Ads By Google

Yuva: ಇಷ್ಟು ಓದಿದ್ದೇನೆ ಎಂದು ಸುಳ್ಳು ಹೇಳಿ ಮದುವೆಯಾದ ಯುವ, ಅಷ್ಟಕ್ಕೂ ಯುವ ಓದಿದ್ದೆಷ್ಟು ಗೊತ್ತಾ…?

yuva rajkumar education details

Image Credit: Original Source

Ads By Google

Sridevi Byrappa Father About Yuva Rajkumar And Sridevi Divorce: ನಟ ಯುವರಾಜ್ ಕುಮಾರ್ ತಮ್ಮ ದಾಂಪತ್ಯ ಜೀವನದಿಂದ ದೂರವಾಗುವ ನಿರ್ಧಾರ ಕೈಗೊಂಡಿದ್ದಾರೆ. ಸದ್ಯ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಅವರ ವಿಚ್ಛೇದನದ ಸುದ್ದಿ ಬಾರಿ ವೈರಲ್ ಆಗುತ್ತಿದೆ. ಯುವ ತಮ್ಮ ಪತ್ನಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ ಎನ್ನಬಹುದು.

ಜೂನ್ 6 ರಂದು ಯುವ ರಾಜ್ ಕುಮಾರ್ ತಮ್ಮ ಪತ್ನಿ ಶ್ರೀದೇವಿಗೆ ವಿಚ್ಛೇದನ ನೀಡುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಶ್ರೀದೇವಿಗೂ ವಿಚ್ಛೇದನ ನೋಟಿಸ್ ಕಳುಹಿಸಲಾಗಿದೆ. ಯುವರಾಜ್ ಕುಮಾರ್ ತಮ್ಮ ಪತ್ನಿಗೆ ವಿರುದ್ಧ ಆರೋಪಗಳನ್ನು ಮಾಡಿದ್ದು, ಯುವ ಮಾಡುತ್ತಿರುವ ಆರೋಪಗಳಿಗೆ ಶ್ರೀದೇವಿ ಕೂಡ ಉತ್ತರ ನೀಡಿದ್ದಾರೆ. ಇದೆಲ್ಲದರ ನಡುವೆ ಶ್ರೀದೇವಿ ಅವರ ತಂದೆ ಭೈರಪ್ಪ ಅವರು ವಿಚ್ಛೇದನದ ವಿಚಾರವಾಗಿ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

Image Credit: News 18

ಯುವರಾಜ್ ಕುಮಾರ್- ಶ್ರೀದೇವಿ ವಿಚ್ಛೇದನದ ಬಗ್ಗೆ ಭೈರಪ್ಪ ಅಚ್ಚರಿಯ ಹೇಳಿಕೆ
ಶ್ರೀದೇವಿ ಅವರ ತಂದೆ ಅಳಿಯ ಯುವ ಮತ್ತು ಆತನ ಪೋಷಕರಾದ ರಾಘವೇಂದ್ರ ರಾಜ್‌ ಕುಮಾರ್ ಮತ್ತು ಮಂಗಳಾ ವಿರುದ್ಧ ಆರೋಪ ಮಾಡಿದ್ದಾರೆ. ಯುವ-ಶ್ರೀದೇವಿ ದಾಂಪತ್ಯ ಕಲಹದ ವಿಚಾರದಲ್ಲಿ ಅಳಿಯನ ತಪ್ಪೇನೂ ಇಲ್ಲ. ಇದಕ್ಕೆಲ್ಲಾ ತಂದೆ-ತಾಯಿಯೇ ಕಾರಣ ಎಂದು ಬೈರಪ್ಪ ಹೇಳಿದರು. ಸಂದರ್ಶನದಲ್ಲಿ ಅವರು ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

ಎಲ್ಲವೂ ಚೆನ್ನಾಗಿತ್ತು. ಆಗಾಗ ನಮ್ಮ ಮನೆಗೆ ತಂದೆ-ತಾಯಿ ಜೊತೆ ಬರುತ್ತಿದ್ದ. ಈ ರೀತಿ ಮನೆಯಲ್ಲಿ ನಡೆದ ಘರ್ಷಣೆಯ ಬಗ್ಗೆ ನನ್ನ ಮಗಳು ಯಾವತ್ತೂ ನನಗೆ ಹೇಳಿಲ್ಲ ಎಂದರು. ಮದುವೆಯಾಗಿ 5 ವರ್ಷಗಳಾಗಿವೆ. ಇಬ್ಬರ ನಡುವೆ ಹೊಂದಾಣಿಕೆ ಇತ್ತು. ಆದರೆ ಮನೆಯವರ ಕಿರುಕುಳದ ಬಗ್ಗೆ ಮಗಳು ಹೇಳಿರಲಿಲ್ಲ. ನನ್ನ ಮಗಳು US ನಲ್ಲಿದ್ದಾಳೆ. ಅಲ್ಲಿಗೆ ಹೋಗಿ ಒಂದು ವರ್ಷವಾಯಿತು, ಶಿಕ್ಷಣ ಮುಗಿಯಿತು. ಇನ್ನೇನು ಬರಬಹುದು. ನವೆಂಬರ್‌ ನಲ್ಲಿ ಮಗಳು ಬಂದಿದ್ದಳು. ಆಗ ಅವರ ಮನೆಯಲ್ಲಿ ಗಲಾಟೆ ನಡೆದಿತ್ತು. ನಂತರ ಅಳಿಯ ಬಂದು ಏನು ಮಾತನಾಡಲಿಲ್ಲ. ನನ್ನ ಮಗಳಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ.

