶಕ್ತರಾಗಿರಬೇಕು. ಇನ್ನು ಮದುವೆಯ ನಂತರ ಹೆಣ್ಣು ಮಗಳು ಗಂಡನ ಮನೆಗೆ ಹೋಗಿ ಜೀವನ ಮಾಡುವುದು ಸರ್ವೇ ಸಾಮಾನ್ಯ ಆಗಿದೆ. ಇನ್ನು ಕೆಲವು ಕಡೆ ಯುವಕರು ಮದುವೆಯ ನಂತರ ಹೆಂಡತಿಯ ಮನೆಯಲ್ಲಿ ಮನೆ ಅಳಿಯನಾಗಿ ಇರುವುದನ್ನ ಕೂಡ ನಾವು ನೋಡಬಹುದು.
ಮನೆ ಅಳಿಯನಾಗಿ ಇರುತ್ತಾರೆ ಪುರುಷರು
ಹೌದು ಭಾರತದ ಸಾಕಷ್ಟು ಪುರುಷರು ಹೆಂಡತಿಯ ಮನೆಯಲ್ಲಿ ಮನೆ ಅಳಿಯನಾಗಿ ಜೀವನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಕೆಲವು ಅನಿವಾರ್ಯ ಕಾರಣಗಳಿಂದ ಪುರುಷರು ಹೆಂಡತಿಯ ಮನೆಯಲ್ಲಿ ಜೀವನ ಮಾಡಬೇಕಾಗುತ್ತದೆ ಪರಿಸ್ಥಿತಿ ಬರುತ್ತದೆ ಎಂದು ಹೇಳಬಹುದು. ಇನ್ನು ಮದುವೆಯಾಗುವ ಎಲ್ಲಾ ಪುರುಷರಿಗೆ ಹೈಕೋರ್ಟ್ ಇನ್ನೊಂದು ಹೊಸ ತೀರ್ಪು ಪ್ರಕಟ ಮಾಡಿದ್ದು ಇದು ಎಲ್ಲಾ ಪುರುಷರಿಗೂ ಅನ್ವಯ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.
ಮದುವೆಯಾಗುವ ಪುರುಷರಿಗೆ ಹೊಸ ಕಾನೂನು
ಹೌದು ಮದುವೆಯಾಗುವ ಪುರುಷರಿಗೆ ಹೊಸ ಕಾನೂನು ಘೋಷಣೆ ಮಾಡಿರುವ ಹೈಕೋರ್ಟ್ ಇಚ್ಛೆಗೆ ವಿರುದ್ಧವಾಗಿ ಪುರುಷರು ಮನೆ ಅಳಿಯನಾಗಿ ಇರುವ ಹಾಗಿಲ್ಲ ಎಂದು ಆದೇಶ ಹೊರಡಿಸಿದೆ. ಹೌದು ಪತ್ನಿ ಅಥವಾ ಪತ್ನಿಯ ಮನೆಯವರು ಪುರುಷನಿಗೆ ಮನೆ ಅಳಿಯನಾಗಿ ಇರುವಂತೆ ಒತ್ತಾಯ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಆದೇಶವನ್ನ ಹೊರಡಿಸಿದೆ. ವ್ಯಕ್ತಿ ತನ್ನ ಸ್ವಂತ ಕುಟುಂಬವನ್ನ ತೊರೆದು ಮನೆ ಅಳಿಯನಾಗಿ ಬದುಕುವಂತೆ ಒತ್ತಾಯ ಮಾಡುವುದು ಕ್ರೌರ್ಯಕ್ಕೆ ಸಮ ಎಂದು ದೆಹಲಿ ಹೈಕೋರ್ಟ್ ಆದೇಶವನ್ನ ಹೊರಡಿಸಿದೆ.
ಆದೇಶ ಹೊರಡಿಸಿದ ದೆಹಲಿ ಹೈಕೋರ್ಟ್
ಮದುವೆಯ ನಂತರ ಪುರುಷರಿಗೆ ಸ್ವಂತ ಮನೆಯನ್ನ ತೊರೆಯುವ ಇಚ್ಛೆ ಇಲ್ಲದೆ ಇದ್ದರೂ ಅವರನ್ನ ಮನೆಯಲ್ಲಿ ಇರುವಂತೆ ಒತ್ತಾಯ ಮಾಡುವುದು ಕ್ರೌರ್ಯಕ್ಕೆ ಸಮ ಎಂದು ಆದೇಶ ಹೊರಡಿಸಿದ ಕೋರ್ಟ್ ಪುರುಷರಿಗೆ ಇಚ್ಛೆ ಇದ್ದ ರೆ ಮಾತ್ರ ಮನೆ ಅಳಿಯನಾಗಿ ಇರಬಹುದು ಎಂದು ಹೇಳಿದೆ. ಈ ನಿಯಮ ಎಲ್ಲಾ ಪುರುಷರಿಗೂ ಅನ್ವಯ ಆಗುತ್ತದೆ ಎಂದು ಕೋರ್ಟ್ ತನ್ನ ಹೇಳಿಕೆಯಲ್ಲಿ ನೀಡಿದೆ ಎಂದು ಹೇಳಬಹುದು.