Pawan Kalyan: ಪವನ್ ಕಲ್ಯಾಣ್ ಮೊದಲ ಪತ್ನಿ ಯಾರು ಮತ್ತು ಈಗ ಎಲ್ಲಿದ್ದಾರೆ, 200 ಕೋಟಿ ಆಸ್ತಿ ಒಡತಿ.

ನಟ ಪವನ್ ಕಲ್ಯಾಣ್ ಅವರ ಮೊದಲ ಹೆಂಡತಿ ಕೋಟ್ಯಧಿಪತಿಯಾಗಿದ್ದು ಅವರು ಪವನ್ ಕಲ್ಯಾಣ್ ಅವರಿಂದ ದೂರ ಇದ್ದಾರೆ.

Actor Pawan Kalyan First Wife Nandini: ಟಾಲಿವುಡ್ ನ ಖ್ಯಾತ ನಟ ಪವನ್ ಕಲ್ಯಾಣ್ (Pawan Kalyan) ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಪವನ್ ಕಲ್ಯಾಣ್ ಟಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. 2009 ರಲ್ಲಿ ಅಣ್ಣಾ ಪ್ರಜಾ ರಾಜ್ಯಮ್ ಪಕ್ಷದ ಮೂಲಕ ಪವನ್ ಕಲ್ಯಾಣ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

2014 ರಲ್ಲಿ ತಮ್ಮದೇ ಆದ ಜನಸೇನಾ ಪಕ್ಷವನ್ನು ಸ್ಥಾಪಿಸಿದರು. ಈಗ 2019 ರ ಚುನಾವಣೆಯಲ್ಲಿ ಗಜುವಾಕ ಮತ್ತು ಭೀಮಾವರಂನಿಂದ ಶಾಸಕರಾಗಿ ಸ್ಪರ್ಧಿಸಿ ಸೋತಿದ್ದರು. ವಿರೋಧ ಪಕ್ಷಗಳ ನಾಯಕರು ಕೂಡ ಪವನ್ ಕಲ್ಯಾಣ್ ಮೂರೂ ಮದುವೆ ವಿಚಾರವನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ.

Pawan Kalyan First Wife Nandini
Image Source: Hindusthan Times

ಖ್ಯಾತ ನಟ ಪವನ್ ಕಲ್ಯಾಣ್ ಮೊದಲನೇ ಪತ್ನಿ ನಂದಿನಿ
ನಟ ಪವನ್ ಕಲ್ಯಾಣ್ ಎರಡನೇ ಪತ್ನಿ ರೇಣು ದೇಸಾಯಿ ಮತ್ತು ಮೂರನೇ ಪತ್ನಿ ಅನ್ನಾ ಲೆಜೆನೇವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಅವರ ಮೊದಲ ಪತ್ನಿ ನಂದಿನಿ ಬಗ್ಗೆ ಕೆಲವೇ ಕೆಲವು ಜನರಿಗೆ ಮಾತ್ರ ತಿಳಿದಿದೆ. ವಿಚ್ಛೇಧನದ ನಂತರ ಪವನ್ ಕಲ್ಯಾಣ್ ಅವರ ಮೊದಲ ಪತ್ನಿ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ.

Pawan Kalyan First Wife Nandini
Image Source: Pakka Filmy

ಪವನ್ ಕಲ್ಯಾಣ್ ಮೊದಲನೇ ಪತ್ನಿಯ ಒಟ್ಟು ಆಸ್ತಿ
ಪವರ್ ಸ್ಟಾರ್ ಪವನ್ ಕಲ್ಯಾಣ್ ವಿಚ್ಛೇಧನದ ನಂತರ ಅವರ ಮೊದಲ ಪತ್ನಿ ನಂದಿನಿ ತನ್ನ ಹೆಸರನ್ನು ಜಾನ್ ಎಂದು ಬದಲಾಯಿಸಿಕೊಂಡರು. 2010 ರಲ್ಲಿ ಡಾ. ಕೃಷ್ಣ ರೆಡ್ಡಿ ಅವರನ್ನು ವಿವಾಹವಾದರು. ಸದ್ಯ ಅವರು ಅಮೆರಿಕಾದಲ್ಲಿ ನೆಲೆಸಿದ್ದಾರೆ. ನಂದಿನಿ ಅವರು ಈಗ 200 ಕೋಟಿ ಒಡತಿಯಾಗಿದ್ದಾರೆ. 2 ನೇ ಪತಿಯ ಜೊತೆ ತನ್ನ ಜೀವನವನ್ನು ನಂದಿನಿ ಸಂತೋಷವಾಗಿ ಕಳೆಯುತ್ತಿದ್ದಾರೆ.

Pawan Kalyan First Wife Nandini
Image Source: News18

Join Nadunudi News WhatsApp Group

Join Nadunudi News WhatsApp Group