ಅವಳ ಬಗ್ಗೆ ಸಿಲ್ಲಿ ಸಿಲ್ಲಿ ಮಾತನಾಡುವುದು, ಬೇಡದ ಮಾತುಗಳನ್ನು ಹೇಳುತ್ತಿದ್ದರು. ಇತ್ತೀಚೆಗೆ ನನ್ನ ಮಗಳು ಅಳುತ್ತಾ ಫೋನ್ ಮಾಡಿದಾಗ ಹೇಳಿದ್ದಳು. ಗಂಡ, ಅತ್ತೆ, ಮಾವ ಎಲ್ಲರಿಂದಲೂ ಸಮಸ್ಯೆ ಇದೆ ಎಂದಿದ್ದಳು. ರಾಘವೇಂದ್ರ ರಾಜ್‌ ಕುಮಾರ್ ಮತ್ತು ಯುವ ತನ್ನ ಮಗಳನ್ನು ಬಲವಂತವಾಗಿ ವಿದೇಶಕ್ಕೆ ಓದಿಸಲು ಕಳುಹಿಸಿದ್ದಾರೆ. ಆ ನಂತರ ವಿಚ್ಛೇದನದ ವಿಚಾರ ಶುರುವಾಗಿದೆ ಎಂದಿದ್ದಾರೆ.

ಇಷ್ಟು ಓದಿದ್ದೇನೆ ಎಂದು ಸುಳ್ಳು ಹೇಳಿ ಮದುವೆಯಾದ ಯುವ
ವಿಚ್ಛೇದನದ ಅರ್ಜಿಗೆ ನನ್ನ ಮಗಳು ಪ್ರತಿಕ್ರಿಯಿಸಲಿ, ಕಾನೂನು ಹೋರಾಟ ಮಾಡೋಣ ಎಂದರು. ನನ್ನ ಮಗಳು ಈಗಲೂ ಒಟ್ಟಿಗೆ ಬಾಳುವ ಮನಸ್ಸು ಮಾಡಿದ್ದಾಳೆ. ನಮಗೂ ಅದು ಬೇಕು. ಆದರೆ ಮಗಳಿಗೆ ಕಿರುಕುಳ ನೀಡುವುದು ಸರಿಯಲ್ಲ. ಮದುವೆಯಾದ ಮರುದಿನದಿಂದಲೇ ಕಿರುಕುಳ ಶುರುವಾಗಿದೆ ಎಂದು ಹೇಳಿದ್ದಾರೇ. ಇಬ್ಬರೂ ಪ್ರೀತಿಸಿ ಮದುವೆಯಾದರು.

ರಾಘಣ್ಣನ ಮನೆಯವರು ಬಂದು ಮದುವೆ ಮಾಡುವಂತೆ ಒತ್ತಾಯಿಸಿದರು. ಯುವ ರಾಜ್‌ ಕುಮಾರ್‌ ಗೆ ಸಿನಿಮಾ ಅವಕಾಶಗಳು ಬರಲು ನನ್ನ ಮಗಳೇ ಕಾರಣ. ನನ್ನ ಮಗಳೇ ಅವನನ್ನು ಬಾಂಬೆಯಲ್ಲಿ ಇಟ್ಟುಕೊಂಡು ತರಬೇತಿ ಕೊಡಿಸಿದ್ದಳು. ತಾನು ಬಿಇ ಓದಿದ್ದೇನೆ ಎಂದು ಹೇಳಿದ್ದರು. ಇವರು SSLC ಓದಿದ್ದಾರೆ. ಆದರೂ ನನ್ನ ಮಗಳನ್ನು ಮದುವೆ ಮಾಡಿಕೊಟ್ಟೆ. ಯುವ ನನ್ನೊಂದಿಗೆ ಚೆನ್ನಾಗಿದ್ದರು. ಗೌರವ ನೀಡುತ್ತಿದ್ದರು. ಅವರ ತಂದೆ ತಾಯಿಯರದ್ದು ಸಂಬಂಧದ ವಿಚಾರದಲ್ಲಿ ಎಲ್ಲ ನಾಟಕ ಎಂದಿದ್ದಾರೆ.

Image Credit: Zee News
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in