Wakeup Alarm: ರೈಲಿನಲ್ಲಿ ಹೆಚ್ಚು ನಿದ್ರೆ ಮಾಡುವ ಜನರಿಗೆ ಗುಡ್ ನ್ಯೂಸ್, ಹೊಸ ಸೇವೆ ಆರಂಭಿಸಿದ ರೈಲ್ವೆ ಇಲಾಖೆ.
ರೈಲಿನಲ್ಲಿ ನಿದ್ರೆ ಮಾಡುವ ಜನರಿಗಾಗಿ ಹೊಸ ಸೇವೆಯನ್ನ ಪರಿಚಯಿಸಿದೆ ಭಾರತೀಯ ರೈಲ್ವೆ.
Destination Alert Wakeup Alarm In Train: ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ (Indian Railway) ನಿಯಮಗಳು ಸಾಕಷ್ಟು ಬದಲಾಗಿವೆ. ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕಾಗಿ ಸಾಕಷ್ಟು ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದಾರೆ.
ಪ್ರತಿ ನಿತ್ಯ ರೈಲುಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ರಾತ್ರಿ ಪ್ರಯಾಣ ಮಾಡುವವರು ರೈಲು ಪ್ರಯಾಣದ ಆಯ್ಕೆಯನ್ನು ಮಾಡುತ್ತಾರೆ. ರೈಲು ಪ್ರಯಾಣವು ಹೆಚ್ಚು ಆರಾಮದಾಯಕ ಹಾಗೂ ಸುರಕ್ಷಿತವಾಗಿದೆ.
ಪ್ರಯಾಣಿಕರಿಗಾಗಿ ರೈಲುಗಳಲ್ಲಿಹೊಸ ಸೌಲಭ್ಯ
ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿವೆ. ಈಗಾಗಲೇ ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ರೈಲ್ವೆ ಟಿಕೆಟ್ ಹಾಗೂ ಆಸನದ ವ್ಯವಸ್ಥೆಗಳಲ್ಲಿ ಸಾಕಷ್ಟು ರೀತಿಯ ಸೌಲಭ್ಯವನ್ನು ನೀಡುತ್ತಿದೆ. ಇದೀಗ ರೈಲು ಪ್ರಯಾಣದಲ್ಲಿ ನಿದ್ರಿಸುವವರಿಗಾಗಿ ಹೊಸ ಸೌಲಭ್ಯವನ್ನು ರೈಲ್ವೆ ಇಲಾಖೆ ಜಾರಿಗೊಳಿಸಿದೆ.
ರೈಲಿನಲ್ಲಿ ಹೆಚ್ಚು ನಿದ್ರೆ ಮಾಡುವ ಜನರಿಗೆ ಗುಡ್ ನ್ಯೂಸ್
ಇನ್ನು ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಪ್ರಯಾಣಿಕರು ಮಲಗಿದಾಗ ಅವರು ಇಳಿಯುವ ಸ್ಥಳ ಯಾವಾಗ ಬರುತ್ತದೆ ಎನ್ನುವ ಭೀತಿಯಲ್ಲಿಯೇ ಮಲಗುತ್ತಾರೆ. ಹೀಗಾಗಿ ರೈಲು ಪ್ರಯಾಣಿಕರು ಆರಾಮಾಗಿ ನಿದ್ರಿಸಲಿ ಎನ್ನುವ ಕಾರಣ ರೈಲುಗಳಲ್ಲಿ ಗಮ್ಯಸ್ಥಾನದ ಎಚ್ಚರಗೊಳ್ಳುವ ಎಚ್ಚರಿಕೆ ಹೆಸರಿನ ವಿಶೇಷ ಸೇವೆಯನ್ನು ನೀಡಲಾಗುತ್ತದೆ.
ಪ್ರಯಾಣಿಕರು 139 ಸಂಖ್ಯೆಯ ವಿಚಾರಣಾ ವ್ಯವಸ್ಥೆಯಲ್ಲಿ ಎಚ್ಚರಿಕೆಯ ಸಹಾಯವನ್ನು ಪಡೆಯಬಹುದು. ರಾತ್ರಿ 11 ರಿಂದ ಬೆಳಿಗ್ಗೆ 7 ರ ವರೆಗೆ ಈ ಸೇವೆ ಲಭ್ಯವಿದೆ.
ಡೆಸ್ಟಿನೇಷನ್ ಅಲರ್ಟ್ ವೇಕಪ್ ಅಲಾರಾಂ
ರೈಲ್ವೆ ಇಲಾಖೆ ಡೆಸ್ಟಿನೇಷನ್ ಅಲರ್ಟ್ ವೇಕಪ್ ಅಲಾರಾಂ ಸೇವೆಯನ್ನು ಆರಂಭಿಸಿದೆ. IRCTC ಸಹಾಯವಾಣಿ 139 ಕ್ಕೆ ಕರೆ ಮಾಡಿ ಭಾಷೆಯನ್ನು ಆಯ್ಕೆ ಮಾಡಬೇಕು.ಗಮ್ಯಸ್ಥಾನದ ಎಚ್ಚರಿಕೆಗಾಗಿ ನೀವು ಮೊದಲು ಸಂಖ್ಯೆ 7 ಮತ್ತು 2 ಅನ್ನು ಆಯ್ಕೆ ಮಾಡಿ ನಂತರ 10 ಅಂಕಿಯ PNR ಅನ್ನು ನಮೂದಿಸಿ, ಖಚಿತಪಡಿಸಲು 1 ಅನ್ನು ಡಯಲ್ ಮಾಡಿದರೆ ನಿಮ್ಮ ನಿಲ್ದಾಣದ ಆಗಮನದ 20 ನಿಮಿಷಗಳ ಮೊದಲು ಎಚ್ಚರಗೊಳ್ಳುವ ಎಚ್ಚರಿಕೆಯನ್ನು ನೀವು ಪಡೆಯಬಹುದು.