Bank Clinic: ಬ್ಯಾಂಕ್ ಗ್ರಾಹಕರಿಗಾಗಿ ಜಾರಿಗೆ ಬಂದು ಬ್ಯಾಕ್ ಕ್ಲಿನಿಕ್, ಈಗ ಸುಲಭವಾಗಿ ದೂರು ನೀಡಿ.

ಬ್ಯಾಂಕ್ ಗ್ರಾಹಕರ ದೂರುಗಳಿಗೆ ಸ್ಪಂಧಿಸಲು ಈಗ ಬ್ಯಾಂಕ್ ಕ್ಲಿನಿಕ್ ಸ್ಥಾಪಿಸಲಾಗುತ್ತಿದೆ.

Bank Clinic Facility: ದೇಶದ ಪ್ರತಿಷ್ಠಿತ ಬ್ಯಾಂಕ್ (Bank) ಗಳು ತನ್ನ ಗ್ರಾಹಕರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಇತ್ತೀಚಿಗೆ ಅನೇಕ ಬ್ಯಾಂಕ್ ಗಳು ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿದೆ. ನಿಯಮಗಳ ಬದಲಾವಣೆಯ ಜೊತೆಗೆ ಸಾಕಷ್ಟು ಸೌಲಭ್ಯಗಳನ್ನು ಕೂಡ ಗ್ರಾಹಕರಿಗೆ ಒದಗಿಸಿದೆ. ಇದೀಗ ಈ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ಒದಗಿಸಿದೆ. 

Bank Clinic Facility
Image Source: DNA India

ಬ್ಯಾಂಕ್ ಗ್ರಾಹಕರಿಗಾಗಿ ಜಾರಿಗೆ ಬಂದು ಬ್ಯಾಂಕ್ ಕ್ಲಿನಿಕ್
ಇದೀಗ AIBEA ಬ್ಯಾಂಕ್ ಗ್ರಾಹಕರಿಗೆ ಸಹಾಯವಾಗಲು ಹೊಸ ಸೌಲಭ್ಯವನ್ನು ಒದಗಿಸಿದೆ. ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ಗ್ರಾಹಕರಿಗೆ ಸಹಾಯ ಮಾಡಲು ಆನ್ಲೈನ್ ಬ್ಯಾಂಕ್ ಕ್ಲಿನಿಕ್ ಅನ್ನು ಸ್ಥಾಪಿಸಲು ಯೋಜಿಸಿದೆ. ಈ ಸೌಲಭ್ಯವು ಗ್ರಾಹಕರಿಗೆ ಸಾಕಷ್ಟು ಅನುಕೂಲವನ್ನು ನೀಡಲಿದೆ.

Bank Clinic Facility
Image Source: India Today

ಬ್ಯಾಂಕ್ ಕ್ಲಿನಿಕ್ ನಿಂದಾಗುವ ಪ್ರಯೋಜನ
ಎಐಬಿಇಎ ತಂಡವು ಬ್ಯಾಂಕ್ ಕ್ಲಿನಿಕ್ ನಲ್ಲಿರುವ ಗ್ರಾಹಕರ ದೂರಿನ ಕುರಿತು ಸಂಬಂಧಪಟ್ಟ ಬ್ಯಾಂಕ್ ನೊಂದಿಗೆ ಮಾತನಾಡುತ್ತದೆ ಮತ್ತು ದೂರನ್ನು ಸಮಯಕ್ಕೆ ಅನುಗುಣವಾಗಿ ಪರಿಹರಿಸಲು ಸಹಾಯ ಮಾಡುತ್ತದೆ.

ಬ್ಯಾಂಕ್ ಗ್ರಾಹಕರ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಪರಿಹರಿಸುವುದು ಈ ಚಿಕಿತ್ಸಾಲಯದ ಉದ್ದೇಶವಾಗಿದೆ. ಬ್ಯಾಂಕ್ ನ ಸಮಸ್ಯೆಯ ಪರಿಹಾರವನ್ನು ವೇಗಗೊಳಿಸಲು, ಬ್ಯಾಂಕ್ ಗ್ರಾಹಕರು ತಮ್ಮ ದೂರಿನೊಂದಿಗೆ ಬ್ಯಾಂಕ್ ಕ್ಲಿನಿಕ್ ಗೆ ಬಂದ ತಕ್ಷಣ, ಅವರ ದೂರನ್ನು ಇತ್ಯರ್ಥಕ್ಕಾಗಿ ಸಂಬಂಧಿಸಿದ ಬ್ಯಾಂಕ್ ಗೆ ರವಾನಿಸಲಾಗುತ್ತದೆ.

Bank Clinic Facility
Image Source: Adda247

ಬ್ಯಾಂಕ್ ಸಿಬ್ಬಂದಿಯ ವರ್ತನೆಯಲ್ಲಿ ಏನಾದರು ತೊಂದರೆಯಾದರೆ ಅದನ್ನು ಸರಿಪಡಿಸಲಾಗುವುದು ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಗಳು ಹೆಚ್ಚಿನ ಶುಲ್ಕ ವಿಧಿಸುವ ಬಗ್ಗೆ ಸಾಕಷ್ಟು ದೂರುಗಳು ಕಂಡುಬಂದಿದೆ. ಬ್ಯಾಂಕ್ ಗ್ರಾಹಕರ ದೂರುಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಬ್ಯಾಂಕಿಂಗ್ ಒಂಬುಡ್ಸ್‌ಮನ್ ಯೋಜನೆಯನ್ನು ಪ್ರಾರಂಭಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group